Saturday, July 27, 2024

Latest Posts

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 4

- Advertisement -

ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.

ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ ಇಬ್ಬರೂ ಸಂಧಾನ ಮಾಡಿಯೇ ಸಮುದ್ರ ಮಂಥನ ಮಾಡಿದ್ದರು. ಈ ವಿಷಯ ಗೊತ್ತಾದಾಗ ವಿಷ್ಣು ಸ್ವತಃ ತಾನೇ ಅಮೃತ ಹಂಚಬೇಕೆಂದು, ಮೋಹಿನಿಯ ರೂಪ ತಾಳಿದನು.

ಹದಿನಾಲ್ಕನೇಯ ಅವತಾರ ನರಸಿಂಹ ಅವತಾರ. ಹಿರಣ್ಯ ಕಶಪುವಿನ ವಧೆ ಮಾಡಲು ಬಂದವನೇ ನರಸಿಂಹ. ಹಿರಣ್ಯ ಕಶಪುವಿನ ಪುತ್ರ ಭಕ್ತ ಪ್ರಹ್ಲಾದ ವಿಷ್ಣುವಿನ ಭಕ್ತನಾದ ಕಾರಣ, ಕಶಪುವಿಗೆ ಸಿಟ್ಟಿತ್ತು. ಆಗ ಮಗನನ್ನು ಕುರಿತು ಕಶಪು, ನಿನ್ನ ವಿಷ್ಣು ಎಲ್ಲಿರುವನು, ಇಲ್ಲಿರುವನೇ, ಈ ಕಂಬದಲ್ಲಿರುವನೇ ಎಂದು ಸಿಟ್ಟಿನಿಂದ ಕಂಬವೊಂದನ್ನು ಒಡೆದನು. ಅದರಿಂದ ಬಂದ ನರಸಿಂಹ ಕಶಪುವನ್ನು ಹೊಸ್ತಿಲ ಮೇಲಿರಿಸಿ ನರಸಿಂಹ ರೂಪ ಧರಿಸಿ ವಧೆ ಮಾಡಿದನು.

ಹದಿನೈದನೇಯ ಅವತಾರ ವಾಮನ ಅವತಾರ. ತ್ರಿಲೋಕದಲ್ಲೂ ಅಧಿಕಾರ ಚಲಾಯಿಸುತ್ತಿದ್ದ ಬಲೀಂದ್ರನ ಅಹಂ ಮುರಿಯಲು ವಿಷ್ಣು, ವಾಮನ ಅವತಾರ ಧರಿಸಿದ. ವಾಮನ ಅಂದ್ರೆ ಪುಟ್ಟ ಬಾಲಕನ ಅವತಾರ. ಬಲೀಂದ್ರ ಯಜ್ಞ ನಡೆಸುತ್ತಿದ್ದಾಗ, ದಾನ ಕೇಳಲು ವಾಮನ ಬರುತ್ತಾನೆ. ನನಗೆ 3 ಪಥ ಭೂಮಿ ಬೇಕೆಂದು ಕೇಳಿದ. ಆಗ ಬಲೀಂದ್ರ ಈ ಪುಟ್ಟ ಬಾಲಕನ ಕಾಲಿನಿಂದ 3 ಪಥ ಎಷ್ಟು ಚಿಕ್ಕದಾಗುತ್ತದೆ. ಕೊಟ್ಟರಾಯಿತು ಎಂದು, ಸರಿ ನಿನಗೆ ಬೇಕಾದಷ್ಟು ಜಾಗ ತೆಗೆದುಕೋ ಎಂದ. ಆಗ ವಾಮನ ದೊಡ್ಡ ರೂಪ ತಾಳಿ, ದೇವಲೋಕ, ಭೂಲೋಕ ಮತ್ತು ಪಾತಾಳ ಲೋಕವನ್ನು 3 ಪಥದಲ್ಲಿ ಆವರಿಸಿದ. ಆ ವೇಳೆ ಬಲೀಂದ್ರನ ತಲೆ ಮೇಲೆ ಕಾಲಿಟ್ಟ.

ಹದಿನಾರನೇಯ ಅವತಾರ ಹಯಗ್ರೀವ ಅವತಾರ. ಬ್ರಹ್ಮದೇವನಿಗೆ ವೇದವನ್ನು ಕದ್ದ ಮಧು ಕೈಟಭರೆಂಬ ರಾಕ್ಷಸರು, ರಸಾತಳದಲ್ಲಿ ಹೋಗಿ ಬಚ್ಚಿಟ್ಟುಕೊಂಡರು. ಆಗ ಬ್ರಹ್ಮ ಸಹಾಯಕ್ಕಾಗಿ ಶ್ರೀ ವಿಷ್ಣುವಿನ ಬಳಿ ಹೋದರು. ಆಗ ವಿಷ್ಣು ಹಯಗ್ರೀವನ ರೂಪ ತಾಳಿ, ಮಧು ಕೈಟಭರ ವದೆ ಮಾಡಿ, ವೇದವನ್ನು ಬ್ರಹ್ಮ ದೇವನಿಗೆ ಸಿಗುವಂತೆ ಮಾಡಿದರು. ಹಯಗ್ರೀವ ಎಂದರೆ, ಕುದುರೆ ಮುಖವುಳ್ಳ ಮನುಷ್ಯ ಎಂದರ್ಥ.

ಇವಿಷ್ಟು ಶ್ರೀ ವಿಷ್ಣುವಿನ 24 ಅವತಾರಗಳಲ್ಲಿ 16 ಅವತಾರಗಳ ಬಗೆಗಿನ ಮಾಹಿತಿ. ಮುಂದಿನ ಭಾಗದಲ್ಲಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ತಿಳಿಯೋಣ.

- Advertisement -

Latest Posts

Don't Miss