ಬೆಳಿಗ್ಗೆ ಎದ್ದ ತಕ್ಷಣ, ನೀಟ್ ಆಗಿ ಬ್ರಶ್ ಮಾಡಿ ನಮ್ಮ ದಿನಚರಿ ಶುರು ಮಾಡಿದ್ರೆ, ನಮ್ಮ ಆರೋಗ್ಯ ಕೂಡ ಚೆನ್ನಾಗಿರತ್ತೆ. ಆದ್ರೆ ಆಯುರ್ವೇದದ ಪ್ರಕಾರ, ಟೂತ್ ಪೇಸ್ಟ್ ಬಳಸಲೇಬಾರದಂತೆ. ಕೆಲವರು ಆಯುರ್ವೇದಿಕ್ ಟೂತ್ ಪೇಸ್ಟ್ ಬಳಸುತ್ತಾರೆ. ಆದ್ರೂ ಕೂಡ ಟೂತ್ ಪೇಸ್ಟ್ ಬಳಸದೇ, ಬೇರೆ ವಸ್ತುಗಳನ್ನ ಬಳಸಿ, ಹಲ್ಲುಜ್ಜಿದ್ರೆ, ಹಲ್ಲು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ ಇರತ್ತೆ. ಹಾಗಾದ್ರೆ ಅದ್ಯಾವ ವಸ್ತು ಅಂತಾ ತಿಳಿಯೋಣ ಬನ್ನಿ.
ಹಿಂದಿನ ಕಾಲದಲ್ಲಿ ಕೋಲ್ಗೇಟ್, ಕ್ಲೋಸಪ್ ನಂಥ ಟೂತ್ ಪೇಸ್ಟ್‌ಗಳು ಇರಲಿಲ್ಲ. ಆದರೂ ಅವರ ಹಲ್ಲುಗಳು ಗಟ್ಟಿಮುಟ್ಟಾಗಿದ್ದವು. 80 ದಾಟಿದವರು ಕೂಡ, ಕಡಲೆ ಕಾಳು ತಿನ್ನುವಷ್ಟು ಅವರ ಹಲ್ಲು ಗಟ್ಟಿಮುಟ್ಟಾಗಿತ್ತು. ಆದ್ರೆ ಇಂದಿನ ಕಾಲದಲ್ಲಿ ಸಣ್ಣ ವಯಸ್ಸಿನಲ್ಲೇ ಹಲ್ಲು ಹುಳುಕು ಹಿಡಿಯುತ್ತೆ. 50ಕ್ಕೆ ಹಲ್ಲು ಮುರಿಯಲು ಶುರುವಾಗತ್ತೆ.
ಹಾಗಾದ್ರೆ ಹಿಂದಿನ ಕಾಲದವರು ಏನು ಬಳಸುತ್ತಿದ್ದರು ಅಂತಾ ಹೇಳಿದ್ರೆ, ಬೇವಿನ ಗಿಡದ ಕಡ್ಡಿ, ಕರೀಜಾಲಿ ಗಿಡದ ಕಡ್ಡಿ. ಇವೆರಡರಲ್ಲಿ ಒಂದರ ಕಡ್ಡಿಯಿಂದ ಹಲ್ಲು ಉಜ್ಜಿದ್ರೂ, ನಿಮ್ಮ ಹಲ್ಲು ಗಟ್ಟಿಮುಟ್ಟಾಗತ್ತೆ. ಮತ್ತೆ ಕೆಲವರು ಹಲ್ಲು ಬಿಳಿಯಾಗಿರಿಸಲು, ಈಗಾಗಲೇ ಬಳಸಿರುವ ನಿಂಬೆ ಹಣ್ಣು ಮತ್ತು ದಪ್ಪ ಉಪ್ಪನ್ನು ಸೇರಿಸಿ, ಹಲ್ಲುಜ್ಜುತ್ತಾರೆ.
ಇನ್ನು ಯಾಕೆ ಹಲ್ಲುಜ್ಜುವಾಗ ಪೇಸ್ಟ್ ಬಳಸಬಾರದು ಅಂದ್ರೆ, ಬಟ್ಟೆ ಒಗೆಯುವ ಪೌಡರ್ ಮತ್ತು ಸೋಪ್‌ನಲ್ಲಿ ಬಳಸುವ ಕೆಮಿಕಲನ್ನು, ಪೇಸ್ಟ್‌ನಲ್ಲಿ ಬಳಸುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ಪೇಸ್ಟ್ ಬಳಸಿ ಹಲ್ಲುಜ್ಜಬಾರದು ಅಂತಾ ಹೇಳಲಾಗಿದೆ.