Sunday, November 16, 2025

Latest Posts

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 1

- Advertisement -

ಸದ್ಯ ನವರಾತ್ರಿ ಶುರುವಾಗಿದೆ. ಎಲ್ಲೆಲ್ಲೂ ದೇವಿಯ ಆರಾಧನೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆದ್ರೆ ನಿಮಗೆ ಮೊಟ್ಟ ಮೊದಲು ಯಾರು ನವರಾತ್ರಿ ಆಚರಣೆ ಮಾಡಿದ್ದು..? ಈ ನವರಾತ್ರಿ ಆಚರಣೆ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆ ಗೊತ್ತಿದೆಯಾ..? ಇಂದು ನಾವು ಇದೇ ವಿಚಾರವಾಗಿ, ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..?

ನವರಾತ್ರಿಯನ್ನು ಪವಿತ್ರವಾದ ಹಬ್ಬವೆಂದು ಭಾರತದಲ್ಲಿ ಆಚರಿಸಲಾಗುತ್ತದೆ. ಕೆಲವೆಡೆ ದೇವಿಯ ಪೂಜೆ ಮಾಡಿ ಆಕೆಗೆ ಕೋಲಾಟವನ್ನು ಸೇವೆಯನ್ನಾಗಿ ಅರ್ಪಿಸಲಾಗತ್ತೆ. ಇದನ್ನೇ ಇಂದು ದಾಂಡ್ಯಾ ಎಂದು ಆಡುತ್ತಾರೆ. ಕೋಲಿನ ಸದ್ದು ಕೇಳಿದ ದೇವಿ ಪ್ರಸನ್ನಳಾಗುತ್ತಾಳೆಂದು ಹೇಳಲಾಗುತ್ತದೆ. ಹಾಗಾಗಿ ಪೂಜೆಯ ಬಳಿಕ ಕೋಲಾಟವಾಡಲಾಗುತ್ತದೆ.

ಇನ್ನು ನವರಾತ್ರಿಯ ವೃತವನ್ನು ಮೊದಲು ಶುರು ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ, ಶ್ರೀರಾಮ. ನವರಾತ್ರಿಯಲ್ಲಿ ಮಹಿಷಾಸುರ ಮರ್ದಿನಿಯ ಪೂಜೆ ಮಾಡಿದ ಶ್ರೀರಾಮನಿಗೆ ದೇವಿ ಶಕ್ತಿ ತುಂಬುತ್ತಾಳೆ. ನಂತರ ದಶಮಿಯ ದಿನದಂದೇ, ಶ್ರೀರಾಮ ಲಂಕೆಗೆ ಹೋಗಿ, ರಾವಣನ ವಧೆ ಮಾಡುತ್ತಾನೆ. ಈ ದಿನವೇ ಪಾಂಡವರ ವನವಾಸ ಅಂತ್ಯವಾಯಿತು ಅಂತಾ ಹೇಳಲಾಗುತ್ತದೆ.

ಅಪ್ಪಿ ತಪ್ಪಿಯೂ ನಿಮ್ಮ ದೇವರ ಕೋಣೆಯಲ್ಲಿ ಈ 7 ವಸ್ತುಗಳನ್ನು ಇಡಲೇಬೇಡಿ..

ಒಮ್ಮೆ ಬ್ರಹಸ್ಪತಿ ಮತ್ತು ಬ್ರಹ್ಮ ಮಾತನಾಡುತ್ತಾ, ಬ್ರಹಸ್ಪತಿ ನವರಾತ್ರಿ ವೃತಾಚರಣೆಯ ಮಹತ್ವದ ಬಗ್ಗೆ ಕೇಳುತ್ತಾನೆ. ಆಗ ಬ್ರಹ್ಮದೇವ, ಪೀಠಕ್ ಎಂಬ ಅನಾಥ ಬ್ರಾಹ್ಮಣನಿದ್ದ. ಅವನು ದೇವಿ ದುರ್ಗೆಯನ್ನು ಆರಾಧಿಸುತ್ತಿದ್ದ. ಅವನಿಗೆ ಸುಮತಿ ಎಂಬ ಮಗಳಿದ್ದಳು. ಅವಳು ಕೂಡ ತಂದೆ ದೇವಿಯನ್ನು ಪೂಜಿಸುವಾಗ, ಒಟ್ಟಿಗೆ ಇರುತ್ತಿದ್ದಳು. ಆದ್ರೆ ಒಂದು ದಿನ ಆಕೆ ಪೂಜೆ ಬಿಟ್ಟು, ಸ್ನೇಹಿತೆಯೊಂದಿಗೆ ಆಡಲು ಹೋದಳು.

ಆಗ ಕೋಪಗೊಂಡ ಪೀಠಕ, ಮಗಳನ್ನು ಕರೆದು,  ನೀನು ಹೀಗೆ ಮಾಡಿದ್ರೆ, ನಿನ್ನನ್ನು ಕುಷ್ಠರೋಗಿಯೊಂದಿಗೋ, ಇಲ್ಲಾ ದರಿದ್ರನೊಂದಿಗೋ ವಿವಾಹ ಮಾಡಿಕೊಡುತ್ತೇನೆ ಎನ್ನುತ್ತಾನೆ. ಆಗ ಮಗಳು, ನಿನ್ನಿಷ್ಟದಂತೆ ಮಾಡಪ್ಪಾ, ನನ್ನ ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತದೆ ಎಂದು ಹೇಳುತ್ತಾಳೆ. ಆಗ ಪೀಠಕ ಕುಷ್ಟರೋಗಿಯೊಂದಿಗೇ ಕೋಪದಿಂದ ಮಗಳ ಮದುವೆ ಮಾಡುತ್ತಾನೆ. ಮುಂದೇನಾಗುತ್ತದೆ ಎಂದು ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss