Thursday, December 12, 2024

Latest Posts

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

- Advertisement -

Food Adda: ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದರೆ ಸಿಲಿಕಾನ್ ಸಿಟಿ ಮಂದಿಗೆ ಹೊಟೇಲ್, ರೆಸ್ಟೋರೆಂಟ್ ತಿಂಡಿ. ಊಟ ಟೇಸ್ಟ್ ಮಾಡಿ ಮಾಡಿ ಬೋರ್ ಬಂದಿರತ್ತೆ. ಹಾಗಾಗಿ ನಾವಿಂದು ಮನೆ ರುಚಿ ಕೊಡುವ ಐಸ್‌ಕ್ರೀಮ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಕೆಂಗೇರಿ, ರಿಂಗ್‌ ರೋಡ್‌ನಲ್ಲಿ ಸತ್ಕಾರ್ ಐಸ್‌ಕ್ರೀಮ್ಸ್ ನಲ್ಲಿ ನಿಮಗೆ ಹೋಮ್‌ಮೇಡ್ ಐಸ್‌ಕ್ರೀಮ್ ಸಿಗತ್ತೆ. ತಿಮ್ಮಣ್ಣ ಎಂಬುವವರು ಈ ಐಸ್‌ಕ್ರೀಮ್‌ ಪಾರ್ಲರ್‌ನ್ನು ಶುರು ಮಾಡಿದ್ದು, ಇವರಿಗೆ ಇವರ ಕುಟುಂಬಸ್ಥರು ಸಾಥ್ ನೀಡುತ್ತಿದ್ದಾರೆ. ತಿಮ್ಮಣ್ಣ ಅವರ ಕುಟುಂಬಸ್ಥರೆಲ್ಲ ಸೇರಿ, ಸತ್ಕಾರ್ ಐಸ್‌ಕ್ರೀಮ್ಸ್‌ನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ತಿಮ್ಮಣ್ಣ ಅವರು, ಕೆಂಗೇರಿಯ ಸುತ್ತ ಮುತ್ತ ಇರುವವರು, ಇಲ್ಲಿ ತುಂಬಾ ಜನ ಬರುತ್ತಾರೆ. ಇಲ್ಲಿರುವವರು ನೆಲಮಂಗಲಕ್ಕೆ ಶಿಫ್ಟ್ ಆಗಿದ್ದರೂ ಕೂಡ, ಇಲ್ಲಿವರೆಗೆ ಬಂದು ಐಸ್‌ಕ್ರೀಮ್ ಪಾರ್ಸೆಲ್ ತೆಗೆದುಕೊಂಡು ಹೋಗ್ತಾರೆ. ಬಾಕ್ಸ್ ಬಾಕ್ಸ್‌ಗಟ್ಟಲೆ ಐಸ್‌ಕ್ರೀಮ್ ತೆಗೆದುಕೊಂಡು ಹೋಗಿ, ವಾರಪೂರ್ತಿ ಇರಿಸಿಕೊಂಡು ತಿನ್ನುತ್ತಾರೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ಅಂಗಡಿಯನ್ನು ತಿಮ್ಮಣ್ಣ, ಅವರ ಮಡದಿ ಮತ್ತು ಮಗ ಮೂವರೇ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ತಿಮ್ಮಣ್ಣ ಅವರು ಹೇಳಿದಂತೆ, ಇಲ್ಲಿ ಮ್ಯಾನ್ ಪವರ್‌ಗಿಂತ, ಫ್ಯಾಮಿಲಿ ಪವರ್ ಇದೆ ಎಂದಿದ್ದಾರೆ.  ಅಲ್ಲದೇ, ಅಂಗಡಿಯ ನೆಲಮಹಡಿಯಲ್ಲೇ ಐಸ್‌ಕ್ರೀಮ್ ತಯಾರಿಸಲಾಗುತ್ತದೆ. ಅದಕ್ಕಾಗಿ ಎರಡರಿಂದ ಮೂರು ಬೇರೆ ಬೇರೆ ರೀತಿಯ ಮಷಿನ್‌ಗಳನ್ನು ಇರಿಸಲಾಗಿದೆ. ಇಲ್ಲಿ ಗಡಬಡ್, ಕಪ್ ಐಸ್‌ಕ್ರೀಮ್, ಕ್ಯಾಂಡೀಸ್, ಫ್ಯಾಮಿಲಿ ಪ್ಯಾಕ್, ಜ್ಯೂಸ್, ಮಿಲ್ಕ್‌ಶೇಕ್ ಕೂಡ ಸಿಗುತ್ತದೆ.

ಇನ್ನು ಇಲ್ಲಿ ಬಳಸುವ ಹಾಲನ್ನು ಸರಿಯಾಗಿ ಕಾಯಿಸಿದ ಬಳಿಕವೇ ಬಳಸಲಾಗುತ್ತದೆ ವಿನಃ ಹಸಿ ಹಸಿ ಹಾಲನ್ನು ಬಳಸುವುದಿಲ್ಲ. ಇನ್ನು ಇಲ್ಲಿ ಯಾವ ರೀತಿಯಾಗಿ ಐಸ್‌ಕ್ರೀಮ್ ತಯಾರಿಸಲಾಗುತ್ತದೆ. ಇಲ್ಲಿ ಸಿಗುವ ಐಸ್‌ಕ್ರೀಮ್ ಟೇಸ್ಟ್ ಹೇಗಿರತ್ತೆ..? ಈ ಐಸ್‌ಕ್ರೀಮ್ ಪಾರ್ಲರ್‌ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss