ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ ವಿರುದ್ಧ ಸಂಚು ಮಾಡುತ್ತಿದ್ದರೆ, ಅದನ್ನ ಚತುರತೆಯಿಂದ ಅರಿತು, ನೀವು ಅವರನ್ನ ಎದುರಿಸಬೇಕು. ಇಲ್ಲವಾದಲ್ಲಿ ನಿಮ್ಮ ಅವನತಿ ಖಂಡಿತ ಎನ್ನುತ್ತದೆ ಗರುಡ ಪುರಾಣ.
ಎರಡನೇಯದಾಗಿ ಜೀವನದಲ್ಲಿ ಉದ್ಧಾರವಾಗಲು, ನೀವು ಸ್ವಚ್ಛವಾಗಿರಬೇಕು. ಸ್ವಚ್ಛ ಬಟ್ಟೆಯನ್ನ ಧರಿಸಬೇಕು. ನಿಮ್ಮ ಬಳಿ ಎರಡೇ ಬಟ್ಟೆಯಿರಲಿ ಅಥವಾ ನಾಲ್ಕು ಬಟ್ಟೆ ಇರಲಿ, ನೀವು ಅದನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಕಿದ ಬಟ್ಟೆಯನ್ನೇ ಕೊಳೆ ಮಾಡಿಕೊಂಡು, ಪದೇ ಪದೇ ಹಾಕುತ್ತಿದ್ದರೆ, ಅಥವಾ ಗಲೀಜು ಬಟ್ಟೆಯನ್ನ ತೊಟ್ಟರೆ, ನಿಮಗೆ, ನಿಮ್ಮ ಮನೆಗೆ ದರಿದ್ರ ತಾಗುತ್ತದೆ ಅಂದಿದೆ ಗರುಡ ಪುರಾಣ.
ಮೂರನೇಯದಾಗಿ ಜೀವನದಲ್ಲಿ ಯಶಸ್ಸು ಪಡೆಯಲು ಅಭ್ಯಾಸ ಬಹು ಮುಖ್ಯವಾಗಿದೆ. ನೀವು ವಿದ್ಯಾಭ್ಯಾಸದಲ್ಲಿ ಉತ್ತಮರಾಗಲು, ಯಾವುದಾದರೂ ಆಟೋಟದಲ್ಲಿ, ಕಲೆಯಲ್ಲಿ ಯಾವುದರಲ್ಲೇ ಆದರೂ, ಯಶಸ್ಸು ಸಾಧಿಸಬೇಕಾದಲ್ಲಿ, ಅದಕ್ಕಾಗಿ ಅಭ್ಯಾಸ ನಡೆಸುವುದು ತುಂಬಾ ಮುಖ್ಯವಾಗಿದೆ. ಅಂದ್ರೆ ಪ್ರ್ಯಾಕ್ಟೀಸ್ ಮಾಡುವುದರಿಂದ ಮಾತ್ರ ಆ ಕಲೆಯಲ್ಲಿ ನಾವು ನಿಪುಣರಾಗಲು ಸಾಧ್ಯ.
ನಾಲ್ಕನೇಯದಾಗಿ ಆದಷ್ಟು ನಾವು ನಿರೋಗಿಗಳಾಗಿರಲು ಪ್ರಯತ್ನಿಸಬೇಕು. ಅದು ನಾವು ಸೇವಿಸುವ ಆರೋಗ್ಯದಿಂದ ಮಾತ್ರ ಸಾಧ್ಯ. ಸಾಧ್ಯವಾದಷ್ಟು ಆರೋಗ್ಯಕರ ಊಟವನ್ನ ಮಾಡುವುದು, ಸಾಧ್ಯವಾದಷ್ಟು ಶುದ್ಧ ನೀರನ್ನು ಕುಡಿಯುವುದರಿಂದ, ನಾವು ನಿರೋಗಿಗಳಾಗಲು ಸಾಧ್ಯವಾಗುತ್ತದೆ. ಜೊತೆಗೆ ವ್ಯಾಯಾಮ, ನಡಿಗೆಯೂ ಮುಖ್ಯ.
ಐದನೇಯದಾಗಿ ಧರ್ಮ ಪಾಲನೆ ಮಾಡಬೇಕು. ಮನುಷ್ಯ ಯಾವುದೇ ಧರ್ಮದಲ್ಲಿ ಜನಿಸಲಿ, ಅವನು ತನಮ್ನ ಧರ್ಮ ಪಾಲನೆ ಮಾಡುವುದು ತುಂಬಾ ಮುಖ್ಯವಾಗಿದೆ. ಅದಕ್ಕಾಗಿಯೇ ಧರ್ಮೋ ರಕ್ಷತಿ, ರಕ್ಷಿತಃ ಎಂದು ಹೇಳಿರುವುದು.