Monday, April 21, 2025

Latest Posts

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

- Advertisement -

Health: ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯವಾಗಿರಬೇಕಾದ ದೇಹದ ಭಾಗವೆಂದರೆ, ಹೃದಯ, ಮೆದುಳು, ಜೀರ್ಣಾಂಗ ಮತ್ತು ಮೂಳೆ. ಈ ಅಂಗಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ, ಜೀವಕ್ಕೆ ಅಪಾಯ. ಹಾಗಾಗಿ ನಾವಿಂದು ಮೂಳೆಯ ಆರೋಗ್ಯ ಸರಿಯಾಗಿ ಇರಬೇಕು ಎಂದಲ್ಲಿ ಯಾವ ಯೋಗ ಮಾಡಬೇಕು ಎಂದು ಹೇಳಲಿದ್ದೇವೆ.

ಮೊದಲನೇಯದಾಗಿ, ದಿನಕ್ಕೆ 10 ನಿಮಿಷ ಸ್ಕಿಪ್ಪಿಂಗ್ ಆಡಿದರೆ, ನಿಮ್ಮ ಮೂಳೆ ಉತ್ತಮವಾಗಿರುತ್ತದೆ. ಆರೋಗ್ಯಕರವಾಗಿರುತ್ತದೆ. ದಿನಕ್ಕೆ 30 ಸೆಕೆಂಡ್‌ಗಳ ಕಾಲ ಸ್ಕಿಪ್ಪಿಂಗ್ ಆಡುವುದರಿಂದ, ನಿಮ್ಮ ಮೂಳೆಯ ಆರೋಗ್ಯ ಚೆನ್ನಾಗಿರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಗ್ಯಾಪ್ ತೆಗೆದುಕೊಂಡು 10 ನಿಮಿಷ ಸ್ಕಿಪ್ಪಿಂಗ್ ಆಡಿದರೆ, ಮೂಳೆಯ ಜೊತೆಗೆ, ಹೊಟ್ಟೆಯ ಆರೋಗ್ಯವೂ ಉತ್ತಮವಾಗುತ್ತದೆ. ನಿಮ್ಮ ಬಳಿ ಸ್ಕಿಪ್ಪಿಂಗ್ ಹಗ್ಗವಿಲ್ಲದಿದ್ದರೂ, ನೀವು ಬರೀ ಜಂಪ್ ಮಾಡಬಹುದು.

ಎರಡನೇಯದಾಗಿ ಬೌನ್ಸಿಂಗ್ ಬಾಲ್ ಮೇಲೆ ಕುಳಿತು ನೀವು ಎಕ್ಸಸೈಜ್ ಮಾಡುವ ಮೂಲಕ, ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾಲ್‌ ಮೇಲೆ ಕುಳಿತು ನೀವು ಜಂಪ್ ಮಾಡಿದರೂ, ನೀವು ಗಟ್ಟಿಮುಟ್ಟಾಗಿರುತ್ತೀರಿ.

ವಿಶೇಷ ಸೂಚನೆ ಎಂದರೆ, ಈಗಾಗಲೇ ಮೂಳೆ ನೋವು ಇರುವವರು, ಗರ್ಭಿಣಿಯರು, ಬ್ಯಾಲೆನ್ಸ್ ಮಾಡಲು ಕಷ್ಟವಾಗುವವರು ಈ ವ್ಯಾಯಾಮಗಳನ್ನು ಮಾಡುವಂತಿಲ್ಲ. ಅಂಥವರು ವಾಕಿಂಗ್, ಯೋಗಾಸನಗಳನ್ನು ಮಾಡುವುದು ಒಳಿತು.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..

- Advertisement -

Latest Posts

Don't Miss