ವರ್ಷದ ಮೊದಲ ಸೂರ್ಯ ಗ್ರಹಣ ಸಮೀಪಿಸುತ್ತಿದೆ. ಇದೇ ಏಪ್ರಿಲ್ 30ಕ್ಕೆ ಸೂರ್ಯಗ್ರಹಣ ನಡೆಯಲಿದ್ದು, 15 ದಿನಗಳ ಬಳಿಕ ಚಂದ್ರಗ್ರಹಣವೂ ನಡೆಯಲಿದೆ. ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬರುವ ಈ ಗ್ರಹಣಗಳು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಏಪ್ರಿಲ್ 30 ಮಧ್ಯರಾತ್ರಿ 12.15ರಿಂದ ಮೇ 1 ಬೆಳಿಗ್ಗೆ 4.7ರವರೆಗೆ ಸೂರ್ಯ ಗ್ರಹಣ ಸಂಭವಿಸಲಿದೆ. ಮತ್ತು ಮೇ 16ರ ಬೆಳಿಗ್ಗೆ 8.59ರಿಂದ 10.23ರವರೆಗೆ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ಅನ್ನೋದು ಅಶುಭ ವೇಳೆ. ಆದ್ದರಿಂದಲೇ ಈ ವೇಳೆಯಲ್ಲಿ ಯಾವುದೇ ಶುಭಕಾರ್ಯವನ್ನು ಮಾಡುವುದಿಲ್ಲ. ಆದ್ರೆ ಈ ಸಮಯದಲ್ಲಿ ಕೆಲ ರಾಶಿಗಳಿಗೆ ಒಳ್ಳೆಯದಾಗಲಿದೆ ಮತ್ತು ಕೆಲ ರಾಶಿಗಳಿಗೆ ಅಶುಭವಾಗಲಿದೆ. ಹಾಗಾಗಿ ಇಂದು ನಾವು ಶುಭಫಲವಿರುವ ಮೂರು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.
ಮೇಷ: ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳೆರಡೂ ಮೇಷ ರಾಶಿಯವರಿಗೆ ಶುಭದಾಯಕವಾಗಿದೆ. ನೀವು ಕೆಲಸಕ್ಕೆ ಸೇರುವುದಾದರೆ, ಉದ್ಯಮ ಆರಂಭಿಸುವುದಿದ್ದರೆ ಆರಂಭಿಸಬಹುದು. ಇದರಿಂದ ಹಲವು ಸಮಯದವರೆಗೆ ನೀವು ಲಾಭ ಗಳಿಸಬಹುದು. ವ್ಯಾಪಾರದಲ್ಲಿ ಕೊಂಚ ಕಷ್ಟಪಟ್ಟರೆ, ಯಶಸ್ಸು ಕಟ್ಟಿಟ್ಟ ಬುತ್ತಿ.
ಸಿಂಹ: ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳೆರಡೂ ಸಿಂಹ ರಾಶಿಯವರಿಗೆ ಉತ್ತಮವಾಗಿದೆ. ಈ ಸಮಯ ಪ್ರವಾಸಕ್ಕೆ ಪ್ರಾಶಸ್ತ್ಯವಾಗಿದೆ. ಈ ಸಮಯದಲ್ಲಿ ನೀವು ಕಷ್ಟಪಟ್ಟು ಕಚೇರಿ ಕೆಲಸ ಮಾಡಿದ್ದಲ್ಲಿ, ನಿಮಗೆ ಬಡ್ತಿ ಸಿಗುವ ಸಂಭವವೂ ಹೆಚ್ಚಿದೆ. ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ.
ಧನು: ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳೆರಡೂ ಧನು ರಾಶಿಯವರಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ನಿಮ್ಮ ಹಣದ ಸಮಸ್ಯೆ ಬಗೆಹರಿಯುತ್ತದೆ. ಯಾರಾದರೂ ಸಾಲ ಕೊಡುವುದಿದ್ದಲ್ಲಿ, ಆ ಸಾಲ ನೀವು ಪಡೆಯಬಹುದು. ಅಥವಾ ದುಡ್ಡಿನ ಅಡಚಣೆ ಇದ್ದಲ್ಲಿ, ಆ ಸಮಸ್ಯೆ ಬಗೆ ಹರಿಯುತ್ತದೆ. ನೀವು ಯಾವುದಾದರೂ ಕೆಲಸಕ್ಕೆ ಸೇರುವುದಾದರೆ ಸೇರಬಹುದು. ಅಲ್ಲದೇ, ಉದ್ಯಮ ಮಾಡುವುದಾದರೆ ಮಾಡಬಹುದು. ಇದರಿಂದ ನಿಮ್ಮ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಹೊಂದುವಿರಿ.