ಕುಂದಾಪುರ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನದೇ ಶೈಲಿಯ ಕನ್ನಡ ಭಾಷೆಯಿಂದ ಫೇಮಸ್ ಇದ್ದ ಕುಂದಾಪುರ, ಈಗ ಕಾಂತಾರ ಸಿನಿಮಾ ರಿಲೀಸ್ ಆದ ಮೇಲೆ ಮತ್ತಷ್ಟು ಫೇಮಸ್ ಆಗಿದೆ. ಯಾಕಂದ್ರೆ ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದೆ ಕುಂದಾಪುರದಲ್ಲಿ. ಇಂಥ ಸುಂದರ ಊರಾದ ಕುಂದಾಪುರಕ್ಕೆ ಕುಂದಾಪುರ ಎಂದು ಹೆಸರು ಬರಲು ಕಾರಣವೇನು..? ಇಲ್ಲಿರುವ ಕುಂದೇಶ್ವರ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?
ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇ, ಅಲ್ಲಿ ಪೂಜಿಸಲ್ಪಡುವ ಕುಂದೇಶ್ವರ ದೇವರು. ಹಲವು ವರ್ಷಗಳ ಹಿಂದ ಈ ಸ್ಥಳವನ್ನು ಕುಂದವರ್ಮನೆಂಬ ರಾಜ ಆಳುತ್ತಿದ್ದ. ಅವನು ಪರಮ ಶಿವಭಕ್ತನಾಗಿದ್ದ ಕಾರಣ, ಇಲ್ಲಿ ಈಶ್ವರನ ದೇವಸ್ಥಾನ ಸ್ಥಾಪಿಸಿದ. ನಂತರ ಆ ಈಶ್ವರನಿಗೆ ಕುಂದೇಶ್ವರನೆಂದು ಹೆಸರನ್ನಿರಿಸಿ, ಅಲ್ಲಿ ಶಿವಪೂಜೆ ಮಾಡುತ್ತಿದ್ದರು. ಕುಂದ ವರ್ಣ ಆ ಪ್ರದೇಶವನ್ನು ಆಳುತ್ತಿದ್ದ ಕಾರಣ ಮತ್ತು ಇಲ್ಲಿ ಕುಂದೇಶ್ವರನನ್ನು ಪೂಜಿಸುವ ಕಾರಣಕ್ಕೆ ಇದನ್ನು ಕುಂದಾಪುರವೆಂದು ಕರೆಯಲು ಶುರು ಮಾಡಿದರು.
ಇಲ್ಲಿ ಬಾಳೆಹಣ್ಣನ್ನು ನೈವೇದ್ಯ ಮಾಡಿದರೆ ಸಾಕು, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ..
ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗ ಮತ್ತು ಉಡುಪಿ ಕುಂದಾಪುರದ ಕೆಲ ಸ್ಥಳಗಳನ್ನು ಪರಶುರಾಮ ಸೃಷ್ಟಿ ಎಂದು ಹೇಳುತ್ತಾರೆ. ಅಂಥ ಪರಶುರಾಮ ಸ್ಥಾಪಿಸಿದ ಹಲವು ದೇವಸ್ಥಾನಗಳು ಕುಂದಾಪುರದಲ್ಲಿದೆ. ಕುಂದೇಶ್ವರ ದೇವಸ್ಥಾನ ಸೇರಿ, ಗುರುನರಸಿಂಹ, ಕುಂಭಾಶಿ ಮಹಾಗಣಪತಿ ದೇವಸ್ಥಾನ, ಕೊಲ್ಲೂರು, ಕೋಟೇಶ್ವರ ಹೀಗೆ ಸಾಲು ಸಾಲು ದೇವಸ್ಥಾನಗಳನ್ನು ಕುಂದಾಪುರದಲ್ಲಿ ನೋಡಬಹುದು.




