Friday, October 18, 2024

Latest Posts

ನೀವು ಈ ಪರಿಸರಕ್ಕೆ ಕೊಡುಗೆ ಕೊಡುವುದಿದ್ದಲ್ಲಿ ಹೀಗೆ ಮಾಡಿ..

- Advertisement -

Health Tips: ನಮ್ಮ ಸುತ್ತಮುತ್ತಲ ಪರಿಸರ ಉತ್ತಮವಾಗಿರಬೇಕು ಅಂದ್ರೆ, ನಮ್ಮ ಮನೆಯನ್ನ ನಾವು ಸ್ವಚ್ಛವಾಗಿಡಬೇಕು. ಬಳಿಕ ನಮ್ಮ ಮನೆಯ ಸುತ್ತಮುತ್ತಲು ಕ್ಲೀನ್ ಆಗಿ ಇರಿಸಬೇಕು. ಈ ರೀತಿಯಾಗಿದ್ದರೆ, ಪರಿಸರ ತನ್ನಿಂದ ತಾನೇ ಸ್ವಚ್ಛವಾಗಿರುತ್ತದೆ. ಹಾಗೆ ನೀವು ಕೂಡ ನಿಮ್ಮ ಮನೆ, ಮನೆಯ ಸುತ್ತಮುತ್ತಲೂ ಕ್ಲೀನ್ ಆಗಿ ಇರುವುದರ ಜೊತೆಗೆ, ನೀವು ಮೂರು ಕೆಲಸ ಮಾಡಿದರೆ, ಪರಿಸರಕ್ಕೆ ನೀವು ಅತ್ಯುತ್ತಮವಾದ ಕೊಡುಗೆ ಕೊಡಬಹುದು. ಹಾಗಾದ್ರೆ ಯಾವುದು ಆ ಮೂರು ಕೆಲಸ ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕೆಲಸ, ಹೆಣ್ಣು ಮಕ್ಕಳು ಪ್ಲಾಸ್ಟಿಕ್ ಪ್ಯಾಡ್ ಬಳಸುವ ಬದಲು, ಬಟ್ಟೆಯ ಪ್ಯಾಡ್‌ ಬಳಸಿ. ಮಕ್ಕಳಿಗೆ ಬಳಸಿ ಬಿಸಾಡುವ ಡೈಪರ್ ಬದಲು, ಬಟ್ಟೆಯ ಡೈಪರ್ ಬಳಸಿ. ಬಟ್ಟೆಯ ಪ್ಯಾಡ್ ಮತ್ತು ಡೈಪರನ್ನು ನೀವು ಪುನಃ ಬಳಸಬಹುದು. ಮತ್ತು ಅದು ಹಳೆಯದಾದ ಬಳಿಕ ಬಿಸಾಕಿದರೂ, ಕೆಲ ದಿನಗಳಲ್ಲೇ ಕರಗಿ ಹೋಗುತ್ತದೆ. ಆದರೆ ಪ್ಲಾಸ್ಟಿಕ್ ಡೈಪರ್ ಮತ್ತು ಪ್ಯಾಡ್ ಬಿಸಾಕಿದರೂ ಹಲವು ವರ್ಷಗಳ ಕಾಲ, ಕರಗುವುದಿಲ್ಲ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ಬಟ್ಟೆಯ ಪ್ಯಾಡ್‌, ಡೈಪರ್ ಬಳಸಿ. ಇದು ಆರೋಗ್ಯಕ್ಕೂ ಉತ್ತಮ.

ಎರಡನೇಯ ಕೆಲಸ ಸ್ಟ್ರಾ ಬಳಸುವಾಗ, ಸ್ಟೀಲ್, ಬಾಂಬೂ ಸ್ಟ್ರಾ ಬಳಸಿ. ಪ್ಲಾಸ್ಟಿಕ್ ಸ್ಟ್ರಾ ಬೇಗ ಕರಗುವುದಿಲ್ಲ. ಇದು ಪರಿಸರಕ್ಕೂ, ಪ್ರಾಣಿಗಳಿಗೂ ಹಾನಿ ಮಾಡುತ್ತದೆ. ಸ್ಟೀಲ್, ಬಾಂಬೂ ಸ್ಟ್ರಾಗಳನ್ನ ಪುನಃ ಬಳಸಬಹುದು. ಇಷ್ಟೇ ಅಲ್ಲದೇ, ಸ್ಟ್ರಾ ಬಳಸದೇ, ಪಾನೀಯಗಳನ್ನು ಕುಡಿಯುವುದು ಅಭ್ಯಾಸ ಮಾಡಿ.

ಮೂರನೇಯ ಕೆಲಸ ಪ್ಲಾಸ್ಟಿಕ್‌ ಬ್ರಶ್ ಬದಲು, ಮರದ ಬ್ರಶ್ ಬಳಸಿ. ಇದನ್ನು ಎಷ್ಟು ದಿನವಾದರೂ ಬಳಸಬಹುದು. ಇದನ್ನು ಬಿಸಾಕಿದರೂ, ಅದು ಬೇಗ ಕರಗಿ ಹೋಗುತ್ತದೆ. ಆದರೆ ನೀವು ಪ್ಲಾಸ್ಟಿಕ್ ಬ್ರಶ್ ಬಿಸಾಕಿದರೂ, ಅದು ಸುಮಾರು ವರ್ಷ ಕರಗುವುದಿಲ್ಲ. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ವಸ್ತು ಬಳಕೆ ಮಾಡುವುದನ್ನು ನಿಲ್ಲಿಸಿ. ಇದು ಬರೀ ಪರಿಸರಕ್ಕೆ ಅಷ್ಟೇ ಅಲ್ಲದೇ, ನಿಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ.

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Latest Posts

Don't Miss