Friday, December 27, 2024

Latest Posts

ಈ ದೇವಸ್ಥಾನದಲ್ಲಿ ಶಿವನಿಗಿಂತ ಮುಂಚೆ ರಾವಣನಿಗೆ ಪೂಜೆ ಸಲ್ಲುತ್ತದೆ..

- Advertisement -

ರಾಮಾಯಣದಲ್ಲಿ ಬರುವ ಪಾತ್ರಗಳಲ್ಲಿ ಪ್ರಮುಖ ರಾಕ್ಷಸನೆಂದರೆ ರಾವಣ. ರಾಕ್ಷಸನಾದರೂ ಸಕಲ ವಿದ್ಯಾಪಾರಂಗತನಾಗಿದ್ದ ರಾವಣನನ್ನು ಲಂಕೆಯಲ್ಲಿ ಪೂಜಿಸಲಾಗುತ್ತದೆ. ಇದೇ ರೀತಿ ಶಿವನ ದೇವಸ್ಥಾನದಲ್ಲಿ ರಾವಣನನ್ನು ಮೊದಲು ಪೂಜಿಸಲಾಗುತ್ತದೆ. ಹಾಗಾದ್ರೆ ಯಾವುದು ಈ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ರಾಜಸ್ತಾನದ ಉದಯ್‌ಪುರದಲ್ಲಿ ಕಮಲ್‌ನಾಥ್ ಮಹದೇವ ದೇವಸ್ಥಾನವಿದೆ. ಇಲ್ಲಿ ಮೊದಲು ರಾವಣನನ್ನು ಪೂಜಿಸಲಾಗುತ್ತದೆ. ನಂತರ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲೇನಾದರೂ ಮೊದಲು ಶಿವನನ್ನು ಪೂಜಿಸಿ, ರಾವಣನನ್ನು ಪೂಜಿಸಿದರೆ, ಆ ಪೂಜೆ ವ್ಯರ್ಥ ಎನ್ನಲಾಗುತ್ತದೆ. ಹಾಗಾಗಿ ಇಲ್ಲಿ ಮೊದಲು ರಾವಣನನ್ನೇ ಪೂಜಿಸಲಾಗುತ್ತದೆ. ಯಾಕಂದ್ರೆ ಈ ದೇವಸ್ಥಾನವನ್ನು ನಿರ್ಮಿಸಿದ್ದೇ, ಶಿವನ ಪರಮ ಭಕ್ತ ರಾವಣ.

ಇದಕ್ಕಿಂತ ಮುಂಚೆ ರಾವಣ, ಈ ಸ್ಥಳದಲ್ಲಿ ತಪಸ್ಸು ಮಾಡಿ, ಅಲ್ಲೋಂದು ಹೋಮಕುಂಡ ಸ್ಥಾಪಿಸಿ, ಅದರಲ್ಲಿ ತನ್ನ ರುಂಡವನ್ನು ಆಹುತಿ ನೀಡಿದ್ದ. ಇದಕ್ಕೆ ಮೆಚ್ಚಿದ್ದ ಶಿವ, ಪ್ರತ್ಯಕ್ಷನಾಗಿ, ರಾವಣನಿಗೆ ವರ ನೀಡಿದ್ದ. ರಾವಣನ ನಾಭಿಯಲ್ಲಿ ಅಮೃತಕುಂಡ ಸ್ಥಾಪಿಸಿದ್ದ. ರಾವಣನ ನಾಭಿಗೆ ಬಿಟ್ಟು ಬೇರೆ ಯಾವ ಭಾಗಕ್ಕೆ ಹೊಡೆದರೂ, ಅವನಿಗೆ ಸಾವು ಬರುತ್ತಿರಲಿಲ್ಲ. ಈ ವಿಷಯ ರಾಮನಿಗೆ ಗೊತ್ತಾದಾಗಲೇ, ರಾಮ ರಾವಣನ ನಾಭಿಗೆ ಹೊಡೆದು ವಧೆ ಮಾಡಿದ್ದ.

ಶಿವ ರಾವಣನಿಗೆ ಅಮೃತಕುಂಡ ಕೊಟ್ಟ ಈ ಸ್ಥಳದಲ್ಲೇ ಕಮಲನಾಥ ಮಹದೇವ ದೇವಸ್ಥಾನ ಸ್ಥಾಪಿತವಾಯಿತು. ಹಾಗಾಗಿ ಶಿವನ ಪರಮಭಕ್ತ ರಾವಣನನ್ನೇ ಇಲ್ಲಿ ಮೊದಲು ಪೂಜಿಸಲಾಗುತ್ತದೆ. ನಂತರ ಶಿವನ ಪೂಜೆ ಮಾಡಲಾಗುತ್ತದೆ.

- Advertisement -

Latest Posts

Don't Miss