Friday, October 18, 2024

Latest Posts

ಪವನಪುತ್ರ ಹನುಮಾನ್ ಬಳಿ ಗಧೆ ಹೇಗೆ ಬಂತು..? ಅದನ್ನು ಕೊಟ್ಟಿದ್ದು ಯಾರು…?

- Advertisement -

ಪವನಪುತ್ರ ಹನುಮಾನ್ ಹಲವರ ಇಷ್ಟದೇವರು. ಹನುಮನನ್ನು ನೆನೆದರೆ, ಸಕಲ ಕಷ್ಟಗಳನ್ನು ಬಗೆಹರಸುತ್ತಾನೆ. ಶಕ್ತಿ ಕೊಡುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಹನುಮನನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಹನುಮನ ಆಯುಧ ಯಾವುದು ಎಂದರೆ, ಗಧೆ. ಹಾಗಾದ್ರೆ ಹನುಮನಿಗೆ ಈ ಗಧೆ ಹೇಗೆ ಸಿಕ್ಕಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ..!

ಬಾಲ್ಯದಲ್ಲಿ ಹನುಮಂತ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೋದ. ಹನುಮಂತನೇನಾದ್ರೂ ಸೂರ್ಯನನ್ನು ತಿಂದ್ರೆ, ಇಡೀ ವಿಶ್ವವೇ ಕತ್ತಲೆಯಾಗುತ್ತದೆ ಎಂದು ಇಂದ್ರ, ತನ್ನ ವಜ್ರಾಯುಧದಿಂದ ಹನುಮನ ಬೆನ್ನಿಗೆ ಹೊಡೆದ. ಇದರಿಂದ ಹನುಮಂತ ನೆಲಕ್ಕೆ ಬಿದ್ದ. ಆಗ ಕೋಪಗೊಂಡ ವಾಯು, ಇಡೀ ಲೋಕದಲ್ಲಿ ಬೀಸುತ್ತಿದ್ದ ಗಾಳಿಯನ್ನು ತಡೆದ. ಆಗ ಪ್ರಾಣಿ ಪಕ್ಷಿಗಳೆಲ್ಲ ಉಸಿರಾಡಲು ಆಗದೇ, ಒದ್ದಾಡತೊಡಗಿದವು.

ಆಗ  ದೇವತೆಗಳು ವಾಯುನಲ್ಲಿ ಬಂದು, ದಯವಿಟ್ಟು ಗಾಳಿ ಬೀಸುವಂತೆ ಮಾಡಿ ಎಂದು ಬೇಡಿಕೊಂಡರು. ಆಗ ವಾಯು, ಹಾಗಾದ್ರೆ ನನ್ನ ಪುತ್ರನನ್ನು ಮೊದಲಿನಂತೆ ಮಾಡಿ ಎಂದ. ಆಗ ನಾರದರು ಪವಿತ್ರ ಜಲದಿಂದ ಹನುಮಂತ ಆರೋಗ್ಯನಾಗುವಂತೆ ಮಾಡಿದರು. ಇದಾದ ಬಳಿಕ ದೇವತೆಗಳು ಹನುಮನಿಗೆ ಹಲವು ಆಯುಧಗಳನ್ನು ನೀಡಿದರು. ಅದರಲ್ಲಿ ಕುಬೇರನು ಹನುಮನಿಗೆ ಗಧೆಯನ್ನು ನೀಡಿದ.

ಮಣ್ಣನ್ನು ಚಿನ್ನವನ್ನಾಗಿಸುವ ಶಕ್ತಿ ಗುರುವಿಗೆ ಇದೆ.. ಜೀವನದಲ್ಲಿ ಗುರುವಿನ ವಿಶೇಷತೆ ಏನು ಗೊತ್ತಾ..?

ಅಲ್ಲದೇ, ಈ ಗಧೆಯನ್ನು ಹಿಡಿದು ಯಾವ ಯುದ್ಧಕ್ಕೆ ಹೋದರೂ, ಆ ಯುದ್ಧದಲ್ಲಿ ಹನುಮಂತ ಸೋಲಲು ಸಾಧ್ಯವೇ ಇಲ್ಲ. ಬರೀ ಗೆಲುವೇ ಸಾಧಿಸುತ್ತಾನೆಂದು ವರವೂ ನೀಡಿದ ಕುಬೇರ. ಅಲ್ಲದೇ, ಹನುಮಂತ ಹೇಗೆ ತನ್ನ ದೇಹದ ಗಾತ್ರವನ್ನು ಸಣ್ಣದು, ದೊಡ್ಡದು ಮಾಡಬಲ್ಲನೋ, ಅದೇ ರೀತಿ ಗಧೆಯನ್ನು ಕೂಡ ತನ್ನ ದೇಹದ ಗಾತ್ರಕ್ಕೆ ತಕ್ಕಂತೆ, ಬೆಳೆಸಬಹುದಾಗಿತ್ತು.

- Advertisement -

Latest Posts

Don't Miss