Friday, December 5, 2025

Latest Posts

ಮನೆಯಲ್ಲಿ ಚಪ್ಪಲಿ ಹಾಕಿ ಓಡಾಡಿದರೆ ಏನಾಗತ್ತೆ ಗೊತ್ತಾ..?

- Advertisement -

ಕೆಲವರಿಗೆ ಮನೆಯಲ್ಲಿ ಚಪ್ಪಲಿ ಹಾಕೋದು ಒಂದು ಶೋಕಿ. ಹೆಚ್ಚಾಗಿ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ಚಪ್ಪಲಿ ಧರಿಸಿ ಓಡಾಡುತ್ತಾರೆ. ಆದ್ರೆ ಹಿಂದೂ ಧರ್ಮದ ಪದ್ಧತಿಯ ಪ್ರಕಾರ, ಎಂದಿಗೂ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಹಾಗಾದ್ರೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಿದ್ರೆ, ಏನಾಗತ್ತೆ..? /ಯಾಕೆ ಮನೆಯಲ್ಲಿ ಚಪ್ಪಲಿ ಧರಿಸಿ, ಓಡಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹಿಂದೂ ಧರ್ಮದಲ್ಲಿ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಧೂಳು, ಕಸವಿರದಂತೆ, ನೋಡಿಕೊಳ್ಳಬೇಕು. ಮನೆಯ ಮೂಲೆ ಮೂಲೆಯಲ್ಲಿರುವ ಜೇಡರ ಬಲೆಯನ್ನು ಆಗಾಗ ತೆಗೆಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹೀಗೆ ಮನೆ ಕ್ಲೀನ್ ಇಲ್ಲದಿದ್ದಲ್ಲಿ, ಭಾಗ್ಯ ಲಕ್ಷ್ಮೀ ಬಂದು ನೆಲೆಸುವ ಬದಲು, ದರಿದ್ರ ಲಕ್ಷ್ಮೀ ಬಂದು ನೆಲೆಸುತ್ತಾಳೆ.

ಇಷ್ಟೇ ಅಲ್ಲದೇ, ನೀವು ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಿದ್ರೆ, ಮನೆಯಲ್ಲಿ ಎಂದಿಗೂ ಸಕಾರಾತ್ಮಕ ಶಕ್ತಿ ಇರಲು ಸಾಧ್ಯವಿಲ್ಲ. ಹಾಗಾಗಿ ಅಂಥ ಮನೆಯಲ್ಲಿ ಜನ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ. ಹೆಚ್ಚಾಗಿ ಹಾಸ್ಟೇಲ್ ಅಥವಾ ಪಿಜಿಗಳಲ್ಲಿ ಹೆಣ್ಣು ಮಕ್ಕಳು ಸ್ಟೈಲಿಗೆ ಚಪ್ಪಲಿ ಹಾಕೊಂಡು ಓಡಾಡ್ತಿರ್ತಾರೆ. ಅದೇ ಚಪ್ಪಲಿಯಲ್ಲಿ ಊರು ಸುತ್ತಿ ಬಂದು, ಅದೇ ಚಪ್ಪಲಿಯಲ್ಲಿ ರೂಮಲ್ಲಿ ಓಡಾಡುತ್ತಾರೆ. ಅಂಥ ಜಾಗದಲ್ಲಿ ಪ್ರತೀದಿನ ಜಗಳವಾಗುತ್ತಿರುತ್ತದೆ.

ಅಂಥ ಜಾಗದಲ್ಲಿರುವ ಜನರಿಗೆ ನೆಮ್ಮದಿಯೇ ಇರುವುದಿಲ್ಲ. ಅದರಲ್ಲೂ ನೀವು ಚಪ್ಪಲಿ ಹಾಕಿಕೊಂಡು ಬಚ್ಚಲು ಕೋಣೆಗೆ ಹೋಗಿ, ಅದೇ ಚಪ್ಪಲಿಯಲ್ಲಿ ಅಡಿಗೆ ಕೋಣೆಗೆ ಹೋದ್ರೆ, ಅದಕ್ಕಿಂತ ದೊಡ್ಡ ದರಿದ್ರ ಮತ್ತೊಂದಿಲ್ಲ. ಇದು ಅನ್ನಪೂರ್ಣೇಶ್ವರಿಗೆ ಮಾಡುವ ಅವಮಾನ. ನೀವು ಈ ತಪ್ಪು ಮಾಡಿದ್ರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದು ಸತ್ಯ.

- Advertisement -

Latest Posts

Don't Miss