Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಕೈ ಕಾಲು ಮರಗಟ್ಟಿದರೆ ಏನು ಮಾಡಬೇಕು..? ಅದನ್ನು ಯಾಕೆ ನಿರ್ಲಕ್ಷಿಸಬಾರದು ಅಂತಾ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಬೀಡಿ, ಸಿಗರೇಟು ಸೇದುವ ಪುರುಷರಿಗೆ ಕಾಲುಗಳಿಗೆ ಹೇಗೆ ನೋವು ಬರುತ್ತದೆಯೋ, ಅದೇ ರೀತಿ ಮಹಿಳೆಯರಿಗೆ ಕೈ ನೋವು ಬರುತ್ತದೆ. ಏಕೆಂದರೆ, ಮಹಿಳೆಯರು ಚಳಿಗಾಲದಲ್ಲಿ, ತಣ್ಣೀರಿನಲ್ಲಿ ಕೆಲಸ ಮಾಡುತ್ತಾರೆ. ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು, ಅಡಿಗೆ ಮಾಡುವಾಗಲೂ ತಣ್ಣೀರುವ ಬಳಸಬೇಕಾಗುತ್ತದೆ. ಈ ವೇಳೆ ಕೈ ನೋವು ಬರುತ್ತದೆ.
ಹಾಗಾಗಿ ಹೆಚ್ಚು ತಣ್ಣೀರು ಬಳಸಬಾರದು. ಉಗುರು ಬೆಚ್ಚಗಿನ ನೀರು ಬಳಸಿ. ಇಲ್ಲವಾದಲ್ಲಿ ಕೈ ಕಾಲು ಮರಗಟ್ಟಿದ ಹಾಗೆ ಆಗುತ್ತದೆ. ಈ ವೇಳೆ ನೀವು ತಪ್ಪದೇ, ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ. ನೀವು ಕೈ ಕಾಲು ಮರಗಟ್ಟುವುದನ್ನು ನಿರ್ಲಕ್ಷಿಸಿದರೆ, ಅದು ಗ್ಯಾಂಗ್ರೀನ್ ಆಗಿ ಬದಲಾಗಬಹುದು. ಹಾಗಾಗಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.
ಇನ್ನು ಚಳಿಗಾಲದಲ್ಲಿ ಗಡಗಡ ನಡುಗುವುದು ಆರೋಗ್ಯಕರ ಲಕ್ಷಣ. ಹಾಗಾಗಿ ಆದಷ್ಟು ಉಲ್ಲನ್ ಬಟ್ಟೆ ಬಳಸಬೇಕು. ಬಿಸಿ ಬಿಸಿ ನೀರು ಕುಡಿಯಬೇಕು. ಬಿಸಿ ಬಿಸಿ ಆಹಾರ ತಯಾರಿಸಿ, ಸೇವಿಸಬೇಕು. ಫ್ರಿಜ್‌ನಲ್ಲಿರುವ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಇವಿಷ್ಟು ಚಳಿಗಾಲದಲ್ಲಿ ಪಾಲಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..




