ಈ ದಿನಗಳಲ್ಲಿ ಪತಿ -ಪತ್ನಿ ಅಪ್ಪಿ ತಪ್ಪಿಯೂ ಮಾಡಬಾರದಂತೆ ಸಂಭೋಗ..

ಮನುಷ್ಯನ ಸಂತಾನ ಹೆಚ್ಚುತ್ತಾ ಹೋಗುವುದೇ, ಮದುವೆ ಎಂಬ ಬಾಂಧವ್ಯದಿಂದ. ಮದುವೆಯ ಬಳಿಕ, ಸಂತಾನವಾಗುತ್ತದೆ. ಅದಕ್ಕೆ ವಿವಾಹವಾದ ಬಳಿಕ, ಅದರ ಸಂತಾನವಾಗುತ್ತದೆ. ಹೀಗೆ ಸಂತಾನೋತ್ಪತ್ತಿಯಿಂದಲೇ, ಕುಟುಂಬ ಬೆಳೆಯುತ್ತ ಹೋಗುತ್ತದೆ. ಆದ್ರೆ ಕೆಲ ಪದ್ಧತಿ, ನಂಬಿಕೆಗಳ ಪ್ರಕಾರ, ಕೆಲ ದಿನಗಳಲ್ಲಿ ಪತಿ ಪತ್ನಿ ಸಂಭೋಗ ಮಾಡುವುದು ತಪ್ಪು ಅಂತಾ ಹೇಳಲಾಗಿದೆ. ಹಾಗಾದ್ರೆ ಯಾವುದು ಆ ದಿನಗಳು, ಯಾಕೆ ಆ ದಿನಗಳಲ್ಲಿ ಸಂಭೋಗ ಮಾಡಬಾರದು..? ಇತ್ಯಾದಿ ವಿಷಯಗಳ ಬಗ್ಗೆ ವಿವರಣೆ ತಿಳಿಯೋಣ ಬನ್ನಿ..

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 1

ಚತುರ್ಥಿ ಮತ್ತು ಅಷ್ಟಮಿಯ ದಿನ ಪತಿ ಪತ್ನಿ ಸೇರುವುದನ್ನು ನಿಷೇಧಿಸಲಾಗಿದೆ. ಇವೆರಡು ಪವಿತ್ರವಾದ ದಿನವಾಗಿದ್ದು, ಈ ದಿನ ಸಂಭೋಗ ಮಾಡಬಾರದು ಎಂದು ಬ್ರಹ್ಮವೈವರ್ತ ಪುರಾಣದಲ್ಲಿ ಹೇಳಲಾಗಿದೆ. ಅಲ್ಲದೇ ಪತ್ನಿ ವೃತ ಮಾಡಿದ ಸಮಯದಲ್ಲೂ ಸಂಭೋಗ ಮಾಡುವಂತಿಲ್ಲ. ಯಾಕಂದ್ರೆ ವೃತವೆಂದರೆ, ದೇವಿಯನ್ನು ನೆನೆದು, ಪೂಜಿಸಿ, ಮನೋಕಾಮನೆಗಳನ್ನು ಬೇಡುವ ಸಮಯ. ಹಾಗಾಗಿ ಇದು ಪವಿತ್ರವಾಗಿರುವಂತೆ ನೋಡಿಕೊಳ್ಳಬೇಕು.

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 2

ರವಿವಾರದ ದಿನ ಕೂಡ ಪತಿ ಪತ್ನಿ ಸೇರುವುದಕ್ಕೆ ಉತ್ತಮ ದಿನವಲ್ಲ. ನವರಾತ್ರಿಯ ದಿನಗಳಲ್ಲೂ ಪತಿ ಪತ್ನಿ ಸೇರುವುದು ಉತ್ತಮವಲ್ಲ ಅಂತಾ ಹೇಳಲಾಗಿದೆ. ಈ ದಿನ ದೇವಿಯನ್ನು ಆರಾಧಿಸುವ ದಿನವಾಗಿದ್ದು, ಈ ಸಮಯದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಬೇಕು ಎಂದು ಹೇಳಲಾಗಿದೆ. ಹಾಗಾಗಿ ನವರಾತ್ರಿಯಲ್ಲಿ ಪತಿ ಪತ್ನಿ ಸೇರುವುದನ್ನು ತಪ್ಪು ಎನ್ನಲಾಗಿದೆ.

ಶ್ರಾದ್ಧವಿರುವ ಸಮಯದಲ್ಲಿ, ಅಥವಾ ಸೂತಕವಿರುವ ದಿನಗಳಲ್ಲಿ ಮನೆಯಲ್ಲಿ 15 ದಿನ ಪತಿ ಪತ್ನಿ ಸೇರಬಾರದು ಅಂತಾ ಹೇಳಲಾಗಿದೆ. ಯಾಕಂದ್ರೆ ತೀರಿಹೋದವರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ, ಮನೆಯಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಿ, ಪಿಂಡ ಪ್ರಧಾನ ಮಾಡಬೇಕು. ಹಾಗಾಗಿ ಸೂತಕದ ಮೊದಲ ದಿನದಿಂದ 15 ದಿನಗಳ ಕಾಲ, ಪತಿ ಪತ್ನಿ ಸೇರುವಂತಿಲ್ಲ ಎಂದು ಹೇಳಲಾಗಿದೆ.

About The Author