Wednesday, January 15, 2025

Latest Posts

ಮೊದಲು ಪಾನೀಪುರಿ ತಯಾರಿಸಿದ್ದು ಮಹಾಭಾರತದ ಈ ಹೆಣ್ಣು ಮಗಳು..

- Advertisement -

ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಮಕ್ಕಳಿಂದ ಹಿಡಿದು, ಮುದುಕರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ ಪಾನೀಪುರಿ ತಿನ್ನುತ್ತಾರೆ. ಅಷ್ಟು ಟೇಸ್ಟಿ ತಿಂಡಿ ಅದು. ಫುಡ್ ಸ್ಟ್ರೀಟ್ನಲ್ಲಿ ಪಾನೀಪುರಿ ಇಲ್ಲದಿದ್ದರೆ, ಅದಕ್ಕೆ ಅರ್ಥಾನೇ ಇಲ್ಲಾ ಬಿಡಿ. ಅಷ್ಟು ಬೇಡಿಕೆಯಲ್ಲಿರುವ ಚಾಟ್ ಅದು. ಅಂಥ ಟೇಸ್ಟಿ ಚಾಟ್ ಮಹಾಭಾರತ ಕಾಲದಲ್ಲೇ ತಯಾರಾಗಿದ್ದು ಅಂದ್ರೆ ನೀವು ನಂಬಲೇಬೇಕು. ಹಾಗಾದ್ರೆ ಮಹಾಭಾರತದಲ್ಲಿ ಪಾನೀಪುರಿಯನ್ನು ತಯಾರಿಸಿದ ಹೆಣ್ಣು ಮಗಳು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದ್ರೌಪದಿ ಪಾಂಡವರನ್ನು ವಿವಾಹವಾದಾಗ, ಪಾಂಡವರು ಮತ್ತು ಕುಂತಿ ವನವಾಸದಲ್ಲಿದ್ದರು. ಆಗ ಕುಂತಿ ಸೊಸೆಯನ್ನು ಪರೀಕ್ಷಿಸಬೇಕು, ಈಕೆಗೆ ಮನೆ ಜವಾಬ್ದಾರಿ ಕೊಟ್ಟರೆ ಹೇಗೆ ನಿಭಾಯಿಸುತ್ತಾಳೆ ಎಂದು ಪರೀಕ್ಷಿಸಲು ಮುಂದಾಗುತ್ತಾಳೆ. ಮಿಕ್ಕಿದ ಬಟಾಟೆ ಸಾಗು ಮತ್ತು ಚಿಕ್ಕ ತುಂಡು ಚಪಾತಿ ಹಿಟ್ಟನ್ನು ದ್ರೌಪದಿಗೆ ಕೊಟ್ಟು, ಇದರಿಂದ ಸ್ವಾದಿಷ್ಟ ಮತ್ತು ಪಾಂಡವರ ಹೊಟ್ಟೆ ತುಂಬುವಂಥ ತಿಂಡಿಯನ್ನು ತಯಾರಿಸು ಎಂದು ಹೇಳಿದಳಂತೆ.

ಆಗ ದ್ರೌಪದಿ, ಇಷ್ಟು ಕಡಿಮೆ ಸಾಮಗ್ರಿಯಲ್ಲಿ ಹೇಗೆ ಸ್ವಾದಿಷ್ಟ ಮತ್ತು ಹೊಟ್ಟೆ ತುಂಬುವ ತಿಂಡಿಯನ್ನು ತಯಾರಿಸಬೇಕು ಎಂದು ಯೋಚಿಸಿ, ಪಾನೀಪುರಿ ಮಾಡಬೇಕೆಂದು ನಿರ್ಧರಿಸಿದಳಂತೆ. ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿ ಮಾಡಿದಳು. ಸಾಗು ಸ್ವಲ್ಪವಿದ್ದ ಕಾರಣ, ಖಾರಾ ನೀರು ಮಾಡಿ, ಅದನ್ನು ಪಾನೀಪುರಿಗೆ ಸೇರಿಸಿ, ನೀಡಿದಳು.

ಇದನ್ನು ತಿಂದ ಕುಂತಿ, ಮತ್ತು ಪಾಂಡವರು ಖುಷಿಯಾಗಿ, ಹೊಗಳಿದರು. ಇದು ಅತ್ಯಂತ ರುಚಿಕರ ಖಾದ್ಯವಾಗಿದೆ. ಈ ಖಾದ್ಯ ಪ್ರಪಂಚದೆಲ್ಲೆಡೆ ಪ್ರಸಿದ್ಧವಾಗಲಿ ಎಂದು ಕುಂತಿದೇವಿ ಹಾರೈಸಿದಳು ಅಂತಾ ಹೇಳಲಾಗತ್ತೆ.

- Advertisement -

Latest Posts

Don't Miss