Friday, November 22, 2024

Latest Posts

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

- Advertisement -

ಮೊದಲ ಭಾಗದಲ್ಲಿ ನಮಗೆ ದಟ್ಟವಾದ, ಸುಂದರವಾದ ಕೂದಲು ಬೇಕೆಂದಲ್ಲಿ ನಾವು ಯಾವ 4 ತಪ್ಪು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಇನ್ನುಳಿದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ.

ಐದನೇಯ ತಪ್ಪು, ಸ್ಟ್ರೇಟ್ನರ್, ಹೇರ್ ಡ್ರೈಯರನ್ನ ಹೆಚ್ಚು ಬಳಕೆ ಮಾಡೋದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳ ಬಳಿ, ಸ್ಟ್ರೇಟ್ನರ್ ಮತ್ತು ಹೇರ್ ಡ್ರೈಯರ್‌ಗಳಿದೆ. ಇದನ್ನು ಬಳಸುವುದರಿಂದ ನಮ್ಮ ಕೂದಲು ಆ ಕ್ಷಣಕ್ಕೆ ಚಂದಗಾಣಿಸಿದರೂ ಕೂಡ, ಕೆಲ ವರ್ಷಗಳ ಬಳಿಕ, ನಮ್ಮ ಕೂದಲು ಉದುರಲು ಶುರುವಾಗುತ್ತದೆ. ಕೂದಲ ಬುಡ ಶಕ್ತಿ ಕಳೆದುಕೊಳ್ಳುತ್ತದೆ. ಯಾಕಂದ್ರೆ ಇದು ಕೂದಲಿಗೆ ಹಾನಿಕಾರಕ. ಹಾಗಾಗಿ ಸ್ಟ್ರೇಟ್ನರ್, ಹೇರ್ ಡ್ರೈಯರ್ ಬಳಸಬೇಡಿ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಆರನೇಯ ತಪ್ಪು, ತಲೆ ಒದ್ದೆ ಇರುವಾಗಲೇ ಬಾಚಿಕೊಳ್ಳುವುದು. ನೀವು ತಲೆ ಸ್ನಾನ ಮಾಡಿದಾಗ, ನಿಮ್ಮ ಕೂದಲ ಬುಡ ನಯವಾಗಿರುತ್ತದೆ. ಕೂದಲು ಒದ್ದೆಯಾಗಿರುತ್ತದೆ. ಈ ವೇಳೆ ನೀವು ಬಾಚಿಕೊಂಡರೆ, ಕೂದಲು ಉದುರುತ್ತದೆ. ಹಾಗಾಗಿ ಒದ್ದೆ ಕೂದಲಿಗೆ ಯಾವತ್ತೂ ಬಾಚಲು ಹೋಗಬೇಡಿ.

ಏಳನೇಯ ತಪ್ಪು, ಬಿಸಿಲಿಗೆ ಕೂದಲು ಬಿಟ್ಟು ತಿಗುರುವುದು. ಸುಡು ಬಿಸಿಲಿನಲ್ಲೂ ನಾವು ಚೆಂದಗಾಣಿಸಬೇಕು ಎಂದು ಹಲವು ಹೆಣ್ಣು ಮಕ್ಕಳು, ಬಯಸುತ್ತಾರೆ. ಹಾಗಾಗಿ ಕೂದಲು ಬಿಟ್ಟುಕೊಂಡೇ ಬಿಸಿಲಿಗೆ ಹೋಗುತ್ತಾರೆ. ಆದ್ರೆ ಇದು ತಪ್ಪು, ನೀವು ಬಿಸಿಲಿಗೆ ಕೂದಲು ಬಿಟ್ಟರೆ, ನಿಮ್ಮ ಕೂದಲು ಒಣಗುತ್ತದೆ. ಶೈನ್ ಕಳೆದುಕೊಳ್ಳುತ್ತದೆ. ಹಾಗಾಗಿ ಬಿಸಿಲಿಗೆ ಹೋಗುವಾಗ, ತಲೆಗೊಂದು ಬಟ್ಟೆ ಕಟ್ಟಿಕೊಳ್ಳಿ.

ಊಟ ಮಾಡುವ ಮುನ್ನ ಅನ್ನವನ್ನ ದೇವರಿಗೆ ನೈವೇದ್ಯ ಮಾಡಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಎಂಟನೇಯ ತಪ್ಪು, ಎಣ್ಣೆ ಮಸಾಜ್ ಮಾಡಿ, ಹಾಗೆ ಬಿಡುವುದು. ಹಲವರಿಗೆ ಪ್ರತಿದಿನ ಎಣ್ಣೆ ಮಸಾಜ್ ಮಾಡದಿದ್ದಲ್ಲಿ, ತಲೆ ನೋವು ಶುರುವಾಗುತ್ತದೆ. ಹಾಗಾಗಿ ಅವರು ಕೂದಲಿಗೆ ಎಣ್ಣೆ ಹಚ್ಚಿಕೊಂಡೇ, ತಿರುಗಾಡುತ್ತಾರೆ. ಇದರಿಂದ ನಿಮ್ಮ ಕೂದಲಿಗೆ ಧೂಳು ತಗುಲಿ, ನಿಮ್ಮ ಕೂದಲು ಉದುರುತ್ತದೆ. ಮತ್ತು ಒಣಗುತ್ತದೆ. ಹಾಗಾಗಿ ಕೂದಲಿಗೆ ಎಣ್ಣೆ ಹಾಕಿದ ಬಳಿಕ, ತಲೆ ಸ್ನಾನ ಮಾಡಿಯೇ ಹೊರಗೆ ಹೋಗಿ.

- Advertisement -

Latest Posts

Don't Miss