Spiritual: ಮಹಾಲಯ ತಿಂಗಳು ಶುರುವಾಗಿ ಹಲವು ದಿನಗಳಾಗಿದೆ. ಈಗಾಗಲೇ ಹಲವರು ಪಿತೃಗಳ ಶ್ರಾದ್ಧಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ನಾಡಿದ್ದು 14ನೇ ತಾರೀಖಿನಂದು ನಡೆಯುವ ಮಹಾಲಯ ಅಮವಾಸ್ಯೆ ಪೂಜೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಪೂಜೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಪ್ರಸಿದ್ಧ ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ ಮಹಾಲಯ ಅಮವಾಸ್ಯೆ ಬಗ್ಗೆ ಮಾಹಿತಿ ನೀಡಿದ್ದು, ಈ ಪೂಜೆಯನ್ನು ಹೇಗೆ ಆಚರಿಸಬೇಕು ಎಂದು ಹೇಳಿದ್ದಾರೆ. ಮಹಾಲಯದಲ್ಲಿ ಮಹಾ ಅಂದ್ರೆ, ದೊಡ್ಡದು. ಲಯ ಅಂದ್ರೆ ಕಳೆದುಹೋಗಿರುವಂಥದ್ದು. ಅಂದ್ರೆ ನಾವು ಕಳೆದುಕೊಂಡಿರುವ ಪಿತೃಗಳು. ಹಿರಿಯರಿಗೆ ತರ್ಪಣ ಅರ್ಪಿಸಿ, ಕೃತಜ್ಞತೆ ಅರ್ಪಿಸುವ ದಿನವೇ ಮಹಾಲಯ ಅಮವಾಸ್ಯೆಯ ದಿನ.
ಮಹಾಲಯ ಅಮವಾಸ್ಯೆ ಆಚರಿಸುವವರು ಬೇರೆ ಬೇರೆ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಕೆಲವರು ಸಿಂಪಲ್ ಆಗಿ ತರ್ಪಣ ಬಿಡುತ್ತಾರೆ. ಇನ್ನು ಕೆಲವರು ಪುರೋಹಿತರನ್ನು ಕರೆಸಿ, ಪಿಂಡ ಪ್ರಧಾನ ಮಾಡಿ, ಮಹಾಲಯ ಅಮವಾಸ್ಯೆಯನ್ನು ಮಾಡುತ್ತಾರೆ. ಇವೆರಡೂ ಉತ್ತಮವೇ. ಸಿಂಪಲ್ ಆಗಿ ತರ್ಪಣ ಬಿಟ್ಟರೂ, ಅದು ಪಿತೃಗಳಿಗೆ ಸೇರುತ್ತದೆ. ಅವರಿಗೆ ತೃಪ್ತಿ ಸಿಗುತ್ತದೆ.
ಆದರೆ ತಂದೆ ತಾಯಿ ಇರುವವರು ಎಂದಿಗೂ ತರ್ಪಣ ಬಿಡಬಾರದು. ಅದರಲ್ಲೂ ಬರೀ ಪುರುಷರು ಮಾತ್ರ ತರ್ಪಣ ಬಿಡುವ ಪದ್ಧತಿ ಹಿಂದೂಗಳಲ್ಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ
ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..