ಮೊದಲ ಭಾಗದಲ್ಲಿ ನಾವು ನವರಾತ್ರಿ ವೃತವನ್ನು ಮೊದಲು ಮಾಡಿದ್ದು ಯಾರು ಅನ್ನೋ ಬಗ್ಗೆ ಹೇಳಿದ್ದೆವು. ಜೊತೆಗೆ ಪೀಠಕ ಎಂಬ ಬ್ರಾಹ್ಮಣನ ಕಥೆಯೂ ಹೇಳಿದ್ದೆವು. ಈ ಅದರ ಮುಂದುವರಿದ ಭಾಗವನ್ನ ನೋಡೋಣ..
ಕುಷ್ಟರೋಗಿಯೊಂದಿಗೆ ವಿವಾಹವಾದ ಸುಮತಿ ಪತಿಯೊಂದಿಗೆ ವನಕ್ಕೆ ಹೋಗುತ್ತಾಳೆ. ಅಷ್ಟು ದಿನ ಆರಾಧಿಸಿದ್ದ ತಾಯಿಯ ಪೂಜೆಯನ್ನು ಸುಮತಿ ಮುಂದುವರಿಸುತ್ತಾಳೆ. ಸುಮತಿಯ ಕಷ್ಟ ಕಾಣಲಾಗದೇ, ದೇವಿ ಪ್ರತ್ಯಕ್ಷಳಾಗಿ, ನೀನು ಪೂರ್ವ ಜನ್ಮದಲ್ಲಿ ಮಾಡಿದ ಕೆಲಸಕ್ಕೆ ನಾನು ಪ್ರಸನ್ನಳಾಗಿದ್ದೇನೆ. ಹಾಗಾಗಿ ನಿನಗೇನು ವರ ಬೇಕೋ ಕೇಳಿಕೋ ಎನ್ನುತ್ತಾಳೆ.
ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 1
ಆಗ ಸುಮತಿ, ನಾನು ಪೂರ್ವ ಜನ್ಮದಲ್ಲಿ ಮಾಡಿದ ಕೆಲಸವಾದರೂ ಏನು ಎಂದು ಕೇಳುತ್ತಾಳೆ. ಆಗ ಉತ್ತರಿಸಿದ ದುರ್ಗೆ, ಪೂರ್ವ ಜನ್ಮದಲ್ಲಿ ನೀನು ಕಳ್ಳನ ಪತ್ನಿಯಾಗಿದ್ದೆ. ಅವನು ಕಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡು, ಜೈಲಿಗೆ ಹೋಗುವಂತಾಯಿತು. ಅವನೊಂದಿಗೆ ನಿನ್ನನ್ನೂ ಜೈಲಿಗೆ ಹಾಕಲಾಯಿತು. ಆಗ ನಿನಗೆ ಜೈಲಿನಲ್ಲಿ ಅನ್ನ ನೀರನ್ನು ಕೊಡಲಿಲ್ಲ. ಅದು ನವರಾತ್ರಿಯ ಸಮಯವಾಗಿತ್ತು.
ನವರಾತ್ರಿಯ ಸಮಯದಲ್ಲಿ ನೀನು ಅನ್ನ ನೀರು ಬಿಟ್ಟು ಉಪವಾಸವಿದ್ದೆ. ಅಲ್ಲಿಗೆ ನೀನು ನವರಾತ್ರಿಯ ವೃತ ಮಾಡಿದಂತಾಯಿತು. ಹಾಗಾಗಿ ನಾನು ಪ್ರಸನ್ನಳಾಗಿದ್ದೇನೆ. ನಿನಗೆ ಬೇಕಾದ ವರ ಕೇಳು ಎನ್ನುತ್ತಾಳೆ. ಆಗ ಸುಮತಿ, ನನ್ನ ಪತಿಯಲ್ಲಿರುವ ಕುಷ್ಟ ರೋಗವನ್ನು ನಿವಾರಿಸು ಎನ್ನುತ್ತಾಳೆ. ದೇವಿ ತಥಾಸ್ತು ಎನ್ನುತ್ತಾಳೆ. ಅಲ್ಲದೇ ನಿನಗೆ ಮುಂದೊಂದು ದಿನ, ಬುದ್ಧವಂತ, ಧನವಂತ, ಆರೋಗ್ಯವಂತನಾದ ಪುತ್ರ ಜನಿಸುತ್ತಾನೆಂದು ಹೇಳುತ್ತಾಳೆ. ಹೀಗೆ ನವರಾತ್ರಿ ಉಪವಾಸ ಮಾಡಿದ ಭಕ್ತೆಯ ಮನೋಕಾಮನೆ ಪೂರ್ಣಗೊಂಡಿತು.