Health Tips: ಹಲವರು ಬದುಕಿದ್ದಾಗ ರಕ್ತದಾನ ಮಾಡುತ್ತಾರೆ. ಕೆಲವರು ಸತ್ತ ಮೇಲೆ ಕಣ್ಣು ದಾನ, ಹೃದಯ ದಾನ, ಕಿಡ್ನಿ ದಾನ ಅಥವಾ ಇಡೀ ದೇಹವನ್ನೇ ದಾನ ಮಾಡಬಹುದು. ಆದರೆ ಚರ್ಮ ದಾನ ಕೂಡ ಮಾಡಬಹುದು ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಚರ್ಮದಾನ ಮಾಡಲು ಏನೇನು ಅರ್ಹತೆ ಇರಬೇಕು. ಚರ್ಮದಾನ ಮಾಡುವುದು ಹೇಗೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
18 ವಯಸ್ಸು ದಾಟಿದವರು ಯಾರು ಬೇಕಾದರೂ ಚರ್ಮ ದಾನ ಮಾಡಬಹುದು. ಆದರೆ ಅವರು ಯಾವುದೋ ಚರ್ಮದ ಖಾಯಿಲೆಯಿಂದ ಮರಣ ಹೊಂದಿರಬಾರದು. ಚರ್ಮಕ್ಕೆ ಯಾವುದೇ ಹಾನಿಯಾಗದಿದ್ದಲ್ಲಿ ಮಾತ್ರ ಚರ್ಮವನ್ನು ದಾನ ಮಾಡಬಹುದು. ಆ ಚರ್ಮವನ್ನು ವೈದ್ಯರು ಸರಿಯಾಗಿ ಪರೀಕ್ಷಿಸಿ, ಸುಟ್ಟ ದೇಹದವರಿಗೆ, ಚರ್ಮದ ಕಸಿ ಮಾಡಿ, ಹೊಸ ಚರ್ಮ ಕೂರಿಸಿ. ಅವರಿಗೆ ಜೀವನ ನೀಡುತ್ತಾರೆ.
ಆದರೆ ಚರ್ಮದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಎನ್ನುತ್ತಾರೆ ವೈದ್ಯರು. ಚರ್ಮ ದಾನ ಮಾಡಬಯಸುವವರು ಆನ್‌ಲೈನ್ ಮೂಲಕ ಕೂಡ ಚರ್ಮದಾನ ಮಾಡಬಹುದು. ಅಥವಾ ಆಸ್ಪತ್ರೆಗೆ ಬಂದು ನಾವು ನಮ್ಮ ಮರಣದ ಬಳಿಕ ಚರ್ಮ ದಾನ ಮಾಡುತ್ತೇವೆ ಎಂದು ಹೇಳಬಹುದು. ಆದರೆ ಆ ವಿಷಯ ನಿಮ್ಮ ಮನೆಯವರಿಗೆ ಗೊತ್ತಿರಬೇಕು.
ನಿಮ್ಮ ಮರಣವಾದಾಗ, ಮನೆಯವರು ಆಸ್ಪತ್ರೆಯವರಿಗೆ ವಿಷಯ ತಿಳಿಸಿದರೆ, ಅವರು ಯಾವ ರೀತಿ ಚರ್ಮ ಪಡೆಯಬೇಕೋ, ಹಾಗೆ ಚರ್ಮ ಪರೀಕ್ಷೆ ಮಾಡಿ, ಚರ್ಮವನ್ನು ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..