ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

Beauty tips: ನಾವು ನಮ್ಮ ತ್ವಚೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ಕೆಲವು ಸಲ ಮುಖದ ಕಳೆ ಕೆಟ್ಟು ಹೋಗುತ್ತದೆ. ಇದಕ್ಕಾಗಿ ಹಲವರು ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ನೀವು ಮನೆಮದ್ದು ಮಾಡುವುದೇ ಉತ್ತಮ. ಇದರಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಇಂದು ನಾವು ನೈಟ್ ಸ್ಕಿನ್ ಕೇರ್ ಹೋಮ್‌ ರೆಮಿಡಿ ಬಗ್ಗೆ ಹೇಳಲಿದ್ದೇವೆ.

ಜೇನುತುಪ್ಪ ಮತ್ತು ರೋಸ್‌ವಾಟರ್ ಬಳಸಿ ನೀವು ಈ ಫೇಸ್‌ ಸೇರಮ್ ತಯಾರು ಮಾಡಬೇಕು. ಇವೆರಡು ಪದಾರ್ಥಗಳು ತ್ವಚೆಗೆ ಅತ್ಯುತ್ತಮವಾಗಿದ್ದು, ಇದನ್ನು ಅಪ್ಲೈ ಮಾಡುವುದರಿಂದ ತ್ವಚೆ ಸಾಫ್ಟ್, ಕೆಲರಹಿತ, ಚೆಂದವಾಗುತ್ತದೆ. ಅರ್ಧ ಕಪ್ ರೋಸ್ ವಾಟರ್, 1 ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ. ಇದನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿಸಿ ಒಂದು ದಿನ ಬಿಡಿ.

ಬಳಿಕ ಪ್ರತಿದಿನ ರಾತ್ರಿ ಮಲಗುವಾಗ ಇದನ್ನು ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಿ. ಈ ಸೇರಮ್‌ನ್ನು ನೀವು ಫ್ರಿಜ್‌ನಲ್ಲಿ ಇರಿಸಬೇಕು. ನೀವು ಬೇಕಾದರೆ ಡೈರೆಕ್ಟ್ ಮುಖಕ್ಕೆ ಅಪ್ಲೈ ಮಾಡುವ ಬದಲು, ಮೊದಲು ಕೈಗೆ ಅಪ್ಲೈ ಮಾಡಿ, ಒಂದು ರಾತ್ರಿ ಬಿಡಿ. ಅಲರ್ಜಿಯಾಗದಿದ್ದಲ್ಲಿ, ಮುಖಕ್ಕೆ ಬಳಸಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

About The Author