ಈ ಮೊದಲಿನ ಭಾಗದಲ್ಲಿ ನಾವು ನಿಮಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ 8 ಉತ್ತಮ ಗುಣಗಳಲ್ಲಿ 4 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನೂ 4 ಗುಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ..
ಐದನೇಯ ಸತ್ಯ. ದುಡ್ಡಿಂದ ನಿಮಗೆ ಎಂದಿಗೂ ಖುಷಿ ಸಿಗುವುದಿಲ್ಲ. ಇದು ನಾವು ಅರಿಯಬೇಕಾದ ನಿಜವಾದ ಸತ್ಯ. ಇಂದಿನ ಕಾಲದಲ್ಲಿ ಖುಷಿ ಖುಷಿಯ ಜೀವನ ಮಾಡಲು, ಜನ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಹೀಗೆ ಓಡುವ ಭರದಲ್ಲಿ ಕುಟುಂಬಸ್ಥರ ಜೊತೆ, ತಮ್ಮ ಆತ್ಮೀಯರ ಜೊತೆ ಮಾತನಾಡಲು ಸಮಯವಿಲ್ಲದಷ್ಟು ಬ್ಯುಸಿಯಾಗಿರುತ್ತಾರೆ. ಆದ್ರೆ ದುಡ್ಡಿಂದ ನೆಮ್ಮದಿ ಮತ್ತು ಖುಷಿ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಪ್ರೀತಿ, ಕಾಳಜಿಯಿಂದ ಮಾತ್ರ ನೀವು ನೆಮ್ಮದಿ ಮತ್ತು ಖುಷಿಯನ್ನು ಕಂಡುಕೊಳ್ಳಬಹುದು. ಹಾಗಾಗಿ ಜೀವಿಸಲು ದುಡ್ಡಿನ ಜೊತೆ ಪ್ರೀತಿ, ನೆಮ್ಮದಿ, ಖುಷಿ ಎಲ್ಲವೂ ಬೇಕು. ಆದ್ರೆ ನಿಮ್ಮ ಮನೆಯಲ್ಲಿ ದುಡ್ಡಿಂದಲೇ ನಮಗೆ ಖುಷಿ ಸಿಗುತ್ತದೆ ಅನ್ನೋ ಮಾತಿದ್ರೆ, ಅಲ್ಲಿ ಪ್ರೀತಿ ಇಲ್ಲವೆಂದು ಅರ್ಥ. ಅದೊಂದು ಯಾಂತ್ರಿಕ ಜೀವನವೆಂದು ಅರ್ಥ.
ಆರನೇಯ ಸತ್ಯ. ನೀವು ಎಲ್ಲರನ್ನೂ ಇಂಪ್ರೆಸ್ ಮಾಡಲು ಸಾಧ್ಯವಿಲ್ಲ. ಈ ಪ್ರಪಂಚದ ದೊಡ್ಡ ರೋಗವೆಂದರೆ, ಜನ ಏನಂತಾರೋ ಅನ್ನೋದು. ನಮ್ಮಲ್ಲಿ ಹೆಚ್ಚಿನವರು ಬದುಕುವುದೇ, ಜನ ಏನಂತಾರೋ ಏನೋ ಅನ್ನೋ ಭಯದಲ್ಲಿ. ಆದ್ರೆ ನೀವು ನಾವೇನೇ ಮಾಡಿದ್ರೂ ಜನ ಮಾತಾಡೇ ಮಾತಾಡ್ತಾರೆ ಅನ್ನೋ ಸತ್ಯವನ್ನ ಅರಿಯಬೇಕಾಗಿದೆ. ಹಾಗಾಗಿ ನಿಮಗೆ ಬೇಕಾದ ಹಾಗೆ ಬದುಕಿ ವಿನಃ, ಜನರಿಗೆ ಬೇಕಾದ ಹಾಗೆ ಅಲ್ಲ.
ಏಳನೆಯ ಸತ್ಯ. ಯಶಸ್ಸು ಅನ್ನೋದು ನಮ್ಮಲ್ಲಿರುವ ಅರ್ಹತೆಯಿಂದ ಬರುತ್ತದೆ. ನನ್ನ ಬಳಿ ಕ್ಯಾಮೆರಾ ಇದ್ರೆ ಚೆನ್ನಾಗಿರ್ತಿತ್ತು. ನಾನು ಒಳ್ಳೆ ಕ್ವಾಲಿಟಿ ವೀಡಿಯೋ ಮಾಡಿ, ಅಪ್ಲೋಡ್ ಮಾಡ್ಬಹುದಿತ್ತು. ಆಗ ನನ್ನ ವೀವರ್ಸ್ ಮತ್ತು ಫಾಲೋವರ್ಸ್ ಹೆಚ್ಚಾಗ್ತಿದ್ರು ಅಂತಾ ಓರ್ವ ಯೂಟ್ಯೂಬರ್ ಅಂದುಕೊಂಡು, ಯೂಟ್ಯೂಬ್ ಶುರು ಮಾಡದೇ ಸುಮ್ಮನಿದ್ರೆ, ಅವನಿಗಿಂತ ದಡ್ಡ ಇನ್ನೊಬ್ಬನಿಲ್ಲ. ಇದು ಬರೀ ಯೂಟ್ಯೂಬರ್‌ಗಷ್ಟೇ ಅಲ್ಲ, ಬದಲಾಗಿ ಯಾವ ಕೆಲಸ ಮಾಡುವುದಿದ್ದರೂ, ನಿಮ್ಮಲ್ಲಿರುವ ಕ್ಯಾಪೆಸಿಟಿ ಮೇಲೆ ನಂಬಿಕೆ ಇಟ್ಟು ಮುನ್ನುಗ್ಗಿ. ಆಗ ನೀವು ಗೆಲ್ಲುತ್ತೀರಿ. ಅದನ್ನು ಬಿಟ್ಟು, ನನ್ನ ಬಳಿ ಅದಿಲ್ಲ, ಇದಿಲ್ಲ ಎಂದು ಕುಳಿತರೆ, ನೀವು ಯಶಸ್ವಿಯಾಗಲು ಸಾಧ್ಯವೇ ಇಲ್ಲ.
ಎಂಟನೆಯ ಸತ್ಯ. ಭೂತ ಕಾಲವನ್ನು ನೆನೆದು ವರ್ತಮಾನ ಮತ್ತು ಭವಿಷ್ಯವನ್ನು ಹಾಳು ಮಾಡಬೇಡಿ. ಹಲವರು ತಮ್ಮ ಜೀವನದಲ್ಲಿ ನಡೆದು ಹೋದ ಘಟನೆಯನ್ನು ನೆನೆಯುತ್ತ, ಕೊರಗಿ ಕೊರಗಿ, ತಮ್ಮ ಇಂದಿನ ಮತ್ತು ನಾಳೆಯ ಜೀವನವನ್ನು ಹಾಳು ಮಾಡಿಕೊಂಡು ಬಿಡುತ್ತಾರೆ. ಆ ತಪ್ಪನ್ನು ಎಂದಿಗೂ ಮಾಡಬೇಡಿ. ನಡೆದಿದ್ದು ನಡೆದು ಹೋಯಿತು, ಇನ್ನು ಮುಂದೆ ಖುಷಿಯಾಗಿರೋಣವೆಂದು ತಿಳಿದು, ಸಮಯ ವ್ಯರ್ಥ ಮಾಡದೇ, ಜೀವಿಸಿ.