Sunday, September 8, 2024

Latest Posts

ನಿಮ್ಮ ಪಿತೃಗಳು ಸಂತುಷ್ಟರಾಗಿದ್ದಾರೋ ಇಲ್ಲವೋ ಅಂತಾ ತಿಳಿಯೋದು ಹೇಗೆ..?

- Advertisement -

ನಮ್ಮನ್ನಗಲಿ ಹೋದವರನ್ನು ಪಿತೃಗಳು ಅಂತಾ ಕರೆಯಲಾಗುತ್ತದೆ. ಅವರಿಗಾಗಿ ನಾವು ತಿಥಿ, ಶ್ರಾದ್ಧಗಳನ್ನು ಮಾಡುತ್ತೇವೆ. ಮತ್ತು ದೇವರಿಗೆ, ಕಾಗೆಗೆ, ಆಕಳಿಗೆ ನೈವೇದ್ಯವನ್ನು ಅರ್ಪಿಸಿ, ಅನ್ನ ಸಂತರ್ಪಣೆ ಮಾಡುತ್ತೇವೆ. ನಾವು ಇಷ್ಟೆಲ್ಲ ಮಾಡಿದರೂ ಕೂಡ, ನಮ್ಮ ಪಿತೃಗಳು ಸಂತುಷ್ಟರಾಗಿದ್ದಾರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ನಿಮ್ಮ ಪಿತೃಗಳು ಕನಸಿನಲ್ಲಿ ಬಂದು ನಿಮ್ಮನ್ನು ಎಚ್ಚರಿಸಿ ಹೋಗುತ್ತಾರೆಂದು ಹಿಂದೂ ಧರ್ಮದಲ್ಲಿ ನಂಬಿಕೆ ಇದೆ. ಕನಸ್ಸಿನಲ್ಲಿ ನಿಮ್ಮ ಪಿತೃಗಳು ನಿಮ್ಮ ಮುಂದೆ ನಿಂತ ಹಾಗೆ ಕಂಡರೆ, ನಿಮಗೇನೋ ಸಂಕಟ ಎದುರಾಗಲಿದೆ ಎಂದರ್ಥ. ಯಾರದ್ದಾದರೂ ನೆರಳು ನಿಮ್ಮ ಬಳಿ ಬಿದ್ದಿರುವಂಥ ಕನಸ್ಸನ್ನು ನೀವು ಕಂಡರೆ, ನಿಮ್ಮ ಪೂರ್ವಜರು ನಿಮ್ಮ ಬಗ್ಗೆ ಸಂತುಷ್ಟರಾಗಿದ್ದಾರೆಂದು ಅರ್ಥ. ಇನ್ನು ನಿಮ್ಮ ತಲೆ ಸವರುವಂತೆ ಕನಸ್ಸು ಬಿದ್ರೆ, ಇದೂ ಅವರು ಸಂತುಷ್ಟರಾಗಿದ್ದಾರೆಂದು ತಿಳಿಸುತ್ತದೆ.

ಇನ್ನು ನೀವು ನಿಮ್ಮ ಪೂರ್ವಜರ ಶ್ರಾದ್ಧ ಕಾರ್ಯ ಮಾಡಿರುತ್ತೀರಿ. ಕಾಗೆಗೆ ಊಟವನ್ನ ನೈವೇದ್ಯವನ್ನಾಗಿ ಇಟ್ಟಿರುತ್ತೀರಿ. ಆಗ ಕಾಗೆ ಬಂದು, ಆ ಪ್ರಸಾದವನ್ನು ಸ್ವೀಕರಿಸಿದರೆ, ನಿಮ್ಮ ಪೂರ್ವಜರು ಸಂತುಷ್ಟರಾಗಿದ್ದಾರೆಂದು ಅರ್ಥ. ಆದ್ರೆ ಆ ಊಟವನ್ನು ತಿನ್ನಲು ಕಾಗೆ ಬರದಿದ್ದಲ್ಲಿ, ಅಥವಾ ಕಾಗೆ ಬಂದು ಮೂಸಿ ನೋಡಿ ಹಾಗೆ ಹೋದಲ್ಲಿ, ನಿಮ್ಮ ಪಿತೃಗಳು ನಿಮ್ಮಿಂದ ಸಂತುಷ್ಟರಾಗಲಿಲ್ಲವೆಂದು ಅರ್ಥ. ಹಾಗಾಗಿ ಶುದ್ಧ ಮನಸ್ಸಿನಿಂದ ಶ್ರಾದ್ಧ ಮಾಡಬೇಕು.

- Advertisement -

Latest Posts

Don't Miss