Sunday, September 8, 2024

Latest Posts

ಪುರಿ ಜಗನ್ನಾಥದಲ್ಲಿ ದೇವರ ಮೂರ್ತಿಗೇಕೆ ಕೈ ಇಲ್ಲ..?

- Advertisement -

ಇಡೀ ದೇಶದಲ್ಲಿ ನೀವು ಯಾವುದಾದರೂ ಒಂದು ಕೃಷ್ಣ ದೇವಸ್ಥಾನಕ್ಕೆ ಹೋಗಿರಬಹುದು. ಅಲ್ಲಿ ಕೃಷ್ಣನನ್ನು ಅಷ್ಟೇ, ಅಥವಾ ಕೃಷ್ಣ ರಾಧೆಯನ್ನ ಜೊತೆಯಾಗಿ ಪೂಜಿಸುತ್ತಾರೆ. ಆದ್ರೆ ಒಂದೇ ಒಂದು ದೇವಸ್ಥಾನದಲ್ಲಿ ಮಾತ್ರ ಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆಯನ್ನ ಪೂಜಿಸುತ್ತಾರೆ. ಆ ದೇವಸ್ಥಾನ ಪುರಿ ಜಗನ್ನಾಥ ದೇವಸ್ಥಾನ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಇಲ್ಲಿ ಕೈಗಳಿಲ್ಲದ ಕೃಷ್ಣನ ಮೂರ್ತಿ ಇದೆ. ಹಾಗಾದ್ರೆ ಯಾಕೆ ಪುರಿ ಜಗನ್ನಾಥನಿಗೆ ಕೈಗಳಿಲ್ಲ ಅಂತಾ ತಿಳಿಯೋಣ ಬನ್ನಿ..

ರಾಜಾ ಇಂದ್ರದ್ಯುಮ್ನ, ಪುರಿ ಜಗನ್ನಾಥ ಮಂದಿರದ ದೇವರ ಮೂರ್ತಿಗಳನ್ನ ಮಾಡಿಸಿದ್ದನಂತೆ. ಈ ಮೂರ್ತಿಗಳನ್ನ ಮಾಡುವಾಗ, ಇಂದ್ರದ್ಯುಮ್ನನ ರಾಣಿ, ಆ ಶಿಲ್ಪಿಯನ್ನು ಮತ್ತು ಆ ಮೂರ್ತಿಗಳನ್ನ ನೋಡಿದಳು. ಹಾಗಾಗಿ ಆಕೆ ಮೂರ್ತಿ ಕೆತ್ತನೆಯನ್ನು ನೋಡಿದ ಕಾರಣಕ್ಕೆ, ಶಿಲ್ಪಿ ಮೂರ್ತಿ ರಚಿಸುವುದನ್ನೇ ನಿಲ್ಲಿಸಿದನಂತೆ. ಇದೇ ವೇಳೆ ಒಂದು ಆಕಾಶವಾಣಿ ಕೇಳಿತಂತೆ, ಈ ದೇವರುಗಳು ಇದೇ ರೀತಿ ಸ್ಥಾಪಿತರಾಗಲು ಬಯಸುತ್ತಾರೆಂದು, ಆ ಆಕಾಶವಾಣಿಯಲ್ಲಿ ಹೇಳಲಾಯಿತು.

ಇದು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆ.. ಗಜೇಂದ್ರ ಮೋಕ್ಷ..

ಹಾಗಾಗಿ ಆಷಾಢ ಶುಕ್ಲದಲ್ಲಿ ಇಂದ್ರದ್ಯುಮ್ನ ಈ ಮೂರ್ತಿಗಳನ್ನು ಪುರಿಯಲ್ಲಿ ಪ್ರತಿಷ್ಠಾಪಿಸಿದ. ಇದಾದ ಬಳಿ ಪುರಿಯಲ್ಲಿ ಆಳ್ವಿಕೆ ನಡೆಸಿದ ರಾಜರು, ಈ ದೇವಸ್ಥಾನವನ್ನು ಕಟ್ಟಿ, ಅದರ ಅಭಿವೃದ್ಧಿ ಮಾಡುತ್ತ ಹೋದರು. ಜೀರ್ಣೋದ್ಧಾರ ಮಾಡಿದರು. ಈ ದೇವಸ್ಥಾನದಲ್ಲಿ 30 ಚಿಕ್ಕ ಚಿಕ್ಕ ದೇವಸ್ಥಾನಗಳಿದೆ. ಆಷಾಢ ಮಾಸದಲ್ಲಿ ಇಲ್ಲಿ ಪುರಿ ಜಗನ್ನಾತ್ರ ರಥ ಯಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಎಳೆಯುವ ರಥವನ್ನು ಬೇವಿನ ಮರದ ಕಟ್ಟಿಗೆಯಿಂದ ತಯಾರಿಸಲಾಗುತ್ತದೆ.

ವಸಂತ ಪಂಚಮಿಯಂದು ಬೇವಿನ ಮರದ ಕಟ್ಟಿಗೆಯನ್ನು ಶೇಖರಿಸಲಾಗತ್ತೆ. ನಂತರ, ಅಕ್ಷಯ ತೃತಿಯದ ಶುಭದಿನದಂದು ಮೊಳೆ, ಅಂಟು ಏನನ್ನೂ ಬಳಸದೇ, ಬರೀ ನೈಸರ್ಗಿಕ ವಸ್ತುವಿನಿಂದ ಈ ರಥವನ್ನು ತಯಾರಿಸಲಾಗತ್ತೆ. ಇಲ್ಲಿ ಪಲ್ಲಕ್ಕಿಯನ್ನ ಸಹ ತಯಾರು ಮಾಡಲಾಗತ್ತೆ. ಆ ಪಲ್ಲಕ್ಕಿಯಲ್ಲಿ ಕುಳಿತು, ಇಲ್ಲಿನ ರಾಜ, ರಥವಿರುವ ಜಾಗಕ್ಕೆ ಬರುತ್ತಾರೆ. ಮತ್ತು ರಥಕ್ಕೆ ಪೂಜೆ ಮಾಡಿ, ಚಿನ್ನ ಕಸಬರಿಗೆಯಿಂದ ರಥವನ್ನು ಮತ್ತು ರಥ ಸಾಗುವ ರಸ್ತೆಯಲ್ಲಿ ಕಸ ಗುಡಿಸುತ್ತಾರೆ.

ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..

ಇನ್ನು ಈ ಮೂರು ರಥಕ್ಕೆ ಒಂದೊಂದು ಹೆಸರಿದೆ. ಬಲರಾಮನ ರಥವನ್ನು ತಾಲಧ್ವಜ ಎಂದು ಕರೆಯುತ್ತಾರೆ. ಇದು ಹಸಿರು ಮತ್ತು ಕೆಂಪು ಬಣ್ಣದಿಂದ ಕೂಡಿರುತ್ತದೆ. ಸುಭದ್ರೆಯ ರಥವನ್ನು ದರ್ಪದಲನ ಅಥವಾ ಪದ್ಮರಥ ಎಂದು ಕರೆಯುತ್ತಾರೆ. ಇದು ಕೆಂಪು ಬಣ್ಣದಿಂದ ಕೂಡಿರುತ್ತದೆ. ಜಗನ್ನಾಥನ ರಥವನ್ನು ಗರುಧ್ವಜ ಅಥವಾ ನಂದಿಘೋಷ ಎಂದು ಕರೆಯಲಾಗತ್ತೆ. ಇದು ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿರುತ್ತದೆ. ಈ ರಥಯಾತ್ರೆ ವೇಳೆ, ದೇಶ ವಿದೇಶದಿಂದ ಪುರಿ ಜಗನ್ನಾಥನ ದರ್ಶನ ಪಡೆಯಲು ಭಕ್ತರು ಬರುತ್ತಾರೆ.

ಆಂಜನೇಯನಿಗೆ ಯಾಕೆ ಕೆಂಪು, ಕೇಸರಿ ಸಿಂಧೂರವನ್ನು ಅರ್ಪಿಸಲಾಗತ್ತೆ..?

- Advertisement -

Latest Posts

Don't Miss