Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ, ಮನುಷ್ಯ ಎಂಥ ಜೀವನ ಸಂಗಾತಿಯನ್ನು ಹುಡುಕಬೇಕು. ಹೆಣ್ಣಿನ ಗುಣ ಹೇಗಿದ್ದರೆ ಚೆಂದ. ಹಣ ಉಳಿಸಲು ಏನು ಮಾಡಬೇಕು..? ಶ್ರೀಮಂತಿಕೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸೇರಿ ಇನ್ನೂ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದರೊಂದಿಗೆ, ಯಶಸ್ವಿ ಉದ್ಯಮಿಯಾಗಬೇಕು ಅಂದ್ರೆ, ಮನುಷ್ಯನಿಗೆ ಯಾವ ಗುಣವಿರಬೇಕು ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಗುಣ ಯಾವುದೇ ಕೆಲಸವನ್ನು ಮಾಡಲು ಸಿದ್ದವಾಗಿರಬೇಕು. ಅಂದ್ರೆ, ನಿಯತ್ತಿನಿಂದ, ಶ್ರಮ ಪಟ್ಟು ಮಾಡುವ ಯಾವುದೇ ಕೆಲಸ ಮಾಡಲು ಸಿದ್ಧವಾಗಿರಬೇಕು. ನಾನು ವಿದ್ಯೆ ಕಲಿತಿದ್ದೇನೆ. ಬೇರೆ ಕೆಲಸ ಮಾಡುವುದಿಲ್ಲವೆಂದು ಹಠ ಹಿಡಿದರೆ, ಅಂಥವರೆಂದೂ ಉದ್ಧಾರವಾಗಲು ಸಾಧ್ಯವಾಗುವುದಿಲ್ಲ. ಇಂದಿನ ಕಾಲದಲ್ಲಿ ಎಷ್ಟೋ ವಿದ್ಯಾವಂತರು, ಹೊಟೇಲ್, ಟೀ ಅಂಗಡಿ, ಬಟ್ಟೆ ಅಂಗಡಿ ಇಟ್ಟು ಶ್ರೀಮಂತರಾಗಿದ್ದಾರೆ.
ಎರಡನೇಯ ಗುಣ ಮಾತು ಉತ್ತಮವಾಗಿರಬೇಕು. ನಾವು ಯಶಸ್ವಿ ಉದ್ಯಮಿಯಾಗಬೇಕು ಅಂದ್ರೆ, ನಮ್ಮ ಮಾತು ಇನ್ನೊಬ್ಬರ ಗಮನ ಸೆಳೆಯುವಂತಿರಬೇಕು. ಇನ್ನೊಬ್ಬರು ನಮ್ಮ ಮಾತಿಗೆ ಸೋತು, ನಮ್ಮ ಬಳಿ ವಸ್ತುಗಳನ್ನು ಖರೀದಿಸಬೇಕು. ಅಥವಾ ನಮಗೆ ಕೆಲಸ ಕೊಡಬೇಕು. ಆ ರೀತಿ ನಿಮ್ಮ ಮಾತಿರಬೇಕು. ಉದಾಹರಣೆಗೆ ಓರ್ವ ಬಟ್ಟೆ ವ್ಯಾಪಾರಿಯ ಮಾತು ಚೆಂದವಾಗಿದ್ದರೆ, ಅವನ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಅವರು ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಟ್ಟು ಹೋಗಿ ಎಂಬಂತೆ ಮಾತನಾಡಿದರೆ, ಅಂಥವನ ಅಂಗಡಿಗೆ ಯಾರೂ ಹೋಗುವುದಿಲ್ಲ. ಹಾಗಾಗಿ ಮಾತು ಮೃದುವಾಗಿರಬೇಕು ಅಂತಾರೆ ಚಾಣಕ್ಯರು.
ಮೂರನೇಯ ಗುಣ ಎಲ್ಲಿಯಾದರೂ ಕೆಲಸ ಮಾಡುವ ಛಲವಿರಬೇಕು. ಈ ಮೊದಲೇ ಹೇಳಿದಂತೆ, ನಾನು ವಿದ್ಯೆ ಕಲಿತಿದ್ದೇನೆ. ದೊಡ್ಡ ಕಂಪನಿಯಲ್ಲೇ ಕೆಲಸ ಮಾಡಬೇಕು ಅಂತಾ ಹಠ ಹಿಡಿದರೆ, ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನೀವು ಸಣ್ಣ ಕಂಪನಿಯಲ್ಲಿ ಕೆಲಸ ಸಿಕ್ಕರೂ, ಸಣ್ಣ ಸಣ್ಣ ಅವಕಾಶ ಸಿಕ್ಕರೂ, ಅದನ್ನು ಬಳಸಿಕೊಳ್ಳುವ ಬುದ್ಧಿ ಬೆಳೆಸಿಕೊಳ್ಳಬೇಕು. ಆಗಲೇ ನೀವು ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗೋದು.

