Friday, June 20, 2025

Latest Posts

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?

- Advertisement -

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಟೆನ್ಶನ್ ಅಲ್ಲಾ ಟೆನ್ ಸನ್‌ಗೆ ಸಮ ಅಂತೆಲ್ಲಾ ಹೇಳೋದನ್ನ ನಾವು ನೀವು ಕೇಳಿದ್ದೀವಿ. ಯಾಕಂದ್ರೆ ಹೆಣ್ಣಿನ ಸ್ವಭಾವವೇ ಅಂಥದ್ದು. ಆಕೆ ಒಂದು ಮನೆಯಲ್ಲಿ ಹುಟ್ಟಿ ಬೆಳೆದು, ಇನ್ನೊಂದು ಮನೆಗೆ ಹೋಗಿ, ಅಲ್ಲಿ ಅಡ್ಜಸ್ಟ್ ಮಾಡಿಕೊಂಡು ಜೀವನ ಮಾಡಬೇಕಾಗತ್ತೆ.

ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು ಸೇರಿಸಿ.. ಜೀರ್ಣಕಾರಿ ಸಮಸ್ಯೆಗಳನ್ನು ಪರಿಶೀಲಿಸಿ..!

ಮನೆ ಮರ್ಯಾದೆಗೋಸ್ಕರ ತನ್ನೆಲ್ಲ ಆಸೆಗಳನ್ನ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು ಜೀವನ ಸಾಗಿಸಬೇಕಾಗತ್ತೆ. ಮಗಳು, ಅಕ್ಕ- ತಂಗಿ, ಪತ್ನಿ, ಸೊಸೆ, ತಾಯಿ ಈ ಎಲ್ಲ ಸಂಬಂಧವನ್ನು ನಿಭಾಯಿಸುವ ಹೆಣ್ಣು ನಿಜಕ್ಕೂ ಗ್ರೇಟ್. ಇಂಥ ಹೆಣ್ಣು ಮಕ್ಕಳು ಎಲ್ಲರಿಗೂ ಹುಟ್ಟಲ್ಲ. ಯಾಕಂದ್ರೆ ಹಣ್ಣು ಮಗು ಹುಟ್ಟೋಕ್ಕೂ ಪುಣ್ಯ ಮಾಡಿರಬೇಕು ಅಂತಾ ಹೇಳ್ತಾರೆ. ಆ ಪುಣ್ಯ ಎಲ್ಲರಿಗೂ ಸಿಗಲ್ಲ. ಹಾಗಾದ್ರೆ ಎಂಥ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಾರೆ ಅಂತಾ ತಿಳಿಯೋಣ ಬನ್ನಿ..

ಅರ್ಜುನ ಶ್ರೀಕೃಷ್ಣನ ಬಳಿ, ಎಂಥ ಮನೆಯಲ್ಲಿ ಹೆಣ್ಣು ಮಕ್ಳು ಹುಟ್ಟುತ್ತಾರೆಂದು ಕೇಳುತ್ತಾನೆ. ಆಗ ಶ್ರೀಕೃಷ್ಣ ಭಾಗ್ಯವಂತರ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೆ, ಸೌಭಾಗ್ಯವಂತರ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಾರೆ. ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಹೆಣ್ಣು ಮಕ್ಕಳ ಜನನವಾಗುತ್ತದೆ. ಯಾರಿಗೆ ಹೆಣ್ಣು ಮಕ್ಕಳನ್ನು ಸಾಕುವ ಯೋಗ್ಯತೆ ಇರುತ್ತದೆಯೋ, ಅಂಥವರಿಗೇ ಹೆಣ್ಣು ಮಕ್ಕಳು ಹುಟ್ಟುತ್ತಾರೆಂದು ಶ್ರೀಕೃಷ್ಣ ಹೇಳುತ್ತಾನೆ.

ದೇವರಿಗೆ ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್..!

ಅಲ್ಲದೇ, ಹೆಣ್ಣು ಮಕ್ಕಳ ಜನನವಾಗೋದು ಯಾವಾಗ ನಿಲ್ಲುತ್ತದೆಯೋ, ಅಂದಿನಿಂದ ಈ ಪ್ರಪಂಚದ ನಾಶ ಶುರುವಾಗುತ್ತದೆ. ಏಕೆಂದರೆ, ಹೆಣ್ಣೇ ಇಲ್ಲವೆಂದಲ್ಲಿ, ವಂಶಾಭಿವೃದ್ಧಿ ಆಗೋದು ಹೇಗೆ..? ಹಾಗಾಗಿ ಹೆಣ್ಣಿನ ಅವನತಿಯಾದರೆ, ಪ್ರಪಂಚದ ವಿನಾಶದ ಸಂಕೇತವೆನ್ನುತ್ತಾನೆ ಶ್ರೀಕೃಷ್ಣ.

- Advertisement -

Latest Posts

Don't Miss