ಹಲವರು ಪುತ್ರ ಪ್ರಾಪ್ತಿರಸ್ತು ಅಂತಾ ಆಶೀರ್ವಾದ ಮಾಡ್ತಾರೆ. ಯಾಕಂದ್ರೆ ಗಂಡು ಮಗು ಹುಟ್ಟಿದ್ರೆ, ವಂಶಾಭಿವೃದ್ಧಿಯಾಗತ್ತೆ. ಅವನು ತಂದೆ ತಾಯಿಗೆ ಆಧಾರವಾಗಿರ್ತಾನೆ ಅಂತಾ. ಆದ್ರೆ ಹೆಣ್ಣು ಮಗು ಹುಟ್ಟದಿದ್ರೆ, ತಂದೆ ತಾಯಿ ಋಣ ತೆಗೆದುಕೊಂಡು ಮುಂದಿನ ಜನ್ಮಕ್ಕೆ ಹೋಗಬೇಕಾಗತ್ತೆ ಅಂತಾರೆ ಹಿರಿಯರು. ಯಾಕೆ ಹೀಗೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಿಮಗೆ ಒಬ್ಬನೇ ಮಗ ಅಥವಾ ಇಬ್ಬರು ಮೂವರು ಗಂಡು ಮಕ್ಕಳೇ ಇದ್ದರೆಂದಿಟ್ಟುಕೊಳ್ಳಿ. ನೀವು ನಿಮ್ಮ ವಂಶವನ್ನು ಅಭಿವೃದ್ಧಿ ಮಾಡಲು, ಮಕ್ಕಳಿಗೆ ಮದುವೆ ಮಾಡಿ, ಸೊಸೆಯನ್ನ ಮನೆಗೆ ಕರೆತರುತ್ತೀರಿ. ಆಗ ನಿಮಗೆ ಋಣ ಸೇರುತ್ತದೆ. ಯಾಕಂದ್ರೆ ನೀವು ನಿಮ್ಮ ವಶ ಬೆಳೆಸಲು ಸೊಸೆಯನ್ನು ತಂದಿರಿ. ಆದ್ರೆ ನಿಮ್ಮಿಂದ ಇನ್ನೊಂದು ಕುಟುಂಬದ ವಂಶೋದ್ಧಾರಕವಾಗಬೇಕಲ್ಲ. ಹಾಗಾಗಿ ನೀವು ನಿಮ್ಮ ಮನೆಯ ಹೆಣ್ಣನ್ನ ಕನ್ಯಾದಾನ ಮಾಡಿಕೊಡಬೇಕು.
ಹಾಗಿದ್ದಲ್ಲಿ ನಿಮಗೊಬ್ಬಳು ಹೆಣ್ಣು ಮಗಳಿರಬೇಕು. ಇದೇ ಕಾರಣಕ್ಕೆ ನಿಮಗೆ ಎಷ್ಟು ಗಂಡು ಮಕ್ಕಳಿದ್ದರೂ, ಒಂದಾದರೂ ಹೆಣ್ಣು ಮಕ್ಕಳಿರಬೇಕು ಅಂತಾ ಹೇಳೋದು. ಇನ್ನು ಕನ್ಯಾದಾನ ಹಿಂದೂ ಧರ್ಮದಲ್ಲಿ ದೊಡ್ಡ ದಾನ ಅನ್ನೋ ಮಾನ್ಯತೆ ಪಡೆದಿದೆ. ಇದು ಮೋಕ್ಷ ಪ್ರಾಪ್ತಿಯಾಗಲು ಸಹಾಯಕವಾಗಿದೆ ಅನ್ನೋದು ಸನಾತನ ಧರ್ಮದಲ್ಲಿರುವ ನಂಬಿಕೆ.
ಇನ್ನು ನಮಗೆ ಹೆಣ್ಣು ಮಗುವಿಲ್ಲ ಅಂತಾ ಹೇಳುವವರು ಪದ್ಧತಿ ಪ್ರಕಾರವಾಗಿ ಪುತ್ರಿಯನ್ನ ದತ್ತು ತೆಗೆದುಕೊಂಡು, ಕನ್ಯಾದಾನ ಮಾಡಿಕೊಡಬಹುದು. ಯಾಕಂದ್ರೆ ಸ್ವಂತ ಮಗಳಿಗೆ ಇರುವ ಮಾನ್ಯತೆಯೇ ದತ್ತು ಪುತ್ರಿಗೂ ಇರುತ್ತದೆ. ಹಾಗಾಗಿ ಹೆಣ್ಣನ್ನ ದತ್ತು ಪಡೆದು ನೀವು ಕನ್ಯಾದಾನ ಮಾಡಿ ಕೊಡಬಹುದು.