Friday, December 13, 2024

Latest Posts

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

- Advertisement -

ಡ್ರೈಫ್ರೂಟ್ಸ್ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಲಾಭವಿದೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವೊಂದು ನಟ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಒಣಹಣ್ಣನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಿದ್ರೆ, ನಿಮ್ಮ ದೇಹದಲ್ಲಿ ಹಾರ್ಮೋನು ಬ್ಯಾಲೆನ್ಸ್ ಸರಿಯಾಗಿ ಇರುತ್ತದೆ. ಸೌಂದರ್ಯ ವೃದ್ಧಿಯಾಗುತ್ತದೆ. ಅಲ್ಲದೇ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಂದ ಇದು ನಿಮಗೆ ಮುಕ್ತಿ ಕೊಡಿಸುತ್ತದೆ. ಹಾಗಾದ್ರೆ ಯಾವುದು ಆ ಒಣಹಣ್ಣು ಅಂತಾ ತಿಳಿಯೋಣ ಬನ್ನಿ..

ಇಂದು ನಾವು ತಿಳಿಸುತ್ತಿರುವ ಒಣಹಣ್ಣು ಯಾವುದೆಂದರೆ ಅಖ್ರೋಟ್ ಅಥವಾ ವಾಲ್ನಟ್. ನಿಮ್ಮ ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ನೀವು ಅಖರೋಟ್ ಸೇವನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಅಖರೋಟ್ ತಿನ್ನಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಇದರ ಶೇಪ್ ಕೂಡ ಮೆದುಳಿನ ರೀತಿ ಇದ್ದು, ಇದು ನೆನಪಿನ ಶಕ್ತಿ ಹೆಚ್ಚಿಸಲು ಅನುಕೂಲಕರವಾಗಿದೆ.

ಗರ್ಭಿಣಿಯರಿಗೂ ಅಖ್ರೋಟ್ ಸೇವನೆ ಮಾಡಲು ಹೇಳಲಾಗತ್ತೆ. ಬೆಳಿಗ್ಗೆ ನೆನೆಸಿದ ಅಖ್ರೋಟನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎನ್ನಲಾಗಿದೆ. ಹೀಗೆ ಸೇವಿಸುವುದರಿಂದ ತಾಯಿಯ ಸೌಂದರ್ಯ ಮತ್ತು ಆರೋಗ್ಯದ ಜೊತೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಆ ಮಗು ಚುರುಕಾಗಿರುತ್ತದೆ. ಅದರ ನೆನಪಿನ ಶಕ್ತಿ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ಯಾರಿಗೆ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಅನ್ನೋ ಆಸೆ ಇರುತ್ತದೆಯೋ, ಅಂಥ ಗರ್ಭಿಣಿಯರು ನೆನೆಸಿದ ಅಖ್ರೋಟನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.

ಇನ್ನು ನೀವು ಪ್ರತಿದಿನ 2ರಿಂದ 3 ವಾಲ್ನಟ್ ತಿನ್ನಬಹುದು. ಅದಕ್ಕಿಂತ ಹೆಚ್ಚು ವಾಲ್ನಟ್ ತಿಂದರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಮಲ ವಿಸರ್ಜನೆಗೆ ತೊಂದರೆಯಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿದಿನ 2ರಿಂದ 3 ವಾಲ್ನಟ್ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ. ಇದರಿಂದ ನಿಮ್ಮ ಸ್ಕಿನ್ ಕೂಡ ಉತ್ತಮವಾಗಿರುತ್ತದೆ. ನಿಮ್ಮ ಕೂದಲಿನ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿ ಹಾರ್ಮೋನ್ ಬ್ಯಾಲೆನ್ಸ್ ಸರಿಯಾಗಿ ಇರುವಂತೆ ಮಾಡುತ್ತದೆ.

ಎಡಿಪೋನೆಕ್ಟಿಂಗ್ ಹಾರ್ಮೋನು ಬ್ಯಾಲೆನ್ಸ್ ಮಾಡಲು ವಾಲ್ನಟ್ ಸಹಾಯ ಮಾಡುತ್ತದೆ. ಇದರಿಂದ ಶುಗರ್, ಬಿಪಿ, ಹೃದಯ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಪಿಸಿಓಎಸ್, ಪಿಸಿಓಡಿ, ಥೈರಾಯ್ಡ್ ಪ್ರಾಬ್ಲಮ್, ಮುಟ್ಟಿನ ಸಮಸ್ಯೆ ಇದೆಲ್ಲ ಇದ್ದವರಿಗೆ ವಾಲ್ನಟ್‌ ಒಂದು ವರದಾನವಿದ್ದಂತೆ. ನಿಮ್ಮ ದೇಹದಲ್ಲಿ ಹಾರ್ಮೋನ್ ಬ್ಯಾಲೆನ್ಸ್ ಸರಿಯಾಗಿ ಇದ್ದರೆ, ನಿಮ್ಮ ಆರೋಗ್ಯ, ಸೌಂದರ್ಯ ಕೂಡ ಉತ್ತಮವಾಗಿರುತ್ತದೆ. ನಿಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ.

ಉತ್ತಮ ನಿದ್ದೆಗಾಗಿ ಈ ಸೂತ್ರವನ್ನು ಅನುಸರಿಸಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

- Advertisement -

Latest Posts

Don't Miss