ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ 2ರಿಂದ 3 ಬಾರಿ ತಲೆ ಸ್ನಾನ ಮಾಡಿದರೆ ಸಾಕು. ಆದ್ರೆ ಕೆಲವರು ಪ್ರತಿದಿನ ತಲೆಸ್ನಾನ ಮಾಡುತ್ತಾರೆ. ಅಥವಾ ಒಂದಿನ ಬಿಟ್ಟು ಒಂದಿನ ತಲೆ ಸ್ನಾನ ಮಾಡುತ್ತಾರೆ. ಇದು ತಪ್ಪು. ಯಾಕಂದ್ರೆ ನಾವು ಅಗತ್ಯಕ್ಕಿಂತ ಹೆಚ್ಚು ತಲೆ ಸ್ನಾನ ಮಾಡಿದ್ರೆ, ಕೂದಲು ಒಣಗಿ, ಉದುರುತ್ತದೆ. ಹಾಗಾಗಿ ವಾರಕ್ಕೆರಡು ಬಾರಿ ತಲೆ ಸ್ನಾನ ಮಾಡಿದ್ರೆ ಸಾಕು.
ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ..
ಎರಡನೇಯ ತಪ್ಪು, ತಲೆ ಸ್ನಾನಕ್ಕೆ ಬಿಸಿ ನೀರಿನ ಬಳಕೆ ಮಾಡೋದು. ಹಲವರು ತಲೆ ಸ್ನಾನಕ್ಕಾಗಿ ಬಿಸಿ ನೀರಿನ ಉಪಯೋಗ ಮಾಡುತ್ತಾರೆ. ಇದರಿಂದ ಕೂದಲಿನ ಬುಡ ಸಡಿಲವಾಗಿ, ಕೂದಲು ಉದುರಲು ಶುರುವಾಗುತ್ತದೆ. ನಿಮ್ಮ ಕೂದಲು ಶೈನ್ ಕಳೆದುಕೊಳ್ಳುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದಲೇ ತಲೆ ಸ್ನಾನ ಮಾಡಿ.
ಮೂರನೇಯ ತಪ್ಪು, ಕಂಡಿಶ್ನರನ್ನು ಕೂದಲಿನ ಬುಡಕ್ಕೆ ಹಚ್ಚುವುದು. ನೀವು ಮನೆಯಲ್ಲೇ ತಯಾರಿಸಿದ, ಹೇರ್ ಮಾಸ್ಕ್ ಹಚ್ಚುತ್ತಿದ್ದಲ್ಲಿ ಮಾತ್ರ, ಅದನ್ನ ಕೂದಲಿನ ಬುಡಕ್ಕೆ ಹಚ್ಚಿ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಮಾಸ್ಕ್, ಕಂಡಿಶ್ನರನ್ನು ಯಾವುದೇ ಕಾರಣಕ್ಕೂ ಕೂದಲಿನ ಬುಡಕ್ಕೆ ಹಚ್ಚಬೇಡಿ. ಇದರಿಂದ ತಲೆ ಕೂದಲು ಶೈನ್ ಆಗುವ ಬದಲು. ಉದುರಿ ಹೋಗುತ್ತದೆ.
ಊಟ ಮಾಡುವ ಮುನ್ನ ಅನ್ನವನ್ನ ದೇವರಿಗೆ ನೈವೇದ್ಯ ಮಾಡಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?
ನಾಲ್ಕನೇಯ ತಪ್ಪು, ಟವೆಲ್‌ನಿಂದ ಜೋರಾಗಿ ತಲೆ ಕೂದಲು ಒರೆಸಿಕೊಳ್ಳುವುದು. ತಲೆ ಸ್ನಾನ ಮಾಡಿದ ಮೇಲೆ ಅದನ್ನು ಒಣಗಿಸಲು ನಾವು ಟವೆಲ್ ಬಳಕೆ ಮಾಡುತ್ತೇವೆ. ಆದ್ರೆ ಜೋರಾಗಿ ನಾವು ಅದರ ಬಳಕೆ ಮಾಡುವುದರಿಂದ ಕೂದಲು ತುಂಡಾಗುತ್ತದೆ. ಹಾಗಾಗಿ ನಿಧಾನವಾಗಿ ಕೂದಲಿಗೆ ಟವೆಲ್ ಬಳಕೆ ಮಾಡಿ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ.