Friday, September 20, 2024

Latest Posts

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

- Advertisement -

ನಾವು ನಿಮಗೆ ಹೆಲ್ತ್ ಟಿಪ್ಸ್ ಕೊಡುವಾಗ, ಬೆಳಗ್ಗಿನ ತಿಂಡಿ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಬೆಳಗ್ಗಿನ ತಿಂಡಿಯನ್ನ ಸ್ಕಿಪ್ ಮಾಡಿದ್ರೆ, ಅಥವಾ ಬೆಳಗ್ಗಿನ ತಿಂಡಿ ಸರಿಯಾಗಿ ತಿನ್ನದಿದ್ದರೆ, ಏನಾಗತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಆರೋಗ್ಯದ ವಿಷಯಕ್ಕೆ ಬಂದ್ರೆ, ಮನುಷ್ಯನಿಗಿಂತ, ಪ್ರಾಣಿ ಪಕ್ಷಿಗಳೇ ಜಾಣರು ಅನ್ನೋದು ಹಲವರು ಹೇಳ್ತಾರೆ. ಯಾಕಂದ್ರೆ ನೀರು ಕುಡಿಯುವ ವಿಷಯದಲ್ಲಿ, ಆಹಾರ ಸೇವನೆ ವಿಷಯದಲ್ಲಿ ಅವು ತುಂಬಾ ಕಾಳಜಿ ವಹಿಸುತ್ತದೆ. ನಿಧಾನಕ್ಕೆ, ಗುಟುಕರಿಸಿ ನೀರು ಕುಡಿಯುವುದು. ಸೂರ್ಯೋದಯವಾಗುತ್ತಿದ್ದಂತೆ, ಹೊಟ್ಟೆತುಂಬ ಆಹಾರ ಸೇವಿಸುವುದು. ಇದೆಲ್ಲ ಒಂದು ಆರೋಗ್ಯಕರವಾಗ ಅಭ್ಯಾಸ. ಹಾಗಾಗಿಯೇ ಇವುಗಳಿಗೆಲ್ಲ ಕ್ಯಾನ್ಸರ್, ಹಾರ್ಟ್ ಅಟ್ಯಾಕ್ ಅಂಥ ರೋಗ ಬರುವುದಿಲ್ಲ.

ಈ ವಿಷಯ ಕೇಳಿದ್ರೆ ನಿಮಗೆ ನಗು ಬರಬಹುದು. ಮನುಷ್ಯನಿಗೂ ಪ್ರಾಣಿಗಳಿಗೂ ಹೋಲಿಸಿ ಮಾತನಾಡುತ್ತಾರಲ್ಲಾ ಅಂತಾ. ಆದ್ರೆ ಮನುಷ್ಯ ದೇಹ ರಚನೆಗೆ ತುಂಬಾ ಹೋಲಿಕೆ ಇರುವ ಕೋತಿಯನ್ನೇ ನೋಡಿ. ಯಾವ ಕೋತಿಯೂ ಇಲ್ಲಿಯವರೆಗೆ ಹಾರ್ಟ್‌ ಅಟ್ಯಾಕ್ ಬಂದೋ, ಅಥವಾ ಕ್ಯಾನ್ಸರ್ ಆಗಿಯೋ ಸತ್ತಿಲ್ಲ. ಯಾಕಂದ್ರೆ ಅವು ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆ, ಆಹಾರ ಸೇವಿಸಲು ಶುರು ಮಾಡುತ್ತದೆ. ನಾಲ್ಕು ಗಂಟೆ ಬಳಿಕವೇ, ನೀರು ಕುಡಿಯುತ್ತದೆ.

ಇದೇ ರೀತಿ ಮನುಷ್ಯ ಕೂಡ ಬೆಳಿಗ್ಗೆ ಸರಿಯಾಗಿ, ಹೊಟ್ಟೆ ತುಂಬ ತಿಂಡಿ ತಿನ್ನಬೇಕು. 1 ಗಂಟೆ ಬಳಿಕ ನೀರು ಅಥವಾ ಹಾಲು, ಜ್ಯೂಸ್ ಸೇವನೆ ಮಾಡಬೇಕು. ತಿಂಡಿಗೂ ನೀರು ಕುಡಿಯುವುದಕ್ಕೂ, ಊಟಕ್ಕೂ- ನೀರು ಕುಡಿಯುವುದಕ್ಕೂ 1 ಗಂಟೆ ಅಂತರವಿದ್ದಾಗಲೇ, ನಾವು ನಿರೋಗಿಯಾಗಿರಬೇಕು. ಮತ್ತು ಬೆಳಗ್ಗಿನ ತಿಂಡಿ, ಆರೋಗ್ಯಕರವಾಗಿರಲಿ. ಇಡ್ಲಿ, ದೋಸೆ, ರೊಟ್ಟಿ, ಉಪ್ಪಿಟ್ಟು, ಅವಲಕ್ಕಿ. ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದು. ಪೂರಿ, ಬನ್ಸ್ ಇವೆಲ್ಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಒಳ್ಳೆಯದಲ್ಲ.

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದೇ ಹೋದಲ್ಲಿ, ಹೃದಯ ರೋಗ, ಕ್ಯಾನ್ಸರ್, ಜೀರ್ಣಕ್ರಿಯೆ ಸಮಸ್ಯೆ ಸೇರಿ, ಹಲವು ರೋಗಗಳು ನಮ್ಮ ಪಾಲಾಗುತ್ತದೆ. ಹಾಗಾಗಿ ನೀವು ನಿಮ್ಮ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಬೆಳಗ್ಗಿನ ಆರೋಗ್ಯಕರ ತಿಂಡಿಯ ಸೇವನೆ ಮಾಡೋದನ್ನ ಮಾತ್ರ ಮರಿಯಬೇಡಿ.

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

Latest Posts

Don't Miss