Monday, December 23, 2024

Latest Posts

ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..

- Advertisement -

ಶ್ರೀಕೃಷ್ಣನೆಂದರೆ ನವರಸಗಳಿಗೂ ಹೊಂದುವ ದೇವರು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಬತ್ಸ, ಅದ್ಭುತ ಮತ್ತು ಶಾಂತ. ಇವೆಲ್ಲದಕ್ಕೂ ಹೊಂದಿಕೆಯಾಗುವ ಶ್ರೀಕೃಷ್ಣ ಸುಂದರಾಂಗ, ಅಲಂಕಾರಪ್ರಿಯನೆಂಬುದು ಎಲ್ಲರಿಗೂ ಗೊತ್ತು. ಜೊತೆಗೆ 16 ಸಾವಿರ ಹೆಂಡಿರ ಗಂಡ ಅನ್ನೋದು ಎಲ್ಲರಿಗೂ ಗೊತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ.

ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1

ದ್ವಾರಕಾಧೀಶನಿಗೆ 16,108ಜನ ಪತ್ನಿಯರು. ಅದರಲ್ಲಿ 8 ಜನ ಪ್ರಮುಖ ಪತ್ನಿಯರು. ಅವರು ರುಕ್ಮಿಣಿ, ಜಾಂಬವತಿ, ಸತ್ಯಭಾಮ, ಕಾಲಿಂದಿ, ಮಿತ್ರವಿಂದಾ, ಸತ್ಯಾ, ಭದ್ರಾ ಮತ್ತು ಲಕ್ಷ್ಮಣಾ. ಒಂದೊಂದು ಕಾರಣಕ್ಕಾಗಿ ಶ್ರೀಕೃಷ್ಣ ಈ 8 ದೇವಿಯರೊಂದಿಗೆ ವಿವಾಹವಾಗಬೇಕಾಗಿ ಬಂತು. ಹೀಗಿರುವಾಗ ಒಮ್ಮೆ ಪ್ರಾಗ್ಯಜ್ಯೋತಿಷ್ಪುರದಲ್ಲಿ ಭೌಮಾಸುರನ ಉಪಟಳ ಹೆಚ್ಚಾಯಿತು.

ಅವನು 16,100 ಯುವತಿಯರನ್ನು ತನ್ನ ಅಧೀನದಲ್ಲಿರಿಸಿಕೊಂಡಿದ್ದ.  ಅಲ್ಲದೇ, ದೇವತೆಗಳಿಗೂ ಉಪಟಳ ನೀಡುತ್ತಿದ್ದ. ಭೌಮಾಸುರನು ಕೊಡುತ್ತಿದ್ದ ತೊಂದರೆ, ನರಕದಷ್ಟು ಹಿಂಸಾತ್ಮಕವಾಗಿರುತ್ತಿತ್ತು. ಹಾಗಾಗಿ ಅವನನ್ನು ನರಕಾಸುರ ಎಂದು ಕರೆಯುತ್ತಿದ್ದರು. ಇವನ ಉಪದ್ರಕ್ಕೆ ಬೇಸತ್ತ ಇಂದ್ರ, ಕೃಷ್ಣನ ಬಳಿ ಬಂದು, ಭೌಮಾಸುರನ ವಧೆ ಮಾಡುವಂತೆ ಬೇಡಿಕೊಂಡ.

ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 2

ಭೌಮಾಸುರನ ವಧೆ ಹೆಣ್ಣಿಂದಲೇ ಆಗುವುದೆಂದು ತಿಳಿದಿದ್ದ ಕೃಷ್ಣ, ಸತ್ಯಭಾಮೆಯನ್ನು ಕರೆದುಕೊಂಡು ಹೋಗಿ, ಮೊದಲು ಭೌಮಾಸುರನ ಐವರು ಪುತ್ರರನ್ನು ಕೊಂದ. ಈ ವಿಷಯ ತಿಳಿದ ಭೌಮಾಸುರ, ಪ್ರಾಗ್ಯಜ್ಯೋತಿಷ್ಪುರಕ್ಕೆ ಬಂದು, ಕೃಷ್ಣನೊಂದಿಗೆ ಯುದ್ಧ ಆರಂಭಿಸಿದ. ಕೃಷ್ಣನ ಸಾರಥಿಯ ರೂಪದಲ್ಲಿ ಹೋಗಿದ್ದ ಸತ್ಯಭಾಮೆಯಿಂದಲೇ, ಭೌಮಾಸುರನ ವಿನಾಶವಾಯಿತು. ಕಾರ್ತಿಕ ಮಾಸದ ಆ ದಿನವನ್ನೇ ನಾವು ನರಕ ಚತುರ್ದಶಿ ಎಂದು ಆಚರಿಸುತ್ತೇವೆ. ಇದರ ಮರುದಿನ ಆಚರಿಸುವ ಹಬ್ಬವೇ ದೀಪಾವಳಿ.

ಇದಾದ ಬಳಿಕ ಭೌಮಾಸುರ ಬಂಧಿಸಿದ್ದ 16,100 ಯುವತಿಯರನ್ನು ಬಿಡಿಸಲಾಯಿತು. ಆದರೆ, ಅವರನ್ನ ಯಾರೂ ವಿವಾಹವಾಗಲು ಒಪ್ಪಲಿಲ್ಲ. ಆಗ ಅವರು ನಾವು ವೇಶ್ಯಾವೃತ್ತಿಯನ್ನು ಮಾಡಬೇಕು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಕಣ್ಣೀರು ಹಾಕಿದರು. ಆಗ ಕೃಷ್ಣ, ನೀವು ಇಂಥ ಕೃತ್ಯ ಮಾಡಬೇಡಿ. ನಿಮ್ಮನ್ನೆಲ್ಲ ನಾನು ನನ್ನ ರಾಣಿಯರನ್ನಾಗಿ ಮಾಡಿಕೊಳ್ಳುತ್ತೇನೆ. ನೀವು ದ್ವಾರಕೆಯಲ್ಲಿ ನನ್ನ ಅರಮನೆಯಲ್ಲೇ ಇರಿ ಎಂದು ಹೇಳಿದ.

ಸೌಂದರ್ಯದ ಬಗ್ಗೆ ಹೆಚ್ಚು ಅಹಂಕಾರ ಬೇಡ ಅನ್ನುತ್ತೆ ಗರುಡಪುರಾಣದ ಈ ಮಾತು..

ನಂತರ ಇವರೆಲ್ಲರಿಗೂ ಅರಮನೆ ಬಳಿಯೇ ಇರಲು ವ್ಯವಸ್ಥೆ ಮಾಡಲಾಯಿತು. ಇವರು ಕೃಷ್ಣನೊಂದಿಗೆ ವೈವಾಹಿಕ ಸಂಬಂಧವನ್ನಿರಿಸಿಕೊಳ್ಳದಿದ್ದರೂ, ಅವನ ನಾಮಸ್ಮರಣೆಯಲ್ಲೇ ಕಾಲ ಕಳೆಯುತ್ತಿದ್ದರು. ಇನ್ನೊಂದು ಕಥೆಯ ಪ್ರಕಾರ, ಈ 16,100 ಯುವತಿಯರು, ಪೂರ್ವ ಜನ್ಮದಲ್ಲಿ ಸನ್ಯಾಸಿಗಳಾಗಿದ್ದು, ಕೃಷ್ಣನ ಪತ್ನಿಯಾಗಲು, ಇವರೆಲ್ಲ ತಪಸ್ಸು ಮಾಡಿದ್ದರಂತೆ. ಹಾಗಾಗಿ ಇವರೆಲ್ಲ ಮುಂದಿನ ಜನ್ಮದಲ್ಲಿ ಕೃಷ್ಣನ ಪತ್ನಿಯರು ಎನ್ನಿಸಿಕೊಂಡಿದ್ದಾರೆ.

- Advertisement -

Latest Posts

Don't Miss