ತರಕಾರಿ ಸೇವಿಸಿದ್ರೆ, ಆರೋಗ್ಯಕ್ಕೆ ಒಳ್ಳೆಯದು ಅಂತಾ ನಮಗೆ ಗೊತ್ತು. ಆದ್ರೆ ಹಲವು ತರಕಾರಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ, ಅದು ನಮಗೆ ಆರೋಗ್ಯ ಸಮಸ್ಯೆಯನ್ನ ತಂದೊಡ್ಡುತ್ತದೆ ಅಂತಾ ನಮಗೆ ಗೊತ್ತು. ಬಟಾಟೆ ಹೆಚ್ಚು ತಿಂದ್ರೆ ಹೊಟ್ಟೆ ನೋವು ಬರತ್ತೆ. ಬದನೆ ಹೆಚ್ಚು ತಿಂದ್ರೆ ದೇಹದಲ್ಲಿ ನಂಜಾಗತ್ತೆ. ಹೀಗೆ ಅನೇಕ ತರಕಾರಿಗಳು ಸೈಡ್ ಎಫೆಕ್ಟ್ ಕೊಡುತ್ತದೆ. ಆದ್ರೆ ತೊಂಡೆಕಾಯಿ ಬಗ್ಗೆಯೂ ಒಂದು ಆರೋಪವಿದೆ. ಅದೇನಂದ್ರೆ ತೊಂಡೆಕಾಯಿ ತಿಂದ್ರೆ, ಉಚ್ಛಾರ ಸರಿಯಾಗಿ ಬರುವುದಿಲ್ಲ. ಅದನ್ನ ತಿಂದ್ರೆ ದಡ್ಡರಾಗ್ತಾರೆ ಅಂತಾ. ಹಾಗಾದ್ರೆ ಇದು ನಿಜಾನಾ..? ಇದರ ಹಿಂದಿರುವ ಸತ್ಯಾಂಶವೇನು ಅಂತಾ ತಿಳಿಯೋಣ ಬನ್ನಿ..
ತೊಂಡೆಕಾಯಿ ತಿಂದ್ರೆ ದಡ್ಡರಾಗ್ತಾರೆ ಅನ್ನೋ ಮಾತು ಶುದ್ಧ ಸುಳ್ಳು. ತೊಂಡೆಕಾಯಿ ತಿನ್ನುವುದರಿಂದ ನಿಮ್ಮ ತ್ವಚೆ, ಕೂದಲ ಆರೋಗ್ಯ ಉತ್ತಮವಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಯಾವ ತರಕಾರಿ ತಿಂದ್ರೂ ಆರೋಗ್ಯಕ್ಕೆ ಹಾನಿ ಆಗೇ ಆಗುತ್ತದೆ. ಹಾಗಾಗಿ ತೊಂಡೆಕಾಯಿಯನ್ನ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ವಾರದಲ್ಲಿ ಮೂರು ದಿನ ತೊಂಡೆಕಾಯಿಯ ಪಲ್ಯ ಅಥವಾ ಸಾರು ಮಾಡಿ ತಿಂದ್ರೆ ಒಳ್ಳೆಯದು.
ಇನ್ನು ಮಂಗಳೂರು ಕಡೆ ಜನ, ತೊಂಡೆಕಾಯಿಯನ್ನ ಹೆಚ್ಚಾಗಿ ಬಳಸುತ್ತಾರೆ. ಯಾಕಂದ್ರೆ ಇಲ್ಲಿ ತೊಂಡೆಕಾಯಿ ಬೆಳೆಯಲಾಗುತ್ತದೆ. ಮತ್ತು ತೊಂಡೆಕಾಯಿಯ ರುಚಿ ರುಚಿ ಖಾದ್ಯ ಮಾಡಿ, ತಿನ್ನುತ್ತಾರೆ. ಹಾಗಂತ, ಮಂಗಳೂರಿಗರು ದಡ್ಡರಾಗಲಿಲ್ಲವಲ್ಲಾ.. ಅದೇ ರೀತಿ ಯಾವ ತರಕಾರಿಯಾದ್ರೂ ಮಿತಿಯಲ್ಲಿ ತಿಂದ್ರೆ, ಆರೋಗ್ಯಕ್ಕೆ ಒಳ್ಳೆಯದೇ.