ಕೆಲವರು ಆರೋಗ್ಯದ ಬಗ್ಗೆ ಮಾತನಾಡುವಾಗ, ಏನ್ಮಾಡೋದು ನೂರೆಂಟು ಖಾಯಿಲೆಗಳು ಬರ್ತಿರ್ತವೆ, ಹೋಗ್ತಿರ್ತವೆ. ಜೀವನ ಮಾಡ್ಕೊಂಡು ಹೋಗ್ತಿರ್ಬೇಕು ಅಂತಾ. ಅಲ್ಲದೇ, ನಾವು ಬಳಸೋ ಆಂಬುಲೆನ್ಸ್ ನಂಬರ್ ಕೂಡ 108. ಅಲ್ಲದೇ ಕೆಲ ಹಿರಿಯರು ಮಾತನಾಡುವಾಗ ನೂರೆಂಟು ವಿಘ್ನ ಅಂತಾ ಮಾತಾಡ್ತಾರೆ. ಇನ್ನು ಜಪ ಮಾಲೆಯಲ್ಲೂ 108 ಮಣಿಗಳಿರುತ್ತದೆ. ಹಾಗಾಗಿ ನಾವಿಂದು ಯಾಕೆ ಜಪ ಮಾಲೆಯಲ್ಲಿ 108 ಮಣಿಗಳೇ ಇರೋದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
108 ಮಣಿಗಳಿರುವ ಮಾಲೆ ಜಪಿಸಲು ಶ್ರೇಷ್ಠ ಅಂತಾ ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅಲ್ಲದೇ ಹಿಂದೂಗಳ ಪ್ರಕಾರ, 108 ಲಕ್ಕಿ ನಂಬರ್ ಅಂತಾ ಹೇಳಲಾಗುತ್ತದೆ. ಅಲ್ಲದೇ ಯಾವುದೇ ಮಂತ್ರವಾಗಲಿ 108 ಬಾರಿ ಜಪಿಸಿದರೆ, ನಮ್ಮ ಕಷ್ಟಗಳು ದೂರವಾಗುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹಾಗಾಗಿ ಜಪ ಮಾಡುವಾಗ 108 ಮಣಿಗಳು ಅಥವಾ ರುದ್ರಾಕ್ಷಿಗಳುಳ್ಳ ಮಾಲೆಯನ್ನೇ ಬಳಸೋದು.
ಇನ್ನು ನೀವು ಜಪ ಮಾಲೆ ಬಳಸಿ, ಜಪ ಮಾಡುವುದಿದ್ದರೆ, ಅದನ್ನ ಸರಿಯಾಗಿ ನೋಡಿಕೊಳ್ಳಬೇಕು. ಅಂದ್ರೆ, ಆ ಜಪ ಮಾಲೆಯನ್ನು ಎಲ್ಲಿ ಬೇಕಲ್ಲಿ ಇಡಬಾರದು. ಬದಲಾಗಿ ದೇವರ ಕೋಣೆಯಲ್ಲೇ ಅದನ್ನು ಇರಿಸಬೇಕು. ಅದು ಕಾಲಡಿಗೆ ಬೀಳದಂತೆ ಕಾಣಬೇಕು. ಅಲ್ಲದೇ, ಸೂತಕವಿದ್ದಾಗ ಅದನ್ನ ಮುಟ್ಟಬಾರದು. ಹೆಣ್ಣು ಮಕ್ಕಳು ಋತುಮತಿಯಾದಾಗ ಮುಟ್ಟಬಾರದು. ಅಲ್ಲದೇ ಮಾಂಸ ಮದ್ಯ ಸೇವಿಸಿ, ಜಪ ಮಾಲೆ ಮುಟ್ಟುವಂತಿಲ್ಲ. ಇಷ್ಟೆಲ್ಲ ನಿಯಮ ಪಾಲಿಸಿ, ನೀವು ಜಪಮಾಲೆ ಬಳಸಿ ಜಪ ಮಾಡಬೇಕಾಗುತ್ತದೆ.

