ಪುಟ್ಟ ಮಕ್ಕಳಿಗೆ ತಲೆಯಲ್ಲಿ ಅಷ್ಟೊಂದು ಕೂದಲಿರುವುದಿಲ್ಲ. ಹಾಗಾಗಿ ಒಂದು ವರ್ಷವಾಗುತ್ತಿದ್ದಂತೆ, ಚೌಳ ಮಾಡಿಸುತ್ತಾರೆ. ಆದ್ರೆ ಕೆಲವರಲ್ಲಿ ಹೆಣ್ಣು ಮಕ್ಕಳಿಗೆ ಚೌಳ ಮಾಡಿಸುವುದಿಲ್ಲ. ಹಾಗಾದ್ರೆ ಚೌಳ ಮಾಡಿಸದೆಯೇ, ಕೂದಲು ತೆಗಿಯದೆಯೇ, ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ…
ಚಳಿಗಾಲದಲ್ಲಿ ಯಥೇಚ್ಛವಾಗಿ ದೊರೆಯುವ ಪ್ಲಮ್ ಹಣ್ಣು..ಹಲವು ಆರೋಗ್ಯಕಾರಿ ಲಾಭಗಳು..ಒಮ್ಮೆ ನೋಡಿ..!
ಮಗುವಿನ ಕೂದಲು ಉತ್ತಮವಾಗಿರಬೇಕು ಅಂದ್ರೆ, ಮಗುವಿನ ತಲೆಗೆ ಎಣ್ಣೆಯ ಮಸಾಜ್ ಮಾಡಬೇಕು. ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಬಾದಾಮ್ ಎಣ್ಣೆ ಅಥವಾ ಮನೆಯಲ್ಲೇ ತಯಾರಿಸಿದ ಹರ್ಬಲ್ ಎಣ್ಣೆಯಿಂದ ಮಗುವಿನ ತಲೆಗೆ ಮಸಾಜ್ ಮಾಡಿದ್ರೆ ಮಗುವಿನ ಕೂದಲು ಚಂದವಾಗಿ ಬೆಳೆಯುತ್ತದೆ. ಮಗುವಿಗೆ ಎಣ್ಣೆ ಮಸಾಜ್ ಮಾಡುವಾಗ, ಅದು ಶುದ್ಧವಾಗಿರಬೇಕು. ಅದರಿಂದ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ.
ಉದಾಹರಣೆಗೆ ಕೆಲ ಮಕ್ಕಳಿಗೆ ಕೆಲ ಕಂಪನಿಗಳ ಎಣ್ಣೆ ಹಚ್ಚಿದ್ರೆ, ಅಥವಾ ಅದರರ ದೇಹಕ್ಕೆ ಆಗದ ಎಣ್ಣೆ ಹಚ್ಚಿದ್‌ರೆ, ಗುಳ್ಳೆಯಾಗಕ್ಕೆ ಶುರುವಾಗತ್ತೆ. ಆ ವೇಳೆ ಬೇಗ ಆ ಎಣ್ಣೆ ಬಳಸೋದನ್ನ ನಿಲ್ಲಿಸಿಬಿಡಿ. ಇಲ್ಲವಾದಲ್ಲಿ, ಮಗುವಿನ ತ್ವಚೆ ಹಾಳಾಗತ್ತೆ. ಹಾಗಾಗಿ ನೀವು ಮಗುವಿಗೆ ಬಳಸುವ ಎಣ್ಣೆ ಶುದ್ಧವಾಗಿರಲಿ. ನೆಲ್ಲಿಕಾಯಿ, ಎಳ್ಳೆಣ್ಣೆ, ಮೆಂತ್ಯೆ ಎಣ್ಣೆ, ಭ್ರಂಗರಾಜ್, ಆಲಿವ್ ಎಣ್ಣೆ, ತೆಂಗಿನ ಎಣ್ಣೆ, ಮಗುವಿನ ತ್ವೆಚೆ ಉತ್ತಮವಾಗಿರುತ್ತದೆ.
ಪೇರಲೆ ಹಣ್ಣಿನ ಸೇವನೆ ಮಾಡಿದ್ರೆ ಆರೋಗ್ಯಕ್ಕಾಗಲಿದೆ ಈ ಲಾಭಗಳು..
ನೀವು ಶಿಶುವಿನ ತಲೆಗೆ ಎಣ್ಣೆ ಹಚ್ಚಿ, ನಿಧಾನವಾಗಿ, ಸರಿಯಾಗಿ ಮಸಾಜ್ ಮಾಡಿದ್ರೆ, ರಕ್ತ ಸಂಚಲನ ಹೆಚ್ಚುತ್ತದೆ. ಸರಿಯಾಗಿ ರಕ್ತ ಸಂಚಲನವಾಗುತ್ತದೆ. ಇದರಿಂದ ಮಗುವಿನ ಕೂದಲಿನ ಬೆಳವಣಿಗೆ ಆರೋಗ್ಯಕರವಾಗಿ ಆಗುತ್ತದೆ. ಹಾಗಾಗಿ ಶಿಶುವಿನ ತಲೆಗೆ ಉತ್ತಮ ಎಣ್ಣೆಯಿಂದ ನಾಜೂಕಾಗಿ ಮಸಾಜ್ ಮಾಡಬೇಕು. ಮಗುವಿಗೆ ತಲೆ ಸ್ನಾನ ಮಾಡಿಸುವಾಗ ಶ್ಯಾಂಪೂವನ್ನೇ ಬಳಸಬೇಕೆಂದೇನಿಲ್ಲ. ನಾರ್ಮಲ್ ಬೇಬಿ ಸೋಪ್ ಕೂಡ ಬಳಸಬಹುದು.