Friday, October 18, 2024

Latest Posts

ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

- Advertisement -

Spiritual: ಮನುಷ್ಯನ ಜೀವನದಲ್ಲಿ ಅನ್ನ ಅನ್ನೋದು ತುಂಬಾ ಮುಖ್ಯ. ಮನುಷ್ಯ ದುಡಿಯೋದೇ ಅನ್ನಕ್ಕೋಸ್ಕರ. ತಾನು, ತನ್ನ ಕುಟುಂಬಸ್ಥರು ಹೊಟ್ಟೆ ತುಂಬ ಉಣ್ಣಲಿ ಎಂಬ ಕಾರಣಕ್ಕೆ, ಮನುಷ್ಯ ದುಡಿಯುತ್ತಾರೆ. ಆದರೆ ಎಷ್ಟೋ ಜನಕ್ಕೆ ಕ್ರಮಬದ್ಧವಾಗಿ ಊಟ ಮಾಡೋದು ಹೇಗೆ ಅನ್ನೋದು ಗೊತ್ತಿಲ್ಲ. ಹಿಂದೂಗಳಲ್ಲಿ ಊಟ ಮಾಡುವುದಕ್ಕೂ ಪದ್ಧತಿ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..

ನಾವು ಸೇವಿಸುವ ಆಹಾರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರವನ್ನು ರಾಜಸಿಕ, ತಾಮಸಿಕ, ಮತ್ತು ಸಾತ್ವಿಕ ಎಂದು ಮೂರು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಈ ಮೂರು ಆಹಾರವನ್ನ ಅನುಸರಿಸಿದವರ ಗುಣ ಬೇರೆ ಬೇರೆ ರೀತಿ ಇರುತ್ತದೆ. ಅತೀಯಾದ ರಾಜಸಿಕ, ತಾಮಸಿಕ, ಸಾತ್ವಿಕ ಆಹಾರವು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ಈ ಮೂರು ಗುಣಗಳು ಸಮ ಪ್ರಮಾಣದಲ್ಲಿರಬೇಕು. ಬೇಕತಾದರೆ ಸಾತ್ವಿಕ ಆಹಾರ ಹೆಚ್ಚಾದರೂ ನಡೆದಿತು. ಆದರೆ ರಾಜಸಿಕ ಮತ್ತು ತಾಮಸಿಕ ಆಹಾರಗಳ ಪ್ರಮಾಣ ಮಾತ್ರ ಹೆಚ್ಚಾಗಬಾರದು.

ಇನ್ನು ಕ್ರಮಬದ್ಧವಾಗಿ ಊಟ ಮಾಡುವುದು ಹೇಗೆ ಎಂದರೆ, ಸಿಹಿ ಪದಾರ್ಥವಿದ್ದಲ್ಲಿ, ಮೊದಲು ಅದನ್ನು ಸೇವಿಸಬೇಕು. ಬಳಿಕ ಖಾರ ಪದಾರ್ಥಗಳನ್ನು ಸೇವಿಸಬೇಕು. ಅಥವಾ ಖಾರಾ ಪದಾರ್ಥಗಳನ್ನು ಸೇವಿಸಿ, ಸಿಹಿ ಸೇವಿಸಿ, ಕೊನೆಗೆ ಮೊಸರು ಅಥವಾ ಮಜ್ಜಿಗೆಯ ಸೇವನೆ ಮಾಡಬೇಕು. 1 ಗಂಟೆಯ ಬಳಿಕ ನೀರು ಕುಡಿಯಬೇಕು. ಇದು ಊಟ ಮಾಡುವ ಸರಿಯಾದ ವಿಧಾನ. ಹೀಗೆ ಮಾಡಿದ್ದಲ್ಲಿ, ನಿಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಊಟವಾದ ಬಳಿಕ, ಕೊನೆಯಲ್ಲಿ ಸಿಹಿ ಸೇವಿಸಬೇಡಿ. ಕೊನೆಯಲ್ಲಿ ಮೊಸರನ್ನೇ ಸೇವಿಸಬೇಕು. ಏಕೆಂದರೆ, ಮೊಸರು ನಾವು ತಿಂದ ಆಹಾರಗಳನ್ನು ಸರಿಯಾಗಿ ಜೀರ್ಣ ಮಾಡುವ ಶಕ್ತಿ ಹೊಂದಿದೆ. ನೀವು ಮೊಸರು ಸೇವಿಸಿ ಬಳಿಕ ಸಿಹಿ ಸೇವಿಸಿದ್ದಲ್ಲಿ, ಜೀರ್ಣಶಕ್ತಿ ಏರುಪೇರಾಗುತ್ತದೆ.

ಇದರ ಜೊತೆಗೆ ನೆಲದ ಮೇಲೆ ಕುಳಿತು ಚಟ್ಟೆ ಮುಟ್ಟೆ ಹಾಕಿ ಊಟ ಮಾಡಬೇಕು. ಕುಟುಂಬ ಸಮೇತರಾಗಿ ಕುಳಿತು ಊಟ ಮಾಡಿದರೆ, ಆ ಖುಷಿಯೂ ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?

ಇಂಥ ಕೆಲಸ ಮಾಡಲು ಎಂದಿಗೂ ವಿಳಂಬ ಮಾಡಬೇಡಿ..

ಆಷಾಢ ಮಾಸದಲ್ಲಿ ಪತಿ ಪತ್ನಿ ದೂರವಿರಬೇಕು ಅಂತಾ ಹೇಳೋದ್ಯಾಕೆ..?

- Advertisement -

Latest Posts

Don't Miss