Tuesday, October 22, 2024

Latest Posts

ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದಾ..? ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಂಡ್ರೆ ಏನಾಗತ್ತೆ..?

- Advertisement -

ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೇ, ಮೇಕಪ್‌ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಹಲವು ಶೇಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿದಿನ ಕಾಲೇಜಿಗೆ, ಆಫೀಸಿಗೆ ಹೋಗುವಾಗ ಲಿಪ್‌ಸ್ಟಿಕ್ ಬೇಕೇ ಬೇಕು ಅನ್ನೋ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಹಾಗೆ ಹಚ್ಚಿಕೊಂಡ್ರೆ ಅದನ್ನ ಕ್ಲೀನ್ ಮಾಡಿಕೊಳ್ಳುವ ವಿಧಾನ ಗೊತ್ತಿರಬೇಕು. ಹಾಗಾದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಂಡ್ರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕಂದ್ರೆ ಇದರಲ್ಲಿ ಸೀಸದ ಅಂಶವಿರುತ್ತದೆ. ಹಾಗಾಗಿ ಪ್ರತಿದಿನ ಲಿಪ್‌ಸ್ಟಿಕ್‌ನ್ನು ಹಚ್ಚಿಕೊಳ್ಳುವುದರಿಂದ  ಕ್ಯಾನ್ಸರ್‌ನಂಥ ಅಪಾಯಕಾರಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಇನ್ನು ನೀವು ಲಿಪ್‌ಸ್ಟಿಕ್ ಹಚ್ಚಿದ ಬಳಿಕ, ರಾತ್ರಿ ಮಲಗುವಾಗ, ಎಣ್ಣೆ ಹಚ್ಚಿ, ಮಸಾಜ್ ಮಾಡಿ, ಕ್ಲೀನ್ ಮಾಡಿ ಮಲಗಿ. ನೀವು ಲಿಪ್‌ಸ್ಟಿಕ್ ಕ್ಲೀನ್ ಮಾಡದೇ, ಹಾಗೇ ಮಲಗಿದರೆ, ನಿಮ್ಮ ತುಟಿಯ ಭಾಗದಲ್ಲಿ ಚರ್ಮರೋಗ ಬರುತ್ತದೆ.

ಇನ್ನು ನಿಮಗೆ ಲಿಪ್‌ಸ್ಟಿಕ್ ಬಳಸದೇ ಇರಲು ಆಗುವುದೇ ಇಲ್ಲವೆಂದಾದಲ್ಲಿ, ನೀವು ಹರ್ಬಲ್ ಲಿಪ್‌ಸ್ಟಿಕ್ ಬಳಸಿ. ಇದಕ್ಕೆ ಹೆಚ್ಚು ಬೆಲೆ ಇರಬಹುದು. ಆದ್ರೆ ಇದರಿಂದ ನಿಮ್ಮ ತುಟಿಗೆ ಹಾನಿಯಾಗುವ ಸಂದರ್ಭ ಕಡಿಮೆಯಾಗಬಹುದು. ಹಾಗಾಗಿ ಹರ್ಬಲ್ ಲಿಪ್‌ಸ್ಟಿಕ್ ಬಳಸಿ. ಅಲ್ಲದೇ, ನೀವು ಎಷ್ಟು ಕಡಿಮೆ ರೇಟಿನ ಲಿಪ್‌ಸ್ಟಿಕ್ ಬಳಸುತ್ತೀರೋ, ಅಷ್ಟು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಬೆಲೆ ಹೆಚ್ಚಾದರೂ ಹರ್ಬಲ್ ಲಿಪ್‌ಸ್ಟಿಕ್‌ನ್ನೇ ಬಳಸಿ.

- Advertisement -

Latest Posts

Don't Miss