Tuesday, October 22, 2024

Latest Posts

ತಲೆಗೆ ಯಾವಾಗ, ಎಷ್ಟು ಎಣ್ಣೆ ಹಾಕಬೇಕು..? ಕೂದಲಿನ ಆರೈಕೆಯ ಸರಿಯಾದ ವಿಧಾನ ತಿಳಿಯಿರಿ…

- Advertisement -

ನಾವು ನಮ್ಮ ಕೂದಲಿಗೆ ಎಷ್ಟೇ ಕೇರ್ ಮಾಡಿದ್ರೂ, ಅದು ಉದುರುದೇನು ತಪ್ಪೋದಿಲ್ಲಾ..? ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಾಗುವುದು. ರಾಶಿ ರಾಶಿ ಕೂದಲು ಉದುರುವುದೆಲ್ಲ, ಇಂದಿನ ಯುವ ಪೀಳಿಗೆಯವರ ಸಮಸ್ಯೆ. ಹಾಗಾದ್ರೆ ಈ ಸಮಸ್ಯೆಗೆ ಏನು ಕಾರಣವಿರಬಹುದು..? ನಾವು ಸರಿಯಾಗಿ ಆರೈಕೆ ಮಾಡುತ್ತಿಲ್ಲವೇ..? ಹಾಗಾದ್ರೆ ಕೂದಲ ಆರೈಕೆ ಮಾಡುವ ಸರಿಯಾದ ವಿಧಾನ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಯಾವ ರೀತಿಯ ಎಣ್ಣೆಯನ್ನ ಹಚ್ಚಿಕೊಳ್ಳಬಾರದು ಅನ್ನೋ ಬಗ್ಗೆ ತಿಳಿಯೋಣ. ಮಾರುಕಟ್ಟೆಯಲ್ಲಿ ಹಲವು ವಿಧದ ಪರಿಮಳದ ಎಣ್ಣೆ ಸಿಗುತ್ತದೆ. ಗುಲಾಬಿ, ಮಲ್ಲಿಗೆ, ಸಂಪಿಗೆ, ಚಂದನದ ಸುವಾಸನೆಯುಳ್ಳ ಎಣ್ಣೆಗಳು ಸಿಗುತ್ತದೆ. ಅಂಥ ಎಣ್ಣೆಗಳಿಂದ ತಲೆ ಕೂದಲನ್ನು ಎಂದಿಗೂ ಮಸಾಜ್ ಮಾಡಬೇಡಿ. ಯಾಕಂದ್ರೆ ಇದರಲ್ಲಿ ಕೆಮಿಕಲ್ ಅಂಶ ಹೆಚ್ಚಾಗಿದ್ದು, ಇದು ಕೂದಲು ಉದುರುವ ಹಾಗೆ ಮಾಡುತ್ತದೆ. ಹಾಗಾಗಿ ಅಂಗಡಿಯಲ್ಲಿ ಸಿಗುವ ಪರಿಮಳದ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಬೇಕಾದರೆ, ತೆಂಗಿನ ಎಣ್ಣೆ ಬಳಸಿ, ನೀವೇ ಮನೆಯಲ್ಲಿ ಪರಿಮಳದ ಎಣ್ಣೆ ತಯಾರಿಸಿ, ಬಳಸಿ.

ಇನ್ನು ಮಾರುಕಟ್ಟೆಯಲ್ಲಿ ತಣ್ಣಗಿನ ಎಣ್ಣೆ ಸಿಗುತ್ತದೆ. ಅದನ್ನು ಬಳಸಿದಾಗಲೆಲ್ಲ ನಿಮಗೆ ಕೂಲ್ ಕೂಲ್ ಎನ್ನಿಸುತ್ತದೆ. ಅಂಥ ಎಣ್ಣೆಯನ್ನು ಪದೇ ಪದೇ ಬಳಸಬೇಡಿ. ಯಾವಾಗಲಾದರೂ ನಿಮಗೆ ತಲೆ ನೋವು ಬಂದಾಗ ಮಾತ್ರ ಅದನ್ನು ಬಳಸಿ. ಯಾಕಂದ್ರೆ ಅದರಲ್ಲಿ ಕರ್ಪೂರದ ಅಂಶವಿರುತ್ತದೆ. ಮತ್ತು ಹೆಚ್ಚು ಕರ್ಪೂರದ ಅಂಶವಿರುವ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ, ಉಷ್ಣತೆ ಹೆಚ್ಚಾಗಿ, ಕೂದಲು ಉದುರುವ ಸಾಧ್ಯತೆ ಇರುತ್ತದೆ.

ಹಾಗಾದ್ರೆ ಯಾವ ಎಣ್ಣೆಯಿಂದ ಹೆಡ್ ಮಸಾಜ್ ಮಾಡುವುದು ಸೂಕ್ತ ಅನ್ನೋ ಪ್ರಶ್ನೆಗೆ ಉತ್ತರ. ತೆಂಗಿನ ಎಣ್ಣೆ. ತೆಂಗಿನ ಎಣ್ಣೆಗಿಂತ ಬೆಸ್ಟ್ ಹೇರ್ ಆಯ್ಲ ಬೇರೆ ಯಾವುದು ಇಲ್ಲ. ಇದನ್ನ ಹಚ್ಚುವುದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಆದ್ರೆ ಆ ಎಣ್ಣೆ ಶುದ್ಧವಾಗಿರಬೇಕು. ತೆಂಗಿನ ಎಣ್ಣೆಯನ್ನು ಕೊಂಚ ಬಿಸಿ ಮಾಡಿ, ಕೂದಲಿಗೆ ಮಸಾಜ್ ಮಾಡಿ, ಕೆಲ ಗಂಟೆಗಳ ನಂತರ ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ ತಲೆ ಸ್ನಾನ ಮಾಡಿದ್ರೆ ನಿಮ್ಮ ಕೂದಲು ಸಧೃಡವಾಗಿ, ಆರೋಗ್ಯಕರವಾಗಿರುತ್ತದೆ.

- Advertisement -

Latest Posts

Don't Miss