Wednesday, July 2, 2025

Latest Posts

India vs South Africa : ಭಾರತಕ್ಕೆ 113 ರನ್​ಗಳ ಭರ್ಜರಿ ಜಯ..!

- Advertisement -

ದಕ್ಷಿಣ ಆಫ್ರಿಕಾ ವಿರುದ್ದ (India vs South Africa 1st Test) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೊನೆಯ ದಿನದಾಟದಲ್ಲಿ 211 ರನ್​ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ 191 ರನ್​ಗಳಿಗೆ ಆಲೌಟ್ ಮಾಡಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಸೆಂಚುರಿಯನ್​ನ ಸ್ಪೋರ್ಟ್​ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ (123) ಅವರ ಭರ್ಜರಿ ಶತಕದ ನೆರವಿನಿಂದ ಭಾರತ 327 ರನ್​ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಶಮಿ ಅವರ ಮಾರಕ ದಾಳಿಗೆ ತತ್ತರಿಸಿತು. ಅದರಂತೆ 5 ವಿಕೆಟ್ ಉರುಳಿಸಿದ ಶಮಿ ಸೌತ್ ಆಫ್ರಿಕಾ ತಂಡವನ್ನು ಕೇವಲ 197 ರನ್​ಗಳಿಗೆ ನಿಯಂತ್ರಿಸಿದರು.

ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 174 ರನ್​ಗಳಿಗೆ ಆಲೌಟ್ ಆಯಿತು. ಅದರಂತೆ ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ದಕ್ಷಿಣ ಆಫ್ರಿಕಾಗೆ 2ನೇ ಇನಿಂಗ್ಸ್​ನಲ್ಲಿ 305 ರನ್​ಗಳ ಟಾರ್ಗೆಟ್ ನೀಡಿತು.  ಕೊನೆಯ ದಿನದಾಟದ ವೇಳೆ ದಕ್ಷಿಣ ಆಫ್ರಿಕಾ ತಂಡವು 211 ರನ್​ಗಳ ಗುರಿ ಪಡೆದಿತ್ತು. ಆದರೆ ಅಂತಿಮ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ತಂಡದ 6 ವಿಕೆಟ್ ಉರುಳಿಸಿದ ಟೀಮ್ ಇಂಡಿಯಾ ಬೌಲರ್​ಗಳು ಭಾರತ ತಂಡಕ್ಕೆ 113 ರನ್​ಗಳ ಐತಿಹಾಸಿಕ ಗೆಲುವು ತಂದುಕೊಟ್ಟರು.

- Advertisement -

Latest Posts

Don't Miss