ಮನುಷ್ಯ ಹುಟ್ಟುವಾಗಲೇ, ಅವನ ಸಾವು ಯಾವಾಗ..? ಅವನ ಜೀವನದಲ್ಲಿ ಏನೇನು ನಡೆಯಲಿದೆ..? ಅವನು ಭವಿಷ್ಯದಲ್ಲಿ ಏನಾಗಲಿದ್ದಾನೆ..? ಹೀಗೆ ಇತ್ಯಾದಿ ಸಂಗತಿಗಳು ಮೊದಲೇ ನಿರ್ಧರಿತವಾಗಿರುತ್ತದೆ. ಅದನ್ನೇ ನಾವು ಬ್ರಹ್ಮ ಬರೆದ ಹಣೆಬರಹ ಅಂತಾ ಹೇಳೋದು. ಇಂದು ನಾವು ಹುಟ್ಟಿಗಿಂತ ಮುಂಚೆಯೇ ನಿರ್ಧರಿತವಾಗಿರುವ 4 ಸಂಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಆಯುಷ್ಯ. ಮಗುವಿನ ಆಯುಷ್ಯ ಎಷ್ಟು ಎಂಬುವುದು ಮೊದಲೇ ನಿರ್ಧರಿತವಾಗಿರುತ್ತದೆ. ಅದು ವಯಸ್ಸಿನ ಮೇಲೆ ಅಲ್ಲ, ಬದಲಾಗಿ ಶ್ವಾಸದ ಮೇಲೆ ಎನ್ನಲಾಗಿದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಜ್ಞಾನಿಗಳು, ಯೋಗಿಗಳು, ಮುನಿಗಳು ಯೋಗ, ಧ್ಯಾನ ಮಾಡುವ ಮೂಲಕ ತಮ್ಮ ಶ್ವಾಸವನ್ನು ಹಿಡಿತದಲ್ಲಿಟ್ಟುಕೊಂಡು ಹಲವು ವರ್ಷ ಬದುಕುತ್ತಿದ್ದರು.
ಎರಡನೇಯದಾಗಿ ಕರ್ಮ. ಒಂದು ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ, ಅದರ ಕರ್ಮದ ಬಗ್ಗೆಯೂ ನಿರ್ಧರಿತವಾಗಿರುತ್ತದೆ. ಅವನು ಮಾಡುವ ಕರ್ಮ ರಜೋಗುಣದಿಂದ, ತಮೋಗುಣದಿಂದ ಅಥವಾ ಸಾತ್ವಿಕ ಗುಣದಿಂದ ಕೂಡಿರುತ್ತದೆಯೋ ಎಂಬುದನ್ನ ನಿರ್ಧರಿಸಲಾಗುತ್ತದೆ. ಹಾಗಾಗಿಯೇ ಜೀವನದಲ್ಲಿ ಆದಷ್ಟು ಸಾತ್ವಿಕ ಗುಣಗಳನ್ನು ಅಳವಡಿಸಿಕೊಳ್ಳಿ. ಎಲ್ಲರಿಗೂ ಒಳ್ಳೆಯದೇ ಮಾಡಿ, ಎಲ್ಲರಿಗೂ ಒಳ್ಳೆಯದೇ ಬಯಸಿ ಎಂದು ಹೇಳುವುದು.
ಮೂರನೇಯದಾಗಿ ಧನ. ಮಗು ಈ ಜನ್ಮದಲ್ಲಿ ಎಷ್ಟು ಧನ ಧಾನ್ಯವನ್ನು ಸಂಪಾದನೆ ಮಾಡುತ್ತಾನೆಂದು ಗರ್ಭದಲ್ಲೇ ನಿರ್ಧರಿಸಲಾಗುತ್ತದೆ. ಈ ಧನ ಧಾನ್ಯ ಸಂಪಾದಿಸುವುದು ಕರ್ಮದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಕರ್ಮಗಳನ್ನ ಮಾಡಿದರೆ, ಉತ್ತಮ ಯೋಚನೆ ಬರುತ್ತದೆ. ಉತ್ತಮ ಯೋಚನೆ ಬಂದಾಗ, ಹೆಚ್ಚು ಕಷ್ಟ ಪಡದೇ ನಿಯತ್ತಿನಿಂದ ದುಡ್ಡು ಸಂಪಾದಿರುವ ಬುದ್ಧಿ ತಾನಾಗೇ ಬರುತ್ತದೆ.
ನಾಲ್ಕನೇಯದಾಗಿ ವಿದ್ಯೆ. ವಿದ್ಯೆ ಅಂದರೆ, ಸಂಸ್ಕಾರ. ಮಗು ಎಂಥ ಸಂಸ್ಕಾರ ಪಡೆಯುತ್ತದೆ ಅನ್ನೋದು ಗರ್ಭದಲ್ಲೇ ನಿರ್ಧರಿತವಾಗುತ್ತದೆ. ಹಾಗಾಗಿಯೇ ತಂದೆ ತಾಯಿ ಒಳ್ಳೆಯ ಭಾಷೆ ಬಳಸಬೇಕು. ಬೈಗುಳಗಳನ್ನು ಬಳಸಬಾರದು. ಶ್ಲೋಕಗಳು ಭಕ್ತಿಗೀತೆಗಳನ್ನು ಕೇಳಬೇಕು ಅಂತಾ ಹೇಳೋದು.