Tuesday, September 16, 2025

Latest Posts

ಕಾಮಾಕ್ಯ ದೇವಿಯ ಋತುಚಕ್ರದ ದಿನದಲ್ಲಿ ಬ್ರಹ್ಮಪುತ್ರ ನದಿಯ ಬಣ್ಣ ಬದಲಾಗಲು ಕಾರಣವೇನು..?

- Advertisement -

ಸತಿ ಅಗ್ನಿ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟಾಗ, ದುಃಖ ಮತ್ತು ಕೋಪದಲ್ಲಿದ್ದ ಶಿವ ಸತಿಯ ದೇಹವನ್ನು ಹೊತ್ತು, ತಾಂಡವ ಮಾಡುತ್ತಿದ್ದ. ಶಿವನ ಕೋಪ ಕಡಿಮೆ ಮಾಡಲು ಶ್ರೀಹರಿ ತನ್ನ ಚಕ್ರದಿಂದ ಸತಿಯ ದೇಹವನ್ನ ಛಿದ್ರ ಮಾಡಿದ. ಹಾಗೆ ಛಿದ್ರಗೊಂಡ ದೇಹದ ಭಾಗಗಳು ಬಿದ್ದ ಜಾಗದಲ್ಲಿ ಶಕ್ತಿ ಪೀಠಗಳು ಸ್ಥಾಪನೆಯಾಗಿದೆ. ಅಂಥ ಶಕ್ತಿ ಪೀಠದಲ್ಲಿ ಕಾಮಾಕ್ಯ ದೇವಿಯ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಒಂದು ವಿಶೇಷ ಸಂಗತಿಯನ್ನ ತಿಳಿಯೋಣ ಬನ್ನಿ..

ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?

ಸತಿಯ ದೇಹ ಛಿದ್ರವಾದಾಗ, ಆಕೆಯ ಗರ್ಭದ ಭಾಗ ಮಮತ್ತು ಯೋನಿಯ ಭಾಗ ಬಿದ್ದ ಜಾಗವೇ, ಕಾಮಾಕ್ಯ ದೇವಿ ಮಂದಿರವಿರುವ ಜಾಗ. ಗುವಾಹಟಿಗೆ ಹತ್ತಿರವಾಗಿರುವ ಕಾಮಾಕ್ಯ ದೇವಿ ದೇವಸ್ಥಾನ ನೀಲಾಂಚಲ ಪರ್ವತದ ಮೇಲಿದೆ. ತಂತ್ರ ಮಂತ್ರ ಸಿದ್ಧಿ ಮಾಡಿಕೊಳ್ಳಲು, ದೇವಿಯ ಕೃಪೆ ಪಡೆದುಕೊಳ್ಳಲು ಜನ ಈಕೆಯ ದರ್ಶನ ಮಾಡಲು ಬರುತ್ತಾರೆ. ಅಘೋರಿಗಳು, ನಾಗಾಸಾಧುಗಳು, ಮಂತ್ರವಾದಿಗಳು ಹೆಚ್ಚಾಗಿ ಬರುವ ಜಾಗವಿದು.

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 1

ಇಲ್ಲಿ ದೇವಿಯ ಯೋನಿಗೆ ಪೂಜೆ ಸಲ್ಲಿಸಲಾಗತ್ತೆ. ವರ್ಷದಲ್ಲಿ ಮೂರು ದಿನ ಅೞದ್ರೆ ಜೂನ್ ತಿಂಗಳಲ್ಲಿ 3 ದಿನ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಯಾಕಂದ್ರೆ ಆ ದಿನಗಳಲ್ಲಿ ದೇವಿಯ ಮಾಸಿಕ ಧರ್ಮವಿರುತ್ತದೆ ಎಂಬ ಕಾರಣಕ್ಕೆ, ಪುರುಷರಿಗೆ ದೇವಸ್ಥಾನದಲ್ಲಿ ಪ್ರವೇಶವಿರುವುದಿಲ್ಲ. ಈ ದಿನ ದೇವಿ ಹೆಚ್ಚು ಪವಿತ್ರಳಾಗಿ, ಹೆಚ್ಚು ಶಕ್ತಿಯುತಳಾಗಿ ಇರುತ್ತಾಳಂತೆ. ಅಲ್ಲದೇ ಈ 3 ದಿನ ಬ್ರಹ್ಮಪುತ್ರ ನದಿಯ ಬಣ್ಣ ಕೆಂಪು ಬಣ್ಣವಾಗಿ ಬದಲಾಗುತ್ತದೆ. ಯಾಕಂದ್ರೆ ಇದು ದೇವಿಯ ಮಾಸಿಕ ಧರ್ಮದ ಪ್ರಭಾವ ಅಂತಾ ಇಲ್ಲಿನ ಭಕ್ತರಲ್ಲಿ ನಂಬಿಕೆ ಇದೆ.

ನಂತರ ಇಲ್ಲಿ ಅಂಬುವಾಚಿ ಮೇಳ ಮಾಡಲಾಗತ್ತೆ. ಈ ವೇಳೆ ದೇಶ ವಿದೇಶಗಳಿಂದ ಜನ ದೇವಿಯ ದರ್ಶನಕ್ಕೆ ಬರುತ್ತಾರೆ. ನಾಗಾಸಾಧುಗಳು ಕೂಡ ಇಲ್ಲಿ ಬರುತ್ತಾರೆ. ಇದನ್ನು ಕಾಮಾಕ್ಯ ಕುಂಭಮೇಳ ಅಂತಲೂ ಕರೆಯುತ್ತಾರೆ.

- Advertisement -

Latest Posts

Don't Miss