ಕಪ್ಪು ಕಡಲೆಯನ್ನ ನಾವು ಹಲವಾರು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಪಲಾವ್ ಇತ್ಯಾದಿ ಪದಾರ್ಥ ತಯಾರಿಸುವಾಗ ಕಡಲೆ ಸೇರಿಸಿದ್ರೆ, ರುಚಿ ಇನ್ನೂ ಹೆಚ್ಚತ್ತೆ. ಆದ್ರೆ ಕಪ್ಪು ಕಡಲೆಯನ್ನ ಈ ರೀತಿ ತಿಂದ್ರೇನೂ ಪ್ರಯೋಜನವಿಲ್ಲ. ಹಾಗಾದ್ರೆ ಕಪ್ಪು ಕಡಲೆಯನ್ನ ಯಾವ ರೀತಿ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ..
ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!
ತೂಕ ಇಳಿಸಲು ಬಯಸುವವರು ತಮ್ಮ ಆಹಾರದಲ್ಲಿ ಫೈಬರ್, ಪ್ರೋಟೀನ್ ಸೇರಿಸಿಕೊಳ್ಳಬೇಕು. ಮತ್ತು ಅದು ಲೋ ಕ್ಯಾಲೋರಿ ಆಹಾರವಾಗಿರಬೇಕು. ಹಾಗಾಗಿ ನೀವು ಪ್ರತಿದಿನ 100 ಗ್ರಾಂ ಕಡಲೆ ಕಾಳನ್ನ ಸೇವಿಸಬಹುದು. ಯಾಕಂದ್ರೆ ಇದರಲ್ಲಿ ಫೈಬರ್, ಪ್ರೋಟೀನ್ ಅಂಶ ಭರಪೂರವಾಗಿದೆ. ಕಡಿಮೆ ಕ್ಯಾಲೋರಿ ಇದೆ.
ಹಾಗಾದ್ರೆ ಇದನ್ನ ಸೇವಿಸೋದು ಹೇಗೆ ಅಂದ್ರೆ, ರಾತ್ರಿಯಿಡೀ ನೆನೆಸಿಟ್ಟು, ಕೊಂಚವೇ ಬೇಯಿಸಿ, ತುಪ್ಪದಲ್ಲಿ ಹುರಿದು, ಈರುಳ್ಳಿ, ಟೊಮೆಟೋ, ಸೌತೇಕಾಯಿ, ಸೈಂಧವ ಲವಣದ ಜೊತೆ ಮಿಕ್ಸ್ ಮಾಡಿ ಸೇವಿಸಬಹುದು. ಊಟಕ್ಕೂ ಕೊಂಚ ಹೊತ್ತು ಮುಂಚೆ, ಅಥವಾ ಊಟದ ಸಮಯ ಅಥವಾ ಸಂಜೆ ಸ್ನ್ಯಾಕ್ಸ್ ರೀತಿ ಇದನ್ನ ಸೇವಿಸಬಹುದು. ಆದ್ರೆ ಇದನ್ನ ತಿಂದ ಮೇಲೆ ನೀರು ಕುಡಿಯಬೇಡಿ.
ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ..?
ಇನ್ನು ಕೊಂಚ ಕಡಲೆ ಕಾಳನ್ನ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ. ಇದರಿಂದ ನಿಮ್ಮ ತ್ವಚೆ ಸುಂದರವಾಗುತ್ತದೆ. ನಿಮ್ಮ ಕೂದಲು ಸಧೃಡವಾಗುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.