Spiritual: ಚಾಣಕ್ಯ ನೀತಿಯಲ್ಲಿ ಹೇಗೆ ಚಾಣಕ್ಯರು ಜೀವನ ಪಾಠವನ್ನು ಹೇಳುತ್ತಾರೋ, ಅದೇ ರೀತಿ, ವಿದುರ ನೀತಿಯಲ್ಲಿ ವಿದುರರು ಕೂಡ, ಜೀವನಕ್ಕೆ ಸಂಬಂಧಿಸಿದಂತೆ ಕೆಲವು ನೀತಿಗಳನ್ನು ಹೇಳಿದ್ದಾರೆ. ಶ್ರೀಮಂತರಾಗಬೇಕು ಎಂದಲ್ಲಿ, ಜನ ವಿದುರನ ಕೆಲ ಮಾತುಗಳನ್ನು ಕೇಳಬೇಕಂತೆ. ಹಾಗಾದ್ರೆ ಅದು ಯಾವ ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಕಷ್ಟಪಟ್ಟಾಗ ಮಾತ್ರ ಫಲ ಸಿಗುತ್ತದೆ. ಹಾಗಾಗಿ ಶ್ರಮ ಪಟ್ಟು ಕೆಲಸ ಮಾಡಿದಾಗ ಮಾತ್ರ, ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರುತ್ತಾಳೆ. ಹಾಗಾಗಿ ಅಡ್ಡ ದಾರಿ ಹಿಡಿಯದೇ, ಕಷ್ಟಪಟ್ಟು ದುಡಿದು ಹಣ ಗಳಿಸಿ ಎಂಬುದು ವಿದುರನ ಮಾತು.
ಎರಡನೇಯದಾಗಿ, ನಾವು ಹೇಗೆ ಹಣ ಗಳಿಸುತ್ತೇವೋ, ಅದೇ ರೀತಿ ಉಳಿತಾಯ ಮಾಡುವುದನ್ನೂ ಕಲಿಯಬೇಕು. ನೀವು ಗಳಿಸಿದ ದುಡಿಮೆಯಲ್ಲಿ ಸಣ್ಣ ಪ್ರಮಾಣದಲ್ಲಿ ದಾನ ಮಾಡಬೇಕು. ಅವಶ್ಯಕತೆ ಇದ್ದಷ್ಟು ಮಾತ್ರ ಖರ್ಚಿಗೆ ಬಳಸಬೇಕು. ಉಳಿದ ಹಣವನ್ನು, ಕಷ್ಟಕಾಲಕ್ಕಾಗಿ ಉಳಿತಾಯ ಮಾಡಬೇಕು. ಹಾಗೆ ಮಾಡಿದಾಗ, ಹಣದ ಅವಶ್ಯಕತೆ ಇದ್ದಾಗ, ನಾವು ಯಾರಲ್ಲಿಯೂ ಬೇಡುವ ಸ್ಥಿತಿ ಬರುವುದಿಲ್ಲ.
ಮೂರನೇಯದಾಗಿ, ನಿಮ್ಮ ಸಂತೋಷಕ್ಕಿಂತ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ವಿದುರ ನೀತಿಯ ಪ್ರಕಾರ, ದುಡಿದು ದುಡ್ಡನ್ನು ಅಗತ್ಯಕ್ಕಿಂತ ಹೆಚ್ಚು, ನಿಮ್ಮ ಸಂತೋಷಕ್ಕಾಗಿ ಬಳಸಿಕೊಂಡಾಗ, ಭವಿಷ್ಯದಲ್ಲಿ ನೀವು ದುಃಖಿಸಬೇಕಾಗುತ್ತದೆ. ಇದರ ಅರ್ಥ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು. ನಾಳೆ ಏನಿದೆ, ಇಂದೇ ಜೀವನವನ್ನು ಆನಂದಿಸೋಣವೆಂದಲ್ಲಿ, ನಾಳೆ ಕಷ್ಟದ ಪರಿಸ್ಥಿತಿ ಎದುರಾಗಬಹುದು. ಆ ರೀತಿ ದುಃಖಿಸಿ, ಸಾಲ ಬೇಡಿ ಮಾತ ಕಳೆದುಕೊಳ್ಳುವ ಬದಲು, ಇಂದಿನಿಂದಲೇ, ಹಣ ಉಳಿತಾಯ ಮಾಡಿ.