ಗಂಡು ಮಕ್ಕಳಿಗಿಂತ, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಯಾಗೋದು. ಯಾಕಂದ್ರೆ ಅವರಲ್ಲಿ ಒಂದೊಂದು ಸ್ಟೇಜ್‌ನಲ್ಲೂ ಒಂದೊಂದು ರೀತಿಯ ಬದಲಾವಣೆಗಳು ಆಗತ್ತೆ. ಚಿಕ್ಕಂದಿನಿಂದ 15 ವರ್ಷದವರೆಗೂ ನಾರ್ಮಲ್ ಆಗಿದ್ರೆ, 15ರ ಬಳಿಕ ಮೆಚ್ಯೂರ್ ಆಗುತ್ತಾರೆ. ನಂತರ ವೈವಾಹಿಕ ಜೀವನ, ನಂತರ ಮಕ್ಕಳು ಹೆರುವುದು. ಇದಾದ ಬಳಿಕ, ವೃದ್ಧಾಪ್ಯ ಅಂದರೆ, ಮುಟ್ಟು ನಿಲ್ಲುವ ಸಮಯ. ಹೀಗೆ ಈ ಎಲ್ಲ ಸ್ಟೇಜ್‌ನಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ಆರೋಗ್ಯದ ಬಗ್ಗೆ ಹತ್ತು ಹಲವು ಪ್ರಶ್ನೆ ಕಾಡುತ್ತಲಿರುತ್ತದೆ. ಅದರಲ್ಲೂ ಸ್ತನದ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಹಾಗಾಗಿ ಇವತ್ತು ಡಾ. ದೀಪ್ಶಿಕಾ ಝಾ ಸ್ತನದ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಾ. ದೀಪ್ಶಿಕಾ ಪ್ರಕಾರ, ಎಲ್ಲ ಹೆಣ್ಣು ಮಕ್ಕಳ ಸ್ತನವೂ ಬೇರೆ ಬೇರೆ ರೀತಿ ಇರುತ್ತದೆ. ಹಾಗಾಗಿ ನೀವು ಬೇರೆಯವರನ್ನ ನೋಡಿ, ನಿಮ್ಮ ಸ್ತನದ ಆರೋಗ್ಯದ ಬಗ್ಗೆ ಚಿಂತಿಸಬೇಡಿ. ಕೆಲವರು ಮೆಚ್ಯೂರ್ ಆದ್ರೂ ಅಂಥವರಿಗೆ ಸ್ತನ ಬೆಳೆದಿರುವುದಿಲ್ಲ. ಇದು ಸಮಸ್ಯೆಯಲ್ಲ ಅಂತಾರೆ ದೀಪ್ಶಿಕಾ. ಹಾಗಾದ್ರೆ ಯಾವ ಸಮಯದಲ್ಲಿ ವೈದ್ಯರ ಬಳಿ ಹೋಗಬೇಕು ಅಂತಾ ಕೂಡ ದೀಪ್ಶಿಕಾ ಝಾ ಅವರು ಸಲಹೆ ನೀಡಿದ್ದಾರೆ.
ನಿಮ್ಮ ಸ್ತನ ಗಟ್ಟಿಯಾಗಿದ್ದರೆ, ಗೆಡ್ಡೆ ಬೆಳೆದ ರೀತಿ ನಿಮಗೆ ಫೀಲ್ ಆಗುತ್ತಿದ್ದರೆ, ಮತ್ತು ಅಲ್ಲಿ ನೋವಾಗುತ್ತಿದ್ದರೆ ನೀವು ಖಂಡಿತ ವೈದ್ಯರ ಬಳಿ ಹೋಗಬೇಕು. ಅಲ್ಲದೇ, ನೀವು ಸ್ತನ ಪಾನ ಮಾಡಿಸುವ ತಾಯಿ ಅಲ್ಲದಿದ್ದಲ್ಲಿ, ಸ್ತನದಿಂದ ಸೋರಿಕೆಯಾಗುತ್ತಿದ್ದಲ್ಲಿ, ಆಗಲೂ ವೈದ್ಯರ ಬಳಿ ನೀವು ಹೋಗಿ, ಇದಕ್ಕೆ ಸರಿಯಾದ ಚಿಕಿತ್ಸೆ ಪಡಿಯಬೇಕು.
ಇನ್ನು ಯಾವಾಗಲೂ ಬ್ರಾ ಹಾಕುವುದರಿಂದ ಕ್ಯಾನ್ಸರ್ ಬರುತ್ತದಾ ಅನ್ನೋದು ಹಲವರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ದೀಪ್ಶಿಕಾ, ನೀವು ಸರಿಯಾದ ಸೈಜಿನ ಬ್ರಾ ಹಾಕಿಕೊಂಡ್ರೆ, ನಿಮಗೇನು ತೊಂದರೆಯಾಗುವುದಿಲ್ಲ. ಕ್ಯಾನ್ಸರ್‌ಗೂ ಬ್ರಾ ಹಾಕುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಾರೆ ಡಾ. ದೀಪ್ಶಿಕಾ. ಆದ್ರೆ ನೀವು ಸರಿಯಾದ ಸೈಜ್‌ನ ಬ್ರಾ ಹಾಕದಿದ್ದಲ್ಲಿ ಸಮಸ್ಯೆ ಬರಬಹುದು.