Food Adda: ದೋಸೆ ಅಂದ್ರೆ , ಹಲವರ ಫೇವರಿಟ್ ಬ್ರೇಕ್ಫಾಸ್ಟ್. ನಾವು ನೀವು ದೋಸೆಯಲ್ಲಿ 6ರಿಂದ 7 ವಿಧಗಳನ್ನು ಕೇಳಿರ್ತೀವಿ. ಖಾಲಿ ದೋಸೆ, ಮಸಾಲೆ ದೋಸೆ, ಖಾರಾ ದೋಸೆ, ಈರುಳ್ಳಿ ದೋಸೆ, ರವಾ ದೋಸೆ ಹೀಗೆ ಹಲವು ವೆರೈಟಿಗಳಿದೆ. ಆದರೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಿಮಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತದೆ. ಹಾಗಾದ್ರೆ ಈ ಹೊಟೇಲ್ ಎಲ್ಲಿದೆ. ಇಲ್ಲಿನ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಬೆಂಗಳೂರಿನ ಸಹಕಾರನಗರ ಫುಡ್ ಸ್ಟ್ರೀಟ್ನ, ಕಲ್ಪತರು ವೆರೈಟಿ ದೋಸಾ ಹೊಟೇಲ್ನಲ್ಲಿ ನಿಮಗೆ 60ಕ್ಕೂ ಹೆಚ್ಚು ಬಗೆಯ ದೋಸೆ ಸಿಗುತ್ತದೆ. ಹೊಟೇಲ್ ಅಂದ್ರೆ, ಚಿಕ್ ಫುಡ್ ಸ್ಟಾಲ್ ಇಡಲಾಗಿದೆ. ಇಲ್ಲಿ ನಾರ್ಮಲ್ ದೋಸೆಗಳಿಗಿಂತ ವಿಭಿನ್ನವಾಗಿರುವ ದೋಸೆ ರುಚಿ ನೋಡಬಹುದು. ಚೀಸ್ ಕಾರ್ನ್ ದೋಸೆ, ಪಿಜ್ಜಾ ದೋಸೆ, ಬಟರ್ ಸಾದಾ ದೋಸೆ, ಚೀಸ್ ಸಾದಾ ದೋಸೆ, ಶೆಜ್ವಾನ್ ಚೀಸ್ ದೋಸೆ, ಪನೀರ್ ಚೀಸ್ ದೋಸೆ ಹೀಗೆ ಬೇರೆ ಬೇರೆ ವಿಧದ ದೋಸೆಗಳನ್ನು ಮಾರಾಟ ಮಾಡಲಾಗುತ್ತದೆ.
ಇಲ್ಲಿ ಸಿಗುವ ದೋಸೆ ಬೆಲೆ ಕೇವಲ 30 ರೂಪಾಯಿಯಿಂದ ಶುರುವಾಗುತ್ತದೆ. 120 ರೂಪಾಯಿಯ ದೋಸೆ ಕೂಡ ಇಲ್ಲಿ ಸಿಗುತ್ತದೆ. ಆದರೆ ಬೆಳಿಗ್ಗೆ ಬಂದಾಗ, ಈ ದೋಸೆ ನಿಮಗೆ ಸಿಗೋದು ಡೌಟು. ಇಲ್ಲಿನ ಫುಡ್ ಸ್ಟ್ರೀಟ್ ಸಂಜೆ 4 ಗಂಟೆಯ ಮೇಲೆ ಓಪನ್ ಆಗುವುದರಿಂದ, ಇಲ್ಲಿ ನಿಮಗೆ 5 ಗಂಟೆಯ ಬಳಿಕವೇ ವೆರೈಟಿ ವೆರೈಟಿ ದೋಸೆ ತಿನ್ನಲು ಸಿಗುತ್ತದೆ. ರಾತ್ರಿ 11 ಗಂಟೆಯವರೆಗೂ ನಿಮಗೆ ದೋಸೆ ಸವಿಯಲು ಸಿಗುತ್ತದೆ.
ಹೊಟೇಲ್ ಶುರು ಮಾಡಿ, 8 ವರ್ಷವಾಗಿದ್ದು, ಗ್ರಾಹಕರು ಉತ್ತಮ ರೆಸ್ಪಾನ್ಸ್ ಕೊಡುತ್ತಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ಈ ಹೊಟೇಲ್ ಬಗ್ಗೆ, ಇಲ್ಲಿ ಸಿಗುವ ದೋಸೆಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದ್ದಲ್ಲಿ, ಈ ವೀಡಿಯೋ ನೋಡಿ..
ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?
ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?