Saturday, June 21, 2025

Latest Posts

ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

- Advertisement -

ನವರಸಗಳಿಗೂ ಹೊಂದುವ ಶ್ರೀಕೃಷ್ಣ, ಸುಂದರಾಂಗ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲಂಕಾರ ಪ್ರಿಯನಾದ ಶ್ರೀಕೃಷ್ಣ, ಶಾಸ್ತ್ರ ವಿದ್ಯೆಯ ಜೊತೆ, ಶಸ್ತ್ರ ವಿದ್ಯೆಯಲ್ಲೂ ನಿಪುಣನಾಗಿದ್ದ. ಯಾಕಂದ್ರೆ ಶ್ರೀಕೃಷ್ಣನ ಬಳಿ ಹಲವು ದಿವ್ಯಾಸ್ತ್ರಗಳಿದ್ದವು. ಅವುಗಳ ಬಗ್ಗೆ ನಾವಿಂದು ಸಂಪೂರ್ಣ ವಿವರಣೆ ನೀಡಲಿದ್ದೇವೆ.

ಸುದರ್ಶನ ಚಕ್ರ: ಸುದರ್ಶನ ಚಕ್ರವನ್ನು ವಿಷ್ಣು, ಶಿವನಿಂದ ಪಡೆದಿದ್ದ. ಶ್ರೀದಾಮ ಎಂಬ ರಾಕ್ಷಸನ ಅಂತ್ಯ ಮಾಡುವುದಕ್ಕೆ ಈ ಚಕ್ರದ ಅವಶ್ಯಕತೆ ಇತ್ತು. ಹಾಗಾಗಿ ವಿಷ್ಣುವಿಗೆ ಈ ಚಕ್ರ ಪ್ರಾಪ್ತಿಯಾಗಿತ್ತು. ಈ ಸುದರ್ಶನ ಚಕ್ರ ಭಗವಾನ್ ವಿಷ್ಣುವಿನಿಂದ ಅಗ್ನಿದೇವನ ಬಳಿ, ಅಗ್ನಿದೇವನಿಂದ ವರುಣ ದೇವನ ಬಳಿ, ವರುಣ ದೇವನಿಂದ ಪರಶುರಾಮನ ಬಳಿ ಹೋಯಿತು.

ಓರ್ವ ವೇಶ್ಯೆಯನ್ನು ಯಮರಾಜ ಸ್ವರ್ಗಕ್ಕೆ ಕಳುಹಿಸಿದ್ದನಂತೆ, ಯಾಕೆ ಗೊತ್ತೇ..?

ಜರಾಸಂಧನೊಂದಿಗೆ ಯುದ್ಧ ಮಾಡುವ ವೇಳೆ ಈ ಸುದರ್ಶನ ಚಕ್ರ, ಪರಶುರಾಮನ ಬಳಿ ಇತ್ತು. ಈ ವೇಳೆ ಶ್ರೀಕೃಷ್ಣ, ಈ ಯುದ್ಧದ ಮಹತ್ವವನ್ನು ಪರಶುರಾಮನಿಗೆ ವಿವರಿಸಿದ. ಆ ಪರಶುರಾಮ ಈ ಚಕ್ರವನ್ನು ಶ್ರೀಕೃಷ್ಣನಿಗೆ ನೀಡಿದ.

ಕೌಮೋದಕಿ ಗದೆ: ನೀವು ಶ್ರೀವಿಷ್ಣುವಿನ ಚಿತ್ರ ನೋಡಿದ್ದರೆ, ಅದರಲ್ಲಿ ಎಡಗೈನಲ್ಲಿ ವಿಷ್ಣು ಈ ಗದೆಯನ್ನು ಹಿಡಿದುಕೊಂಡಿರುತ್ತಾನೆ. ನಂತರ ಮಹಾಭಾರತ ಕಾಲದಲ್ಲಿ ವರುಣ ದೇವನಿಂದ ಈ ಗದೆ ಶ್ರೀಕೃಷ್ಣನಿಗೆ ಸಿಕ್ಕಿತು.

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

ವೈಷ್ಣವಾಸ್ತ್ರ: ಇದು ಬಲಿಷ್ಟ ಅಸ್ತ್ರವಾಗಿದ್ದು, ಈ ಅಸ್ತ್ರವನ್ನು ಬಿಟ್ಟಾಗ, ಎದುರಿಗಿರುವವರಿಗೆ ಇದರಿಂತ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅಷ್ಟು ಬೇಗ ಈ ಅಸ್ತ್ರ ಕಾರ್ಯನಿರ್ವಹಿಸುತ್ತಿತ್ತು. ಇದು ಶ್ರೀವಿಷ್ಣು ವರಾಹ ಅವತಾರ ಧರಿಸಿದ್ದ ಸಮಯದಲ್ಲಿ ಭೂಲೋಕಕ್ಕೆ ಕೊಟ್ಟಿದ್ದ. ನಂತರ ಈ ಅಸ್ತ್ರ ನರಕಾಸುರನ ಪಾಲಾಯಿತು.

ನರಕಾಸುರ ಈ ಅಸ್ತ್ರವನ್ನು ತನ್ನ ಪುತ್ರ ಭಾಗದತ್ತನಿಗೆ ನೀಡಿದ. ಮಹಾಭಾರತ ಸಮಯದಲ್ಲಿ ಅರ್ಜುನ ಮತ್ತು ಭಾಗದತ್ತನ ನಡುವೆ ಯುದ್ಧ ನಡೆಯುವಾಗ, ಅರ್ಜುನನ ಬಾಣದಿಂದ ಭಾಗದತ್ತ ತೀವ್ರ ಗಾಯಗೊಂಡಿದ್ದ. ಆಗ ಸಿಟ್ಟಿನಿಂದ ಭಾಗದತ್ತ, ವೈಷ್ಣವಾಸ್ತ್ರವನ್ನು ಪ್ರಯೋಗಿಸಿದ್ದ. ಇದರಿಂದ ತಪ್ಪಿಸಿಕೊಳ್ಳಲು ಅರ್ಜುನ ಪೇಚಾಡುವ ಸಮಯದಲ್ಲಿ ಅಡ್ಡ ಬಂದ ಶ್ರೀಕೃಷ್ಣ, ಬಾಣವನ್ನು ಅಡ್ಡಗಟ್ಟಿದ್ದು, ಆ ಬಾಣ ಶ್ರೀಕೃಷ್ಣನ ಕೊರಳಲ್ಲಿ ವೈಜಯಂತಿ ಮಾಲೆಯಾಗಿ ಮಾರ್ಪಟ್ಟಿತು.

ನಾರಯಣಾಸ್ತ್ರ: ಈ ಅಸ್ತ್ರ ಬಲಿಷ್ಠ ಅಸ್ತ್ರವಾಗಿದ್ದು, ನಾರಾಯಣಾಸ್ತ್ರವನ್ನು ಬಳಸಿದ್ದಲ್ಲಿ, ಅದು ಶತ್ರು ಎಲ್ಲೇ ಅವಿತಿದ್ದರೂ, ಹುಡುಕಿ ವಧೆ ಮಾಡುವಷ್ಟು ಬಲಿಷ್ಠವಾಗಿತ್ತು. ಶತ್ರು ತಲೆಬಾಗಿ ಶರಣು ಎಂದರೆ ಮಾತ್ರ, ನಾರಾಯಣಾಸ್ತ್ರ ವಧೆ ಮಾಡುತ್ತಿರಲಿಲ್ಲ. ಇದು ನಾರಾಯಣಾಸ್ತ್ರವನ್ನು ಶ್ರೀಕೃಷ್ಣ ಉಪಯೋಗಿಸಿದ್ದಲ್ಲಿ, ಅದರ ಪರಿಣಾಮವನ್ನು ತಡೆಯುವ ಶಕ್ತಿ ಬರೀ ಶಿವನಿಗಷ್ಟೇ ಇತ್ತು.

- Advertisement -

Latest Posts

Don't Miss