Wednesday, June 25, 2025

Latest Posts

‘ಸ್ಲಿಮ್ ಆಗಲು ಸರ್ಜರಿ ಮಾಡಿಕೊಳ್ಳುವುದು ಎಷ್ಟು ಡೆಂಜರಸ್ ಗೊತ್ತಾ’

- Advertisement -

ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್‌ ಆಗಿ, ರಾತ್ರೋ ರಾತ್ರಿ ನಾನು ಸಣ್ಣ ಆಗಿ ಬಿಡಬೇಕು. ಡಯಟ್‌ ಎಲ್ಲಾ ಮಾಡೋಕ್ಕೆ ಪುರ್ಸೋತ್ತಿಲ್ಲಾ. ನಾಳೆ ಬೆಳಿಗ್ಗೆನೇ ನಾನು ಸಣ್ಣ ಆಗ್ಬೇಕು. ಫ್ಯಾಟ್ ಬರ್ನ್ ಸರ್ಜರಿ ಮಾಡಿಸಿಕೊಂಡು ಬಿಡ್ಲಾ ಮೇಡಂ ಅಂತಾ ಕೇಳಿಕೊಂಡು ನನಗೆ ಸುಮಾರು ಜನ ಕಾಲ್ ಮಾಡ್ತಾರೆ. ಆದ್ರೆ ಇದು ಖಂಡಿತಾ ತಪ್ಪು, ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.

ಸರಿಯಾಗಿ ಡಯಟ್ ಮಾಡಿ, ಎಕ್ಸಸೈಜ್ ಮಾಡಿದಾಗ ನಮ್ಮ ದೇಹದಲ್ಲಿ ಎಷ್ಟು ಚೇಂಜಸ್ ಆಗತ್ತೆ ಅನ್ನೋದು ನಮಗೆ ಗೊತ್ತಾಗತ್ತೆ. ಅದು ನ್ಯಾಚುರಲ್. ಆದ್ರೆ ಈ ಸರ್ಜರಿ ಮಾಡೋದು ತುಂಬಾನೇ ಡೇಂಜರಸ್. ಕೆಲವು ಗರ್ಭಿಣಿಯರಿಗೆ ಹೊಟ್ಟೆ ಭಾಗದಲ್ಲಿ ಸರ್ಜರಿ ಮಾಡೋಕ್ಕೆ ಅನಸ್ತೇಶಿಯಾ ಕೊಡ್ತಾರೆ. ಆ ರೀತಿ ಒಮ್ಮೆ ಕೊಟ್ಟ ಅನಸ್ತೇಶಿಯಾದಿಂದ ಆ ಹೆಣ್ಣು ಮಕ್ಕಳು ಬ್ಯಾಕ್‌ಪೇನ್ ಅಂತಾ ಲೈಫ್ಲಾಂಗ್ ಒದ್ದಾಡ್ತಾರೆ. ಅಂಥದ್ರಲ್ಲಿ ಒಂದು ಅನಸ್ತೇಶಿಯಾ ಕೊಟ್ಟು, ನಮ್ಮ ದೇಹದಲ್ಲಿರುವ ಕೊಬ್ಬನ್ನೆಲ್ಲಾ ತೆಗೆದು ಹಾಕೋದು ಸಾಮಾನ್ಯವಾದ ಮಾತಲ್ಲಾ ಅಂತಾರೆ ಭೂಮಿಕಾ.

ಕೆಲವರು ಮಾತ್ರೆ ತೆಗೆದುಕೊಂಡು ಫ್ಯಾಟ್ ಲಾಸ್ ಮಾಡೋಕ್ಕೆ ಹೋಗ್ತಾರೆ. ಅದು ಕೂಡಾ ಉತ್ತಮವಲ್ಲ. ಇನ್ನು ನನ್ನ ಬಳಿ ಟ್ರೇನಿಂಗ್‌ಗೆ ಅಂತಾ ಸುಮಾರು ಹೆಣ್ಣು ಮಕ್ಕಳು ಬಂದು ಕೇಳೋದು ಒಂದೆ. ನಾನು ಸಿಕ್ಕಾಪಟ್ಟೆ ಸಣ್ಣ ಆಗ್ಬೇಕು. ಆದ್ರೆ ನಾನು ರೈಸ್ ಬಿಡಕ್ಕಾಗಲ್ಲಾ, ಜಂಕ್ ಫುಡ್ ತಿನ್ನೋದು ಸ್ಟಾಪ್ ಮಾಡಕ್ಕಾಗಲ್ಲಾ. ತರಕಾರಿ, ಸೊಪ್ಪೆಲ್ಲಾ ನನಗೆ ಅಷ್ಟು ಇಷ್ಟಾ ಆಗಲ್ಲಾ ಅಂತಾ ಹೇಳ್ತಾರೆ. ಹೀಗೆಲ್ಲ ಅಂದುಕೊಳ್ಳುವವರೇ ಸರ್ಜರಿ ಮೊರೆ ಹೋಗೋದು.

ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಪ್ರೆಗ್ನೆನ್ಸಿ ಸಮಸ್ಯೆ, ಪಿರಿಯಡ್ಸ್ ಸಮಸ್ಯೆ, ಹೀಗೆ ಇತ್ಯಾದಿ ಸಮಸ್ಯೆ ಎದುರಿಸಬೇಕಾಗುತ್ತದೆ. ಗಂಡು ಮಕ್ಕಳೇ ಇರಲಿ ಹೆಣ್ಣು ಮಕ್ಕಳೇ ಇರಲಿ ಯಾರೇ ಇರಲಿ ನ್ಯಾಚುರಲ್ ರೀತಿಯಿಂದ ನಿಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಂಡ್ರೆ ಉತ್ತಮ ಅಂತಾರೆ ಭೂಮಿಕಾ.

- Advertisement -

Latest Posts

Don't Miss