ಮನುಷ್ಯ ಯಾವುದಕ್ಕೆ ಬೆಲೆ ಕೊಡದಿದ್ದರೂ, ಸಂಬಂಧಕ್ಕೆ ಬೆಲೆ ಕೊಡಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಯಾಕಂದ್ರೆ ನಾವು ನಮ್ಮ ಮನೆ ಜನರಿಗೆ ಏನಾದ್ರೂ ಕಷ್ಟ ಆದ್ರೆ, ಎಷ್ಟು ದುಃಖ ಪಡ್ತೇವೆ. ಆದ್ರೆ ನಮ್ಮ ಮನೆ ಜನರು ಯಾರಾದರೂ ತೀರಿ ಹೋದಾಗ, ಅವರ ಶವವನ್ನ ನಾವು ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ. ಬೇಗ ಬೇಗ ಅಂತ್ಯಸಂಸ್ಕಾರ ಮಾಡಿ ಮುಗಿಸುತ್ತೇವೆ. ಯಾಕೆ ಹೀಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ಮಹತ್ವವನ್ನು ಹೊಂದಿದ ಗ್ರಂಥ ಅಂದ್ರೆ ಗರುಡ ಪುರಾಣ. ಇದರಲ್ಲಿ ಹುಟ್ಟಿನಿಂದ ಹಿಡಿದು ಮೃತ್ಯುವಿನವರೆಗೂ ಎಲ್ಲ ವಿಷಯಗಳ ಬಗ್ಗೆ ವಿವರಣೆ ನೀಡಲಾಗಿದೆ. ಅಂತೆಯೇ ಯಾಕೆ ಶವವನ್ನು ಹೆಚ್ಚು ಸಮಯ ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತಾ ಕೂಡ ಇದರಲ್ಲಿ ಹೇಳಲಾಗಿದೆ. ಯಾಕೆ ಹೀಗೆ ಅಂತಾ ಹೇಳಿದ್ರೆ, ನಿಮ್ಮ ಮನೆಯ ಬಳಿ ಯಾರದ್ದಾದರೂ ಮನೆಯಲ್ಲಿ ಶುಭಕಾರ್ಯ ಮಾಡಬೇಕೆಂದಿರುತ್ತಾರೆ. ಅವರು ಶುಭಕಾರ್ಯ ಶುರು ಮಾಡಬೇಕಾದರೆ, ನಿಮ್ಮ ಮನೆಯಲ್ಲಿರುವ ಶವ ಹೊರಡಬೇಕು. ನಂತರವೇ ಅವರು ಶುಭಕಾರ್ಯ ಮಾಡಬೇಕಾಗುತ್ತದೆ.
ಆದ್ರೆ ಇದಕ್ಕೆ ಇರುವ ನಿಜವಾದ ಕಾರಣ ಅಂದ್ರೆ, ಮೃತ ವ್ಯಕ್ತಿಯ ಶವ ಬಹುಬೇಗ ಕೊಳೆಯುತ್ತದೆ. ಅದರಿಂದ ಕೀಟಾಣುಗಳು ಹೊರ ಬರುವ ಸಾಧ್ಯತೆ ಇರುತ್ತದೆ. ಇದರಿಂದ ರೋಗಾಣುಗಳು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೇ, ಯಾರ ಮನೆಯಲ್ಲಿ ಸಾವಾಗಿರುತ್ತದೆಯೋ, ಆ ಮನೆಯಲ್ಲಿ ಶವವಿರುವ ತನಕ ಒಲೆ ಉರಿಸುವಂತಿಲ್ಲ. ಅಡುಗೆ ಮಾಡುವಂತಿಲ್ಲ. ಹಾಗಾಗಿ ಮರಣ ಹೊಂದಿದಾಗ ಶವಸಂಸ್ಕಾರ ಬೇಗ ಮಾಡಬೇಕು.