ಅಕ್ಷಯ ತೃತೀಯ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಚಿನ್ನ ಖರೀದಿ. ಈ ದಿನ ಚಿನ್ನ ಖರೀದಿಸಿದ್ರೆ, ಚಿನ್ನ ಅಕ್ಷಯವಾಗತ್ತೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದಿನ ಚಿನ್ನ ಮಾತ್ರ ಖರೀದಿಸುತ್ತಾರಾ..? ಇನ್ನೂ ಏನೇನು ಖರೀದಿಸಬಹುದು ಅಂತಾ ತಿಳಿಯೋಣ ಬನ್ನಿ..
ಯಾರಿಗೆ ಚಿನ್ನ ತೆಗೆದುಕೊಳ್ಳುವ ಅರ್ಹತೆ ಇರುತ್ತದೆಯೋ, ಅಂಥವರು ಚಿನ್ನವನ್ನ ಖರೀದಿಸುತ್ತಾರೆ. ಆದರೆ ಯಾರಿಗೆ ಚಿನ್ನ ತೆಗೆದುಕೊಳ್ಳಲು ಆಗುವುದಿಲ್ಲವೋ, ಅವರು ಅರಿಶಿನ ಮತ್ತು ಕುಂಕುಮ ಖರೀದಿಸಿ. ಅದನ್ನ ದೇವರ ಮುಂದಿಟ್ಟು ಕೈ ಮುಗಿಯಿರಿ. ಇದು ಕೂಡ ಸಂಪತ್ತಿಗೆ ಸಮವಾಗಿದೆ. ಅಕ್ಷಯ ತೃತೀಯದ ದಿನ ಅರಿಶಿನ ಕುಂಕುಮ ಖರೀದಿಸುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಇದಲ್ಲದೇ ಈ ದಿನ ನೀವು ನಿಮ್ಮ ಮಕ್ಕಳಿಗೆ ಪುಸ್ತಕ, ಪೆನ್ನು ಕೊಡಿಸಬಹುದು. ಮನೆಗೆ ದಿನಸಿ ತರಬಹುದು. ಅಥವಾ ಅಕ್ಕಿಯಾದರೂ ತರಬಹುದು. ಈ ದಿನ ಹೊಸ ಹೊಸ ಕೆಲಸ ಆರಂಭಿಸುವ ಪದ್ಧತಿ ಹಲವೆಡೆ ಉಂಟು. ಹೀಗೆ ಅಕ್ಷಯ ತೃತಿಯದಂದು ಶುರು ಮಾಡಿದ ಕೆಲಸದಿಂದ, ಅತ್ಯುತ್ತಮ ಲಾಭ ಹೊಂದಿ, ಜೀವನದಲ್ಲಿ ಯಶಸ್ವಿ ಉದ್ಯಮಿಯಾದವರೂ ಇದ್ದಾರೆ. ಇನ್ನು ಮದುವೆ, ಉಪನಯನ, ಗೃಹಪ್ರವೇಶ, ಇತ್ಯಾದಿ ಶುಭ ಕಾರ್ಯಗಳು ಕೂಡ ಮಾಡಲಾಗುತ್ತದೆ.
ಇಷ್ಟೇ ಅಲ್ಲದೇ, ಈ ದಿನ ದಾನ ಧರ್ಮ ಮಾಡಿದರೆ ತುಂಬಾ ಒಳ್ಳೆಯದು ಅನ್ನೋ ನಂಬಿಕೆ ಇದೆ. ಈ ದಿನ ಯಾರು ದಾನ ಮಾಡುತ್ತಾರೋ, ಅವರ ಜೀವನದಲ್ಲಿ ದಾನ ಮಾಡುವ ಯೋಗ್ಯತೆ ಅಕ್ಷಯವಾಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಾಗಾಗಿ ಈ ದಿನ ನಿಮಗೆ ಬೇಕಾದ್ದನ್ನು ಖರೀದಿ ಮಾಡುವುದರ ಜೊತೆಗೆ, ಕೊಂಚ ದಾನವೂ ಮಾಡಿದರೆ ಉತ್ತಮ.