ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳಿದೆ. ಆಯಾ ದೇವಸ್ಥಾನಕ್ಕೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಉಡುಪಿ, ಕುಂದಾಪುರ, ದಕ್ಷಿಣ ಕನ್ನಡದಲ್ಲಿ ಹಲವಾರು ದೇವಸ್ಥಾನಗಳಿದ್ದು, ಹಲವು ಪ್ರಸಿದ್ಧ ಕ್ಷೇತ್ರಗಳಿದೆ. ಇಂದು ಉಡುಪಿಯ ಪೆರ್ಡೂರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?
ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಇರುವುದು ಉಡುಪಿಯ ಪೆರ್ಡೂರಿನಲ್ಲಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಬೇಕು ಎಂದಲ್ಲಿ, ನೀವು ಈ ದೇವರಿಗೆ ಬಾಳೆಹಣ್ಣಿನ ನೈವೇದ್ಯ ಮಾಡಿದ್ರೆ ಸಾಕು. ಭಕ್ತರ ಬೇಡಿಕೆ ಈಡೇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇದನ್ನು ಬಾಳೆಹಣ್ಣು ಹರಕೆಯ ದೇವಸ್ಥಾನ ಅಂತಲೂ ಕರೆಯುತ್ತಾರೆ.
ಇಲ್ಲಿ ಪ್ರತಿವರ್ಷ ಮಧುಮಕ್ಕಳ ಜಾತ್ರೆ ನಡೆಯುತ್ತದೆ. ಹೊಸತಾಗಿ ಮದುವೆಯಾದ ವಧು ವರರು ಇಲ್ಲಿಗೆ ಬಂದು ದೇವರ ಆಶೀರ್ವಾದ ಪಡೆದು ಹೋಗುತ್ತಾರೆ. ಇದರ ಇತಿಹಾಸದ ಬಗ್ಗೆ ಹೇಳುವುದಾದರೆ, ಒಮ್ಮೆ ಒಂದು ಹಸುವು ಹಾವಿನ ಹುತ್ತಕ್ಕೆ ತಾನಾಗಿಯೇ ಹಾಲು ಹಾಕುತ್ತಿತ್ತು. ಇದನ್ನು ಕಂಡ ಓರ್ವ ಬಾಲಕ ಪೇರುಂಡು ಪೇರುಂಡು ಎಂದು ಕೂಗಿದ. ಪೇರುಂಡು ಎಂದರೆ ತುಳು ಭಾಷೆಯಲ್ಲಿ ಹಾಲು ಉಂಟು ಎಂದರ್ಥ.
ಮಾಂಸಾಹಾರವನ್ನು ನೈವೆದ್ಯವಾಗಿ ಸ್ವೀಕರಿಸುವ ದೇವರು..!
ಹಾಗಾಗಿ ಈ ಊರನ್ನು ಪೇರುಂಡ ಊರು ಎಂದು ಕರೆಯಲಾಗುತ್ತಿತ್ತು. ನಂತರ ಪೇರ್ಡೂರು ಎಂದು ಕರೆಯಲಾಯಿತು. ಹುತ್ತಕ್ಕೆ ಹಸು ಹಾಲೆರೆದೆ ಜಾಗದಲ್ಲೇ ಅನಂತ ಪದ್ಮನಾಭ ಸ್ವಾಮಿ ನೆಲೆ ನಿಂತಿದ್ದಾನೆಂದು ಹೇಳಲಾಗಿದೆ. ಅವಿವಾಹಿತರು, ಮಕ್ಕಳಾಗದವರು, ಅನಾರೋಗ್ಯದಿಂದ ಬಳಲುತ್ತಿರುವವರು ಇಲ್ಲಿ ಬಾಳೆಹಣ್ಣಿನ ಹರಕೆ ತೀರಿಸಿದ್ದಲ್ಲಿ, ಬೇಗ ಅವರ ಇಷ್ಟಾರ್ಥ ಈಡೇರುತ್ತದೆ ಅನ್ನೋ ನಂಬಿಕೆ ಇದೆ.