ಹಿಂದೂಗಳು ಯಾವುದಾದರೂ ಮಂತ್ರೋಚ್ಛಾರಣೆ ಮಾಡುವಾಗ 108 ಬಾರಿ ಮಾಡಬೇಕು ಎನ್ನುತ್ತಾರೆ. ಕೆಲ ಹಿರಿಯರು ಮಾತನಾಡುವಾಗಲೊಮ್ಮೆ108 ಖಾಯಿಲೆ ಅಂತಾ ಹೇಳ್ತಾರೆ. ಆ್ಯಂಬುಲೆನ್ಸ್ ನಂಬರ್ ಕೂಡಾ 108. ಹಾಗಾದ್ರೆ 108 ಅನ್ನೋ ನಂಬರ್ ಹಿಂದೂಗಳಿಗೆ ಶ್ರೇಷ್ಠ ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..
ಹಿಂದೂಗಳಲ್ಲಿ ಉಪನಿಷತ್‌ಗಳ ಸಂಖ್ಯೆ 108 ಇದೆ. 108 ಶಕ್ತಿಪೀಠಗಳಿದೆ. ಶಿವನಿಗೆ 108 ಹೆಸರುಗಳಿದೆ. ಯಾವುದೇ ಮಂತ್ರವನ್ನು 108 ಬಾರಿ ಜಪಿಸಿದರೆ, ಸಕಲ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ದೇವರಿಗೆ ನೈವೇದ್ಯವಾಗುವಾಗ, ಮೋದಕ, ಲಾಡು, ಗರಿಕೆ, ಹೀಗೆ ಪದಾರ್ಥಗಳು 108 ಇಟ್ಟು ನೈವೇದ್ಯ ಮಾಡಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಕೆಲವರು ದೇವಸ್ಥಾನಕ್ಕೆ ಹೋದಾಗ, 108 ಪ್ರದಕ್ಷಿಣೆ ಹಾಕುತ್ತಾರೆ.
ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..
ಇನ್ನು ಕೆಲವು ಕಡೆ 108 ಮೆಟ್ಟಿಲುಗಳುಳ್ಳ ಹಿಂದೂ ದೇವಸ್ಥಾನಗಳಿರುತ್ತದೆ. ಮನುಷ್ಯನ ದೇಹದಲ್ಲಿ 108 ಚಕ್ರಗಳಿದೆ. ಇದು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವ, ಮನುಷ್ಯನ ಮನಸ್ಸನ್ನು ಕಂಟ್ರೋಲ್ ಮಾಡುವ ಚಕ್ರಗಳಾಗಿದೆ. ಶಿವನಿಗೆ 108 ಶಿವಗಣಗಳಿದೆ. ಸಮುದ್ರ ಮಂಥನದ ಸಮಯದಲ್ಲಿ 108 ದೇವತೆಗಳು ಮತ್ತು ದಾನವರು ಭಾಗವಹಿಸಿದ್ದರು.