Friday, July 4, 2025

Latest Posts

ಶ್ರೀಕೃಷ್ಣ ನವಿಲು ಗರಿ ಧರಿಸಲು ಕಾರಣವೇನು..?

- Advertisement -

ಶ್ರೀಕೃಷ್ಣನಷ್ಟು ಸುಂದರ ದೇವರು ಹಿಂದೂ ಧರ್ಮದಲ್ಲಿ ಮತ್ತೊಬ್ಬರಿಲ್ಲ. ಶ್ರೀವಿಷ್ಣುವಿನ ಅವತಾರವಾಗಿರುವ ಶ್ರೀಕೃಷ್ಣನಿಗೆ ಹೇಳಲು ಸಾಧ್ಯವಾಗದಷ್ಟು ಭಕ್ತಗಣಗಳಿದೆ. ಅಷ್ಟು ಸುಂದರ ಈ ಬಾಲಗೋಪಾಲ. ಶ್ರೀಕೃಷ್ಣನ ಅಲಂಕಾರವನ್ನು ದುಪ್ಪಟ್ಟು ಮಾಡುವ ಒಡವೆ ಅಂದ್ರೆ ನವಿಲು ಗರಿ. ಹಾಗಾದ್ರೆ ಕೃಷ್ಣ ನವಿಲು ಗರಿ ತೊಡಲು ಕಾರಣವೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನವಿಲು ತನ್ನ ಗರಿಯನ್ನು ಬೇಸಿಗೆ ಶುರುವಾಗುವ ಸಮಯದಲ್ಲಷ್ಟೇ ಬೀಳಿಸುತ್ತದೆ. ಆದ್ರೆ ಬೇರೆ ಯಾವ ಕಾಲದಲ್ಲೂ ನವಿಲು ತನ್ನಿಚ್ಛೆಗೆ ವಿರುದ್ಧವಾಗಿ ಗರಿಯನ್ನು ಬೀಳಿಸುವುದಿಲ್ಲ. ಹಾಗೆ ಮಾಡಿದರೆ, ಅದರ ಪ್ರಾಣ ಹೋಗುತ್ತದೆ. ಆದ್ರೆ ಶ್ರೀರಾಮನಲ್ಲಿ ಭಕ್ತಿ ಹೊಂದಿದ ನವಿಲೊಂದು ಶ್ರೀರಾಮನಿಗಾಗಿ ತನ್ನ ಜೀವವನ್ನೇ ಒತ್ತೆ ಇಟ್ಟು, ಶ್ರೀರಾಮನಿಗೆ ಕೊಳದ ದಾರಿ ತೋರಿದ ಕಥೆ ಪುರಾಣದಲ್ಲಿ ಸಿಗುತ್ತದೆ.

ಒಮ್ಮೆ ರಾಮ ಸೀತೆ ವನವಾಸದಲ್ಲಿದ್ದಾಗ, ಸೀತೆಗೆ ಬಾಯಾರಿಕೆಯಾಗುತ್ತದೆ. ಆಗ ರಾಮ ವನದೇವತೆಯಲ್ಲಿ ನೀರಿನ ಕೊಳವಿರುವ ದಾರಿ ತೋರಿಸು ಎಂದು ಬೇಡುತ್ತಾನೆ. ಆಗ ನವಿಲೊಂದು ಹಾರಿ ಬಂದು, ನಾನು ನಿಮಗೆ ಕೊಳವಿರುವ ಜೊಗಕ್ಕೆ ಕರೆದೊಯ್ಯುತ್ತೇನೆ. ನಾನು ಹಾರುತ್ತ ಹೋದಂತೆ, ನನ್ನ ನವಿಲು ಗರಿಗಳು ಕೆಳಗೆ ಬೀಳುತ್ತದೆ. ಅದು ಬಿದ್ದ ಜಾಗದಲ್ಲಿ ನೀವು ನಡೆದು ಬಂದರೆ, ನಿಮಗೆ ಕೊಳ ಸಿಗುತ್ತದೆ ಎಂದು ಹೇಳುತ್ತದೆ.

ನವಿಲಿಗೆ ಧನ್ಯವಾದ ಹೇಳಿದ ರಾಮ, ಅದನ್ನ ಹಿಂಬಾಲಿಸಿ ಹೋಗುತ್ತಾನೆ. ಅವನಿಗೆ ಕೊಳ ಸಿಗುತ್ತದೆ. ಸೀತೆ ನೀರು ಕುಡಿದು ತನ್ನ ದಾಹ ತೀರಿಸಿಕೊಳ್ಳುತ್ತಾಳೆ. ಆದರೆ ರಾಮನಿಗಾಗಿ ಹಾರಿ ತನ್ನ ನವಿಲು ಗರಿಯನ್ನು ಬೀಳಿಸಿಕೊಂಡಿದ್ದ ನವಿಲು ಸಾಯುವ ಸ್ಥಿತಿಗೆ ತಲುಪಿತ್ತು. ಅದನ್ನು ನೋಡಿ ರಾಮ-ಸೀತೆಗೆ ದುಃಖವಾಗುತ್ತದೆ. ತಮಗಾಗಿ ನವಿಲು ಜೀವದಾನ ಮಾಡಿದ್ದಕ್ಕಾಗಿ, ಮುಂದಿನ ಜನ್ಮದಲ್ಲಿ ಅದರ ಋಣ ತೀರಿಸುವ ಸಲುವಾಗಿ, ಕೃಷ್ಣಾವತಾರಿಯಾಗಿ ನವಿಲು ಗರಿಯನ್ನು ಧರಿಸುತ್ತಾನೆ.

- Advertisement -

Latest Posts

Don't Miss